ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 AUGUST 2023
SHIMOGA : ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ (VANITY BAG) ನೆಕ್ಲೇಸ್ ಕಳ್ಳತನ ಮಾಡಲಾಗಿದೆ. ನಗರದ ಕೆಎಸ್ಆರ್ಟಿಸಿ ಬಸ್ (KSRTC BUS) ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ನ್ಯಾಮತಿಯ ನಿಂಗಮ್ಮ ಎಂಬುವವರು ತಮ್ಮ ಮೊಮ್ಮಗಳ ಹುಟ್ಟುಹಬ್ಬಕ್ಕೆ ಖರೀದಿಸಿದ್ದ ಚಿನ್ನದ ನೆಕ್ಲೇಸ್ (NECKLACE) ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹೇಗಾಯ್ತು ಘಟನೆ?
ನಿಂಗಮ್ಮ ಗಾಂಧಿ ಬಜಾರ್ನಲ್ಲಿರುವ (GANDHI BAZAAR) ಆಭರಣದ ಅಂಗಡಿಯೊಂದರಲ್ಲಿ 46 ಸಾವಿರ ರೂ. ಮೌಲ್ಯದ ನೆಕ್ಲೇಸ್ ಖರೀದಿಸಿದ್ದರು. ಅದನ್ನು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದರು. ಊರಿಗೆ ಹೋಗಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಬಹು ಹೊತ್ತು ಕಾದರು ಬಸ್ ಬರಲಿಲ್ಲ. ಶಿಕಾರಿಪುರದ (SHIKARIPURA) ಬಸ್ ಬಂದಿದ್ದು ನಿಂಗಮ್ಮ ಅದನ್ನು ಹತ್ತಿದ್ದಾರೆ. ಬಸ್ ಹತ್ತುವಾಗ ರಶ್ ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸೀಟ್ ಹಿಡಿದು ಕುಳಿತಿದ್ದ ನಿಂಗಮ್ಮ ಅವರು ತಮ್ಮ ವ್ಯಾನಿಟಿ ಬ್ಯಾಗ್ ಜಿಪ್ ತೆಗೆದಿರುವುದನ್ನು ಗಮನಿಸಿದ್ದಾರೆ. ಒಳಗೆ ಪರಿಶೀಲಿಸಿದಾಗ ನೆಕ್ಲೇಸ್ ಇದ್ದ ಬಾಕ್ಸ್ ನಾಪತ್ತೆಯಾಗಿತ್ತು. ಬಸ್ ಹತ್ತುವಾಗ ಕಳ್ಳರು ನೆಕ್ಲೇಸ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ನಿಂಗಮ್ಮ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ KSRTC ಬಸ್ಸಿನಲ್ಲಿ ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ತೆಗೆದ ಮಹಿಳೆಗೆ ಆಘಾತ
ಇಂತಹ ಪ್ರಕರಣ ಇದೇ ಮೊದಲಲ್ಲ
ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣ ಕಳ್ಳತನ ಪ್ರಕರಣ ಇದೆ ಮೊದಲಲ್ಲ. ಬಸ್ ಹತ್ತುವ ವೇಳೆ ಹೆಚ್ಚು ಜನ ಸಂದಣಿ ಇರುವಾಗ ಪ್ರಯಾಣಿಕರ ಸೋಗಿನಲ್ಲಿರುವ ಕಳ್ಳರು ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು ನಗದು, ಚಿನ್ನಾಭರಣ ಕಳ್ಳತನ ಮಾಡುತ್ತಾರೆ. ಕೆಲವೆ ಕ್ಷಣದಲ್ಲಿ ಅಲ್ಲಿಂದ ಪರಾರಿಯಾಗುತ್ತಾರೆ. ಇನ್ನು, ಅಂಗಡಿಯಲ್ಲಿ ನೀರು, ತಿಂಡಿ ತಿನಿಸು ಖರೀದಿ, ಶೌಚಾಲಯಕ್ಕೆ ಹೋಗಿ ಮರಳುವಷ್ಟರಲ್ಲಿ ಬಸ್ಸಿನ ಸೀಟ್ ಮೇಲೆ ಇಟ್ಟಿದ್ದ ಬ್ಯಾಗ್ಗಳನ್ನು ಕಳವು ಮಾಡಿದ ಉದಾಹರಣೆಗಳಿವೆ. ಪ್ರಯಾಣಿಕರು ಬಸ್ ಹತ್ತುವಾಗ, ಬಸ್ಸಿನಲ್ಲಿ ಬ್ಯಾಗ್ ಇರಿಸಿ ಇಳಿಯುವಾಗ ಮುಂಜಾಗ್ರತೆ ವಹಿಸಬೇಕಿದೆ.