ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಜುಲೈ 2020
ಶಿವಮೊಗ್ಗದಲ್ಲಿ ಆರಂಭವಾಗಿರುವ ಹುಕ್ಕಾ ಬಾರನ್ನು ತಕ್ಷಣದಿಂದಲೇ ಬಂದ್ ಮಾಡಿಸಬೇಕು. ಲೈಸೆನ್ಸ್ ಅನ್ನು ಕೂಡಲೇ ಕ್ಯಾನ್ಸಲ್ ಮಾಡಬೇಕು ಅಂತಾ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೋನ ನಿಯಂತ್ರಣ ಸಂಬಂಧ ಶಿವಮೊಗ್ಗದ ವಿವಿಧ ಸಂಘ, ಸಂಸ್ಥೆಗಳ ಜೊತೆಗೆ ಆಯೋಜಿಸಿದ್ದ ಸಭೆಯಲ್ಲಿ ಸಚಿವ ಈಶ್ವರಪ್ಪ ಈ ಆದೇಶ ನೀಡಿದರು.
ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ವಸಂತಕುಮಾರ್ ಅವರು, ಗೋಪಾಳದಲ್ಲಿ ಹುಕ್ಕಾ ಬಾರ್ ತೆರೆಯಲಾಗಿದೆ. ರಾತ್ರಿಯೆಲ್ಲ ದೊಡ್ಡ ಸಂಖ್ಯೆಯಲ್ಲಿ ಯುವಕರು ಅಲ್ಲಿಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಅವೆಲ್ಲ ಬೇಕಾ ಎಂದು ಪ್ರಶ್ನಿಸಿದರು.
ನೀವು ಟ್ರೈ ಮಾಡಬೇಡಿ ಸರ್
ಹುಕ್ಕಾ ಬಾರ್ ಅಂದಾಕ್ಷಣ ಸಚಿವ ಕೆ.ಎಸ್.ಈಶ್ವರಪ್ಪ ತಬ್ಬಿಬ್ಬಾದರು. ಏನ್ರಿ ಅದು ಹುಕ್ಕಾ ಬಾರ್ ಎಂದು ಪ್ರಶ್ನಿಸಿದರು. ಆಗ ಸಭೆಯಲ್ಲಿದ್ದ ಸಂಘ ಸಂಸ್ಥೆಯ ಪ್ರತಿನಿಧಿಗಳು ನೀವು ಆ ಬಗ್ಗೆ ತಿಳಿದುಕೊಳ್ಳಬೇಡಿ. ಅದನ್ನು ಟ್ರೈ ಮಾಡೋಕೂ ಹೋಗಬೇಡಿ ಎಂದರು.
ಈಗಲೇ ಲೈಸೆನ್ಸ್ ಕ್ಯಾನ್ಸಲ್ ಮಾಡಿ
ಕೂಡಲೇ ಹುಕ್ಕಾ ಬಾರನ್ನು ಬಂದ್ ಮಾಡಿ ಎಂಸು ಸಚಿವ ಈಶ್ವರಪ್ಪ ಸೂಚನೆ ನೀಡಿದರು. ಅದಕ್ಕೆ ನೀಡಿರುವ ಲೈಸೆನ್ಸನ್ನು ಕ್ಯಾನ್ಸಲ್ ಮಾಡಬೇಕು. ಇವತ್ತೇ ತಕ್ಷಣಕ್ಕೆ ಹೋಗಿ ಅದನ್ನು ಬಂದ್ ಮಾಡಿ ಎಂದು ಆದೇಶಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]