ಶಿವಮೊಗ್ಗದಲ್ಲಿ ವೆರೈಟಿ ರೇಷ್ಮೆ ಸೀರೆಗಳು, ಒಂದೂವರೆ ಲಕ್ಷದ ಮೈಸೂರು ಸಿಲ್ಕ್‌ ಸೀರೆ ಖರೀದಿಸಿದ ದಂಪತಿ

Published On : ಜನವರಿ 25, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಕರಕುಶಲ ಉತ್ಸವದಲ್ಲಿ ರೇಶ್ಮೆ ಸೀರೆ ಖರೀದಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ. ಬೆಳೆಗೆಯಿಂದಲೆ ಮೈಸೂರು ಸಿಲ್ಕ್ಸ್‌ಗೆ (mysore silk) ಭಾರಿ ಡಿಮಾಂಡ್‌ ಸೃಷ್ಟಿಸಯಾಗಿದೆ. ಮೇಳಕ್ಕೆ ಚಾಲನೆ ಸಿಕ್ಕ ಕೆಲವೇ ಹೊತ್ತಿಗೆ ಮಹಿಳೆಯೊಬ್ಬರು ಒಂದು ಲಕ್ಷ ರುಪಾಯಿವರೆಗೆ ಪಾವತಿಸಿ ಸೀರೆ ಖರೀದಿಸಿ ಗಮನ ಸೆಳೆದರು.

ವೆರೈಟಿ ರೇಷ್ಮೆ ಸೀರೆಗಳು

ಮೇಳದಲ್ಲಿ ಈ ಬಾರಿ ದೇಶದ ವಿವಿಧೆಡೆಯ ವೆರೈಟಿ ರೇಷ್ಮೆ ಸೀರೆಗಳ ಮಳಿಗೆಗಲನ್ನು ಸ್ಥಾಪಿಸಲಾಗಿದೆ. ಮೈಸೂರು ಸಿಲ್ಕ್ಸ್‌, ಬಾಗಲಕೋಟೆಯ ಇಲಕಲ್‌ ರೇಷ್ಮೆ ಸೀರೆಗಳು, ಚಿತ್ರದುರ್ಗದ ಮೊಳಕಾಲ್ಮೂರು ರೇಷ್ಮೆ ಸೀರೆಗಳು, ತಮಿಳುನಾಡಿನ ಕಾಂಚಿಪುರಂ ರೇಷ್ಮೆ ಸೀರೆ, ತೆಲಂಗಾಣದ ಪೋಚಂಪಲ್ಲಿ ರೇಷ್ಮೆ ಸೀರೆಗಳು, ಉತ್ತರ ಪ್ರದೇಶದ ಬನಾರಸ್‌ ರೇಷ್ಮೆ, ತಮಿಳನಾಡಿನ ರಾಸಿಪುರಂ ರೇಷ್ಮೆ, ಜಾರ್ಖಂಡ್‌ನ ಮಧುಬನಿ ರೇಷ್ಮೆ, ಸೇಲಂ ರೇಷ್ಮೆ ಸೀರೆಗಳಿಗೆ ಪ್ರತ್ಯೇಕ ಸ್ಟಾಲ್‌ಗಳಿವೆ.

ಬೆಂಗಳೂರಿನಲ್ಲಿ ಬೆಳಗಿನ ಜಾವ ನಾಲ್ಕೂವರೆ ಐದು ಗಂಟೆಗೆಲ್ಲ ಕ್ಯೂ ನಿಂತು ಮೈಸೂರು ರೇಷ್ಮೆ ಸೀರೆ ಖರೀದಿಸಬೇಕು. ಇಲ್ಲಿ ಬಂದಿದ್ದರಿಂದ ಮನಸಿಗೆ ಖುಷಿಯಾಗುವಂತಹ ಸೀರೆಗಳು ಸಿಕ್ಕಿವೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ನಾಲ್ಕು ಸೀರೆಗಳನ್ನು ಖರೀದಿಸಿದ್ದೇವೆ. ಪ್ರಿಯಾಂಕಾ, ಬೆಂಗಳೂರು ನಿವಾಸಿ

ಮೈಸೂರು ರೇಷ್ಮೆಗೆ ಡಿಮಾಂಡು

ಮೈಸೂರು, ಬೆಂಗಳೂರಿನಲ್ಲಿ ಒರಿಜಿನಲ್ ರೇಷ್ಮೆ ಸೀರೆ ಖರೀದಿಸಲು ಮಹಿಳೆಯರು ಹರಸಾಹಸ ಪಡುತ್ತಾರೆ. ಇದೇ ಮೊದಲ ಬಾರಿ ಶಿವಮೊಗ್ಗದ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ರೇಷ್ಮೆ ಸೀರೆಗಳ ಸ್ಟಾಲ್‌ ಸ್ಥಾಪಿಸಲಾಗಿದೆ. ಇಲ್ಲಿ ಮಹಿಳೆಯರು ಸುಲಭವಾಗಿ ತಮ್ಮ  ಇಷ್ಟದ ಸೀರೆ ಖರೀದಿಸಲು, ಅದರ ಕುರಿತು ವಿಚಾರಿಸಲು ಸ್ಟಾಲ್‌ ಬಳಿ ಗುಂಪುಗೂಡುತ್ತಿದ್ದಾರೆ.

Total-Readers-of-Shivamogga-Live

ಮಹಿಳೆಯರ ಮನ ಸೆಳೆಯುವ ಸೀರೆಗಳು

ರೇಷ್ಮೆ ಸೀರೆಯಷ್ಟೇ ಅಲ್ಲ ಇನ್ನೂ ನಾನಾ ವೆರೈಟಿ ಸೀರೆಗಳು ಇಲ್ಲಿ ಲಭ್ಯವಿವೆ. ಪಶ್ಚಿಮ ಬಂಗಾಳದ ಜಮದಾನಿ ಸೀರೆ, ಗಜೇಂದ್ರಗಡದ ಪಟ್ಟದ ಅಂಚು ಸೀರೆ, ಗುಳೇದಗುಡ್ಡ ಕಣ ಹಾಗೂ ಸೀರೆ, ಖಾದಿ ಸೀರೆಗಳು ಸೇರಿದಂತೆ ಕೈ ಮಗ್ಗದ ಹಲವು ಬಗೆಯ ಸೀರೆಗಳು, ಚೂಡಿದಾರ್‌ ಬಟ್ಟೆಗಳು ಮೇಳದಲ್ಲಿ ದೊರೆಯುತ್ತಿವೆ. ಹಾಗಾಗಿ ಮೇಳದ ಕೈಮಗ್ಗ ವಿಭಾಗದಲ್ಲಿ ಮಹಿಳೆಯ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

ಇದನ್ನೂ ಓದಿ – ಮುಂಬೈಗೆ ತೆರಳಿದ್ದ ಮಹಿಳೆಗೆ ನೆರೆಹೊರೆ ಮನೆಯಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

ಜನವರಿ 27ರವರೆಗೆ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮೇಳ ನಡೆಯಲಿದೆ.

Silk Saree exhibition in shimoga freedom park
Silk Saree exhibition in shimoga freedom park
Silk Saree exhibition in shimoga freedom park
Silk Saree exhibition in shimoga freedom park
Silk Saree exhibition in shimoga freedom park
Silk Saree exhibition in shimoga freedom park
Silk Saree exhibition in shimoga freedom park

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 25, 2026

Leave a Comment