SHIVAMOGGA LIVE| 24 JUNE 2023
SHIMOGA : ಜಿಲ್ಲೆಯ ಮೊದಲ ಮಲ್ಟಿ ಲೆವೆಲ್ ಪಾರ್ಕಿಂಗ್ (Multi Level Parking) ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರಿಂದ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿನ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.
ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಮುಂಭಾಗ ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 10 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. ಇದರಿಂದ ಬಿ.ಹೆಚ್.ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಹೇಗಿದೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ?
ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ಬೇಸ್ಮೆಂಟ್ ಮತ್ತು ನಾಲ್ಕು ಅಂತಸ್ತು ಹೊಂದಿದೆ. ಈ ಪೈಕಿ ನಾಲ್ಕು ಅಂತಸ್ತಿನಲ್ಲಿ ಮಾತ್ರ ಪಾರ್ಕಿಂಗ್ಗೆ ಅವಕಾಶವಿದೆ.
118 ಮಳಿಗೆ ನಿರ್ಮಾಣ
ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ (Multi Level Parking) ಕಟ್ಟಡ ನಿರ್ಮಾಣಕ್ಕು ಮೊದಲು ಇಲ್ಲಿ ಹೂವು,ಹಣ್ಣು, ತರಕಾರಿ ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳಿದ್ದವು. ಕಟ್ಟಡ ನಿರ್ಮಾಣಕ್ಕಾಗಿ ಅವರನ್ನು ತಾತ್ಕಾಲಿಕವಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಶಿಫ್ಟ್ ಮಾಡಲಾಗಿತ್ತು. ಈ ಮೊದಲೆ ಭರವಸೆ ನೀಡಿದಂತೆ ಆ ವ್ಯಾಪಾರಿಗಳಿಗೆ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಒಂದೇ ಅಳತೆಯ 118 ಮಳಿಗೆ ನಿರ್ಮಿಸಲಾಗಿದೆ.
ಮಳಿಗೆಗಳು ಪ್ರತ್ಯೇಕವಾಗಿದ್ದು, ರೋಲಿಂಗ್ ಶಟರ್ಗಳನ್ನು ಹೊಂದಿವೆ. ಗ್ರಾಹಕರು ಬಂದು ಹೋಗಲು ಸೂಕ್ತ ಸ್ಥಳವಕಾಶ, ಗಾಳಿ, ಬೆಳಕಿನ ವ್ಯವಸ್ಥೆ ಇದೆ.
ಬೇಸ್ಮೆಂಟ್ನಲ್ಲಿ ಬೈಕ್ ಪಾರ್ಕಿಂಗ್
ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಬೈಕ್ ಪಾರ್ಕಿಂಗ್ಗೆ ಪ್ರತ್ಯೇಕ ಸ್ಥಳವಿದೆ. ಕಟ್ಟಡದ ಬೇಸ್ಮೆಂಟ್ನಲ್ಲಿ ಸುಮಾರು 80 ಬೈಕ್ ನಿಲ್ಲಿಸಲು ಅವಕಾಶವಿದೆ. ಬೈಕುಗಳು ಪಾರ್ಕಿಂಗ್ ಸ್ಥಳದ ಒಳಗೆ ಹೋಗಲು ಮತ್ತು ಹೊರ ಬರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಮೂರು ಮಹಡಿಯಲ್ಲಿ ಕಾರ್ ಪಾರ್ಕಿಂಗ್
ಕಟ್ಟಡದ ಮೊದಲ ಮಹಡಿಯಿಂದ ಮೂರನೆ ಮಹಡಿವರೆಗೆ ಕಾರ್ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. 172 ಕಾರುಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ. ಪ್ರತಿ ಕಾರಿಗು ನಿರ್ದಿಷ್ಟ ಸ್ಥಳ ನಿಗದಿ ಮಾಡಲಾಗುತ್ತದೆ.
ಕಾರುಗಳು ಕಟ್ಟಡದೊಳಗೆ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನು, ಒಂದು ಫ್ಲೋರ್ನಿಂದ ಮತ್ತೊಂದು ಫ್ಲೋರ್ಗೆ ಕಾರುಗಳು ಸುಲಭವಾಗಿ ಹೋಗಿ ಬರಲು ಇಳಿಜಾರು ಮಾಡಲಾಗಿದೆ.
ವಾಹನಗಳಿಗೆ ಸುರಕ್ಷತೆ, ಮಳೆ ಕೊಯ್ಲು
ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ಅಗತ್ಯ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ಸಬ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ಸೇಫ್ಟಿ ವ್ಯವಸ್ಥೆ ಮಾಡಲಾಗಿದೆ. ಇನ್ನು ತುರ್ತು ಸಂದರ್ಭ ಸ್ವಯಂ ಚಾಲಿತ ಸೆನ್ಸರ್ ಆಧಾರಿತ ಫೈರ್ ಸೇಫ್ಟಿ ಇದೆ. ಇವುಗಳ ಪರೀಕ್ಷೆ ಮಾಡಲಾಗಿದೆ.
ಇನ್ನು, ಕಾರು ಪಾರ್ಕಿಂಗ್ ಮಾಡಿದವರು ಕಟ್ಟಡದ ಮೇಲೆ, ಕೆಳಗೆ ಹೋಗಿ ಬರಲು ಲಿಫ್ಟ್ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದೆ.
ಈ ಕಟ್ಟಡದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಇದೆ. ಮಳೆ ನೀರನ್ನು ಪ್ರತ್ಯೇಕವಾಗಿ ಟ್ಯಾಂಕ್ನಲ್ಲಿ ಸಂಗ್ರಹಿಸಿ, ಬಳಕೆ ಮಾಡಲಾಗುತ್ತದೆ. ಕಟ್ಟಡದ ಪಕ್ಕದಲ್ಲಿ ಮಹಾನಗರ ಪಾಲಿಕೆಗೆ ಹೊಂದಿಕೊಂಡಂತೆ ದೊಡ್ಡ ಟ್ಯಾಂಕ್ ನಿರ್ಮಿಸಲಾಗಿದೆ. 2.5 ಲಕ್ಷ ಲೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.
25 ಕೋಟಿ ರೂ. ವೆಚ್ಚ
10 ಸಾವಿರ ಚದರ ಅಡಿಯಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ. 2021ರ ಜನವರಿಯಲ್ಲಿ ಆರಂಭವಾದ ಕಾಮಗಾರಿ ಈಗ ಕೊನೆಯ ಹಂತಕ್ಕೆ ತಲುಪಿದೆ.
25 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಇದು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಕಾರ್ ಮತ್ತು ಬೈಕ್ ಪಾರ್ಕಿಂಗ್ಗೆ ಪ್ರತ್ಯೇಕ ದರ ನಿಗದಿಯಾಗಲಿದೆ. ಮಹಾನಗರ ಪಾಲಿಕೆ ವತಿಯಿಂದ ಇದರ ನಿರ್ವಹಣೆ ಮಾಡಲಾಗುತ್ತದೆ.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ