ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 20 ನವೆಂಬರ್ 2019
ಶಿವಮೊಗ್ಗ ತುಂಗಾ ಸೇತುವೆ ಆ್ಯಂಗ್ಲರ್’ಗೆ ವಾಹನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಹೊಸ ಪ್ಲಾನ್ ಮಾಡಿದೆ.
ಏನದು ಹೊಸ ಪ್ಲಾನ್?
ತುಂಗಾ ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ದ್ವಿಚಕ್ರ ವಾಹನ, ಕಾರು, ಆಟೋರಿಕ್ಷಗಳು ಮಾತ್ರ ಸೇತುವೆ ಮೇಲೆ ಸಂಚರಿಸಬಹುದಾಗಿದೆ. ಭಾರಿ ವಾಹನಗಳು ಸಂಚಾರ ನಿರ್ಬಂಧಿಸಲು ಆ್ಯಂಗ್ಲರ್ ಹಾಕಲಾಗಿತ್ತು. ಆದರೆ ಮೂರ್ನಾಲ್ಕು ಬಾರಿ ವಾಹನಗಳು ಆ್ಯಂಗ್ಲರ್’ಗೆ ಡಿಕ್ಕಿ ಹೊಡೆದಿದ್ದವು. ಕಳೆದ ವಾರ ಖಾಸಗಿ ಬಸ್ ಗುದ್ದಿ ಆ್ಯಂಗ್ಲರ್ ಪೀಸ್ ಪೀಸ್ ಆಗಿತ್ತು. ಇದನ್ನು ತಪ್ಪಿಸಲು ಸೇತುವೆ ಮುಂಭಾಗ ಈಗ ಹಂಪ್’ಗಳನ್ನು ಹಾಕಲಾಗಿದೆ.
ಸೇತುವೆ ಮುಂದೆ ಮೂರು ಹಂಪ್
ಸೇತುವೆಯಿಂದ ಸ್ವಲ್ಪ ಮುಂದೆ ಮೂರು ಹಂಪ್’ಗಳನ್ನು ನಿರ್ಮಿಸಲಾಗಿದೆ. ವಾಹನಗಳು ಇಲ್ಲಿಗೆ ಬರುತ್ತಿದ್ದಂತೆ ವೇಗ ತಗ್ಗುತ್ತದೆ. ಅಲ್ಲದೆ ಆ್ಯಂಗ್ಲರ್’ಗೆ ಗುದ್ದುವುದು ಕೂಡ ತಪ್ಪಲಿದೆ ಅನ್ನುವುದು ಅಧಿಕಾರಿಗಳ ಲೆಕ್ಕಾಚಾರ.
ಗಟ್ಟಿಮುಟ್ಟಾದ ಹೊಸ ಆ್ಯಂಗ್ಲರ್ ರೆಡಿ
ಕಳೆದ ವಾರ ಖಾಸಗಿ ಬಸ್ ಗುದ್ದಿದ್ದರಿಂದ ಆ್ಯಂಗ್ಲರ್ ಪೀಸ್ ಪೀಸ್ ಆಗಿತ್ತು. ಈಗ ಸೇತುವೆಯ ಮುಂಭಾಗದಲ್ಲಿ ಬಲಿಷ್ಠವಾದ ಹೊಸ ಆ್ಯಂಗ್ಲರ್ ನಿರ್ಮಿಸಲಾಗಿದೆ. ವಾಹನಗಳು ಸಮೀಪಕ್ಕೆ ಬರುತ್ತಿದ್ದಂತೆ ಆ್ಯಂಗ್ಲರ್ ಇರುವುದು ಗೊತ್ತಾಗುತ್ತದೆ. ಈ ಹಿಂದೆ ಇದ್ದ ಆ್ಯಂಗ್ಲರ್’ಗಿಂತಲು ಬಲಿಷ್ಠವಾದದ್ದನ್ನು ಹಾಕಲಾಗಿದೆ.
ಸೇತುವೆ ಮುಂದೆ ಬ್ಯಾರಿಕೇಡ್’ಗಳನ್ನು ಇರಿಸಲಾಗಿದೆ. ಇದರಿಂದ ವಾಹನಗಳು ಹತ್ತಿರ ಬರುತ್ತಿದ್ದಂತೆ ವೇಗ ತಗ್ಗಲಿದೆ. ಆದರೆ ಆ್ಯಂಗ್ಲರ್’ಗಳಿಗೆ ರಿಫ್ಲೆಕ್ಟರ್ ಅಳವಡಿಸಬೇಕಿದೆ. ಜೊತೆಗೆ ಭಾರಿ ವಾಹನ ಚಾಲಕರಿಗೆ ಕಾಣುವಂತೆ ಸೈನ್ ಬೋರ್ಡ್ ಅಳವಡಿಸಬೇಕಿದೆ. ಇಲ್ಲವಾದಲ್ಲಿ ಮತ್ತಷ್ಟು ಅಪಘಾತ ಸಂಭವಿಸಬಹುದು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422