ಅಧಿಕಾರಿಗಳಿಗೆ ಶಿವಮೊಗ್ಗ ಎಂಎಲ್‌ಎಯಿಂದ ಮೂರು ಪ್ರಮುಖ ಸೂಚನೆ, ಏನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 21 JUNE 2023

SHIMOGA : ಮಳೆ ಹಾನಿ ತಡೆಗಟ್ಟುವುದು, ಮುನ್ನೆಚ್ಚರಿಕೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆಯಲು ಶಾಸಕ ಎಸ್‌.ಎನ್.ಚನ್ನಬಸಪ್ಪ ಅಧಿಕಾರಿಗಳ ಸಭೆ (Meeting) ನಡೆಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ 3 ಪ್ರಮುಖ ಸೂಚನೆ ನೀಡಿದರು.

MLA-SN-Channabasappa-in-Officers-Meeting-in-Shimoga

ಏನದು ಮೂರು ಸೂಚನೆ

1ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗುತ್ತಿಲ್ಲ ಎಂದು ಸಾರ್ವಜನಿಕರು ಶಾಸಕರ ಬಳಿ ಬರುವಂತಿರಬಾರದು. ಕಚೇರಿಗೆ ಬಂದ ಜನರಿಗೆ ಕಾರಣ ಹೇಳಿ ಕಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ. ತಿಂಗಳುಗಟ್ಟಲೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ಜನರು ನನ್ನ ಬಳಿ ಬರುತ್ತಿದ್ದಾರೆ. ಇದು ತಪ್ಪಬೇಕು.

MLA SN Channabasappa Held meeting with officers in Shimoga

2ನಗರದಲ್ಲಿ ನಾಗರಿಕರಿಗೆ ಅನುಕೂಲ ಆಗುವ ಹಾಗೆ ಕೆಲಸ ಮಾಡೋಣ. ಹೇಗೋ ಮ್ಯಾನೇಜ್‌ ಮಾಡಿದರಾಯಿತು ಅನ್ನಲು ಅಧಿಕಾರಿಗಳು ಮ್ಯಾನೇಜರ್‌ಗಳಲ್ಲ. ಅಧಿಕಾರಿಗಳು ಯಾವುದೆ ಕಾರಣ ಹೇಳದೆ ಜನರ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಸೂಚಿಸಿದರು.

parishrama neet academy

3ಇಲಾಖೆಗಳ ಮಧ್ಯೆ ಸಮನ್ವಯ ಇದ್ದರೆ ಜನರ ಕೆಲಸಗಳು ಸುಲಭವಾಗಿ ನಡೆಯಲಿದೆ. ಕೆಲವು ಸಿಬ್ಬಂದಿಯಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಕಪ್ಪು ಚುಕ್ಕೆ ತರುವ ಅಧಿಕಾರಿಗಳ ವಿರುದ್ಧ ನಿಗಾ ಇರಲಿ. ಸಮಸ್ಯೆಯನ್ನು ಇನ್ನೊಬ್ಬರ ಮೇಲೆ ಹಾಕುವುದರಿಂದ ಪ್ರಯೋಜನವಿಲ್ಲ.

ಇದನ್ನೂ ಓದಿ – ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದಾಗಲೆ ವರುಣ ಪ್ರತ್ಯಕ್ಷ, ಶಿವಮೊಗ್ಗದಲ್ಲಿ ಕಪಿಲೇಶ್ವರನ ಪವಾಡ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment