SHIVAMOGGA LIVE NEWS | 17 ಮಾರ್ಚ್ 2022
ಮುಸ್ಲಿಂ ಒಕ್ಕೂಟಗಳು ರಾಜ್ಯಾದ್ಯಂತ ಬಂದ್’ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಸಮುದಾಯ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದೆ.
ಶಿವಮೊಗ್ಗ ನಗರದಾದ್ಯಂತ ಮುಸ್ಲಿಂ ಸಮುದಾಯದವರ ಒಡೆತನದ ಅಂಗಡಿಗಳು, ಉದ್ಯಮಗಳನ್ನು ಬಂದ್ ಮಾಡಲಾಗಿದೆ.
ಎಲ್ಲೆಲ್ಲಿ ಹೇಗಿದೆ ಬಂದ್?
ಶಿವಮೊಗ್ಗದ ಕೆ.ಆರ್.ಪುರಂ, ಎಂಕೆಕೆ ರಸ್ತೆ, ಕಸ್ತೂರ ಬಾ ರಸ್ತೆ, ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ಬೈಪಾಸ್ ರಸ್ತೆ, ಮಂಡ್ಲಿಯಿಂದ ಆಲ್ಕೊಳ ಸಂಪರ್ಕಿಸುವ ಬೈಪಾಸ್ ಸೇರಿದಂತೆ ನಗರಾದ್ಯಂತ ಅಂಗಡಿಗಳು ಬಂದ್ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಬಂದ್
ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಬಂದ್’ಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದವರ ಒಡೆತನದ ಅಂಗಡಿಗಳು, ಉದ್ಯಮಗಳನ್ನು ಬಂದ್ ಮಾಡಲಾಗಿದೆ. ಶಿರಾಳಕೊಪ್ಪ ಮುಖ್ಯ ರಸ್ತೆ ಬಹುತೇಕ ಬಂದ್ ಆಗಿದೆ. ಉಳಿದಂತೆ ಜಿಲ್ಲೆಯಾದ್ಯಂತ ಇದೆ ಪರಿಸ್ಥಿತಿ ಇದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200