SHIVAMOGGA LIVE NEWS |31 DECEMBER 2022
ಶಿವಮೊಗ್ಗ : ಹೊಸ ವರ್ಷಾಚರಣೆಗೆ (new year) ಕ್ಷಣಗಣನೆ ಆರಂಭವಾಗಿದೆ. ಶಿವಮೊಗ್ಗದಲ್ಲಿ ನೂತನ ವರ್ಷದ ಸ್ವಾಗತಕ್ಕೆ ಸಿದ್ಧತೆ ಬಿರುಸುಗೊಂಡಿವೆ. ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.
ಕೋವಿಡ್ ಆತಂಕದ ಹಿನ್ನೆಲೆ ಕಳೆದ ಎರಡು ವರ್ಷ ಹೊಸ ವರ್ಷಾಚರಣೆ ನೀರಸವಾಗಿತ್ತು. ಈ ಬಾರಿ ಜನ ಆತಂಕವಿಲ್ಲದೆ ನೂತನ ವರ್ಷದ (new year) ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಎಲ್ಲೆಲ್ಲಿ ಹೇಗಿದೆ ಸಿದ್ಧತೆ?
ಕೇಕ್ ಖರೀದಿ : ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದ ವಿವಿಧೆಡೆ ಕೇಕ್ ಶಾಪ್, ಬೇಕರಿಗಳಲ್ಲಿ ಕೇಕ್ ಆರ್ಡರ್ ಕೊಟ್ಟು, ಖರೀದಿ ಮಾಡಲಾಗುತ್ತಿದೆ. ವಿವಿಧ ಬಗೆಯ, ಹಲವು ಡಿಸೈನ್ ಮತ್ತು ಫ್ಲೇವರ್ ಗಳ ಕೇಕ್ ಖರೀದಿ ನಡೆಯುತ್ತಿದೆ.
‘ಬೆಳಗ್ಗೆಯಿಂದಲು ಜನರು ಬಂದು ಕೇಕ್ ಖರೀದಿಸುತ್ತಿದ್ದಾರೆ. ಎಲ್ಲಾ ಬಗೆಯ ಕೇಕ್ ಗಳಿಗೆ ಡಿಮಾಂಡ್ ಇದೆ. ಸಂಜೆ ವೇಳೆಗೆ ವ್ಯಾಪಾರ ಜೋರಾಗಲಿದೆ’ ಅನ್ನುತ್ತಾರೆ ಸವಳಂಗ ರಸ್ತೆಯಲ್ಲಿರುವ ವಂದನಾ ಬೇಕರಿಯ ಮಾಲೀಕ ಮನೋಜ್ ಕುಮಾರ್.
ಎಣ್ಣೆಗೆ ಡಿಮಾಂಡಪ್ಪೊ ಡಿಮಾಂಡ್ : ನಗರದಲ್ಲಿ ಮದ್ಯಕ್ಕೆ ಭಾರಿ ಡಿಮಾಂಡ್ ಇದೆ. ಸಂಜೆ ವೇಳೆಗೆ ತಮ್ಮಿಷ್ಟದ ಬ್ರಾಂಡ್ ಸಿಗದಿರುಬಹುದು ಎಂಬ ಆಲೋಚನೆಯಲ್ಲಿ ಬೆಳಗ್ಗೆಯಿಂದಲೆ ಮದ್ಯ ಖರೀದಿ ಆರಂಭವಾಗಿದೆ. ವೀಕೆಂಡ್ ಹೊತ್ತಲ್ಲಿ ಇಯರ್ ಎಂಡ್ ಪಾರ್ಟಿ ನಡೆಯುವುದರಿಂದ ಎಂದಿಗಿಂತಲು ಹೆಚ್ಚು ಮದ್ಯ ಖರೀದಿ ಮಾಡಲಾಗುತ್ತಿದೆ. ಎಂಎಸ್ಐಎಲ್ ಮತ್ತು ಎಂ.ಆರ್.ಪಿ ದರದಲ್ಲಿ ಮದ್ಯ ಮಾರಾಟ ಮಾಡುವ ಮಳಿಗೆಗಳಲ್ಲಿ ಹೆಚ್ಚಿನ ಡಿಮಾಂಡ್ ಇದೆ.
ಚಿಕನ್, ಮಟನ್ : ನಗರದ ವಿವಿಧೆಡೆಯ ಚಿಕನ್, ಮಟನ್ ಶಾಪ್ ಗಳಲ್ಲಿಯು ಖರೀದಿ ಜೋರಾಗಿದೆ. ಹಲವು ಅಂಗಡಿಗಳಲ್ಲಿ ಈಗಾಗಲೆ ಮುಂಗಡ ಪಾವತಿಯು ಮಾಡಲಾಗಿದೆ. ಸಂಜೆ ವೇಳೆಗೆ ಚಿಕನ್, ಮಟನ್ ಸೇಲ್ ಹೆಚ್ಚಳವಾಗಲಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸರ್ಕಾರಿ ನೌಕರರಿಗೆ ನವ ಸಂವತ್ಸರ ಕಾರ್ಯಕ್ರಮ, ಬರಲಿದ್ದಾರೆ ಸರಿಗಮಪ ಖ್ಯಾತಿಯ ಗಾಯಕರು
ಸಾಫ್ಟ್ ಡ್ರಿಂಕ್, ಜ್ಯೂಸ್, ಕುರಕಲು ತಿಂಡಿಗಳಿಗು ಡಿಮಾಂಡ್ ಜೋರಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಅಂಗಡಿಗಳಲ್ಲಿ ಸ್ಟಾಕ್ ಹೆಚ್ಚಿಸಲಾಗಿದೆ.
ಹೊಸ ವರ್ಷದ ಸ್ವಾಗತ ಕಾರ್ಯಕ್ರಮಗಳಿಗೆ ಅಲಂಕಾರಿಕ ವಸ್ತುಗಳು, ಬಲೂನ್ ಸೇರಿದಂತೆ ಹಲವು ವಸ್ತುಗಳ ಖರೀದಿಯು ಜೋರಾಗಿದೆ. ಗಾಂಧಿ ಬಜಾರ್ ಸೇರಿದಂತೆ ನಗರದ ವಿವಿಧೆಡೆಯಿ ನಾವೆಲ್ಟಿ ಶಾಪ್ ಗಳಲ್ಲಿ ಬೆಳಗ್ಗೆಯಿಂದಲೇ ವಹಿವಾಟು ಬಿರುಸಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200