ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಸೆಪ್ಟೆಂಬರ್ 2021
ಕಳ್ಳರು, ದರೋಡೆಕೋರರಿಂದ ರಕ್ಷಿಸಿಕೊಳ್ಳಲು ಶಿವಮೊಗ್ಗದ ಬಡಾವಣೆಯೊಂದರ ಜನರು ತಾವೇ ಗಸ್ತು ಆರಂಭಿಸಿದ್ದಾರೆ. ಗೃಹ ಸಚಿವರ ತವರು ಜಿಲ್ಲೆಯಲ್ಲೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಚರ್ಚೆಗೆ ಕಾರಣವಾಗಿದೆ.
ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಹಚ್ಚಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಕಡಿವಾಣ ಹಾಕುವಂತೆ ನಿವಾಸಿಗಳ ಸಂಘದ ವತಿಯಿಂದ ಪೊಲೀಸ್ ಇಲಾಖೆಗೆ ಮನವಿಯನ್ನೂ ಮಾಡಲಾಗಿತ್ತು.

ರಾತ್ರಿ ಗಸ್ತು ಶುರು ಮಾಡಿದ ಸ್ಥಳೀಯರು
ರಾತ್ರಿ ಮತ್ತು ಬೆಳಗಿನ ಸಂದರ್ಭದಲ್ಲಿ ವಾಕಿಂಗ್ ತೆರಳಿದ್ದಾಗ ದರೋಡೆಗಳಾಗುತ್ತಿವೆ. ಇದನ್ನು ತಪ್ಪಿಸಲು ಮತ್ತು ಈ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸ್ಥಳೀಯರು ದೊಣ್ಣೆಗಳನ್ನು ಹಿಡಿದುಕೊಂಡು ಗಸ್ತು ಆರಂಭಿಸಿದ್ದಾರೆ.

ಬುಧವಾರ ರಾತ್ರಿ ಸ್ಥಳೀಯರು ಗಸ್ತು ಮಾಡಿದ್ದಾರೆ. ನಿರಂತರವಾಗಿ ಗಸ್ತು ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಗಸ್ತು ಮಾಡಿದ ಫೋಟೊವೊಂದನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ | ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು, ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ ವೈರಲ್
ಇದನ್ನೂ ಓದಿ | ಬೆಳಗ್ಗೆ ಏಳುವಷ್ಟರಲ್ಲಿ ಶೂ, ಚಪ್ಪಲಿ ಮಾಯ, ಈ ಜನರ ಗೋಳು ಕೇಳೋಕೆ ಯಾರೂ ಇಲ್ವಾ? ಏನಿದು? ಯಾಕಿಂಗೆ ಆಗ್ತಿದೆ?
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





