ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಆಗಸ್ಟ್ 2020
ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶಿವಮೊಗ್ಗದಲ್ಲಿ ವಿಭಿನ್ನವಾಗಿ ಕರೋನ ಜಾಗೃತಿ ಮೂಡಿಸಲಾಯಿತು. ಕರೋನ ತೊಲಗಲಿ ಎಂಬ ಸಂಕಲ್ಪದೊಂದಿಗೆ ಮಾಸ್ಕ್ ವಿತರಿಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಬ್ಬದ ಖರೀದಿಗಾಗಿ ಗಾಂಧಿ ಬಜಾರ್‍ಗೆ ಬಂದಿದ್ದ ಮಹಿಳೆಯರಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಅರಿಶಿಣ, ಕುಂಕುಮ, ಹೂವಿನ ಜೊತೆಗೆ ಮಾಸ್ಕ್ ವಿತರಿಸಲಾಯಿತು.
‘ಎರಡು ಸಾವಿರ ಮಾಸ್ಕ್ ಹಂಚಲಾಗುತ್ತಿದೆ. ಈ ಪೈಕಿ ಒಂದೂವರೆ ಸಾವಿರ ಮಾಸ್ಕ್‍ಗಳನ್ನು ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮನೆಯಲ್ಲಿ ಹೊಲೆದು ತಂದಿದ್ದಾರೆ. ಐನೂರು ಮಾಸ್ಕ್‍ಗಳನ್ನು ದಾನಿಯೊಬ್ಬರು ನೀಡಿದ್ದಾರೆ’ ಎಂದು ಉಪ ಮೇಯರ್ ಸುರೇಖಾ ಮುರಳೀಧರ್ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]