ಸೂರ್ಯ ಮುಳುಗಿದ್ಮೇಲೆ ಶಿವಮೊಗ್ಗ – ಭದ್ರಾವತಿ ರಸ್ತೆ, ಬೈಪಾಸುಗಳಲ್ಲಿ ಯಾರ ಜೀವಕ್ಕೂ ಇಲ್ಲ ಗ್ಯಾರಂಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಅವಳಿ ನಗರ ಶಿವಮೊಗ್ಗ-ಭದ್ರಾವತಿ ಹೆದ್ದಾರಿ ಕೇವಲ ಗುಂಡಿ, ಹಂಪ್ ಗಳಿಂದ ಕುಖ್ಯಾತಿ ಪಡೆದಿಲ್ಲ. ಕೈಗಾರಿಕೆ, ಗಾರ್ಮೆಂಟ್ಸ್, ಐಟಿ ಉದ್ದಿಮೆಗಳಿರುವ ಈ ರಸ್ತೆಯಲ್ಲಿ ಬೀದಿ ದೀಪದ (LIGHTS) ವ್ಯವಸ್ಥೆಯೂ ಇಲ್ಲ.

Shimoga Nanjappa Hospital

ಪ್ರತಿ ದಿನ ಸಾವಿರಾರು ಮಂದಿ ಕಾರ್ಮಿಕರು ಶಿವಮೊಗ್ಗ, ಭದ್ರಾವತಿಯಿಂದ ಕೆಲಸಕ್ಕೆ ಹೋಗಿಬರುತ್ತಾರೆ. ರಾತ್ರಿ ಪಾಳಿಯಲ್ಲಿಯು ಕೆಲಸಕ್ಕೆ ಹೋಗುವವರಿದ್ದಾರೆ. ಆದರೆ ಕತ್ತಲಾಗುತ್ತಿದ್ದಂತೆ ಬಹುತೇಕರು ಮುಖ್ಯ ರಸ್ತೆ ಬದಲಾಗಿ ಹಳ್ಳಿ ರಸ್ತೆಗಳ ಮೂಲಕ ಮಾಚೇನಹಳ್ಳಿ ತಲುಪುತ್ತಿದ್ದಾರೆ.

ಮಲವಗೊಪ್ಪದವರೆಗೆ LIGHTS

ರಾತ್ರಿ ವೇಳೆ ಈ ರಸ್ತೆಯಲ್ಲಿ ಓಡಾಡುವುದೆಂದರೆ ಸವಾರರ ಎದೆಬಡಿತ ಹೆಚ್ಚಿಸುತ್ತದೆ. ಶಿವಮೊಗ್ಗದಿಂದ ಭದ್ರಾವತಿ ನಡುವೆ ಮಲವಗೊಪ್ಪದವರೆಗೂ ಮಹಾನಗರ ಪಾಲಿಕೆ ವತಿಯಿಂದ ಬೀದಿ ದೀಪ ಅಳವಡಿಸಲಾಗಿದೆ. ಅಲ್ಲಿಂದ ಮುಂದಕ್ಕೆ ಎಲ್ಲೂ ಬೀದಿ ದೀಪ (LIGHTS) ಇಲ್ಲ. ಗಾರ್ಮೆಂಟ್ಸ್ ಗೆ ಹೋಗುವ ಸರ್ಕಲ್‌ನಲ್ಲಿರುವ ಹೈಮಾಸ್ಟ್ ಕೂಡ ಅನೇಕ ಬಾರಿ ಕೆಟ್ಟು ನಿಂತಿರುತ್ತದೆ. ಶಿಮುಲ್ ಬಳಿ ಇರುವ ಹೈಮಾಸ್ಟ್ ಕೂಡ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಈ ಸರ್ಕಲ್’ನಲ್ಲಿ ವಾಹನ ಓಡಿಸಲು ಗುಂಡಿಗೆ ಗಟ್ಟಿ ಇರಬೇಕು, ನಡೆದು ಹೋಗಲು ಧೈರ್ಯ ಬೇಕು

ಮಲವಗೊಪ್ಪ, ನಿದಿಗೆ ಕೆರೆ, ಮಾಚೇನಹಳ್ಳಿ, ಜೇಡಿಕಟ್ಟೆ ಬಳಿ ಇರುವ ತಿರುವುಗಳು ರಾತ್ರಿ ವೇಳೆ ಅಂದಾಜು ಸಿಗುವುದಿಲ್ಲ. ಹಿಂದೆ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಲಾಗಿತ್ತು. ರಸ್ತೆಯ ಎರಡೂ ಬದಿ ಕೆಂಪು ಬಣ್ಣದ ರಿಫ್ಲೆಕ್ಟರ್‌ಗಳನ್ನು ಹಾಕಲಾಗಿತ್ತು. ಅವುಗಳು ಈಗ ಇಲ್ಲ. ಎರಡು ಬದಿ ಇದ್ದ ವೈಟ್‌ಲೈನ್‌ಗಳು ಸಹ ಹಾಳಾಗಿವೆ. ಡಿವೈಡರ್‌ಗಳು ಸಹ ಕಣ್ಣಿಗೆ ಕಾಣುವುದಿಲ್ಲ. ಕಾರು, ಲಾರಿಗಳು ಡಿವೈಡರ್ ಏರಿ ನಿಲ್ಲುತ್ತವೆ. 5 ವರ್ಷದಲ್ಲಿ ಸಂಭವಿಸಿರುವ ಅಪಘಾತಗಳು ಲೆಕ್ಕಕ್ಕೆ ಇಲ್ಲ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಅಪಘಾತ ಆದರಷ್ಟೆ ಗುಂಡಿ ಬಂದ್, ಇಲ್ಲಿದೆ ನೋಡಿ ಉದಾಹರಣೆ

ಯಮ ಸ್ವರೂಪಿ ಬೈಪಾಸ್‌ಗಳು

ಶಿವಮೊಗ್ಗದಲ್ಲಿ ಸೂಳೆಬೈಲು ಮೂಲಕ ಹಾದುಹೋಗುವ, ಭದ್ರಾವತಿಯ ಹೊಸಸಿದ್ದಾಪುರ ಮೇಲೆ ಹಾದುಹೋಗುವ ಬೈಪಾಸ್‌ಗಳಲ್ಲೂ ಸಹ ಯಾವುದೇ ಬೀದಿ ದೀಪಗಳಿಲ್ಲ. ಇವೆರಡೂ ಸಹ ನಗರ ಪಾಲಿಕೆ ವ್ಯಾಪ್ತಿಯಲ್ಲೇ ಇದ್ದರೂ ಕನಿಷ್ಠ ಕಾಳಜಿ ಕೂಡ ಇಲ್ಲ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗ – ಭದ್ರಾವತಿ ಹೈವೆಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ

ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡ ನಂತರ ಭದ್ರಾವತಿ ಬೈಪಾಸ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಈಚೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ. ರಾತ್ರಿ ವೇಳೆ ಈ ರಸ್ತೆಯಲ್ಲಿ ಕಾರ್ಮಿಕರು ಓಡಾಡಲು ಹಿಂಜರಿಯುತ್ತಾರೆ. ಶಿವಮೊಗ್ಗದ ಬೈಪಾಸ್ ಸಹ ಅಪಘಾತಗಳ ತಾಣವಾಗಿದೆ.

ಹೈ ಬೀಮ್ ಭಯ

ಲಾರಿ, ಕಾರು, ಬಸ್‌ಗಳ ಹೈಬೀಮ್ ಬೆಳಕು ಎದುರಿಗೆ ಬರುತ್ತಿರುವ ಬೈಕ್ ಸವಾರರಿಗೆ ತೊಂದರೆ ನೀಡುತ್ತಿದೆ. ಬೈಕ್‌ನಿಂದ ಹೊರ ಹೊಮ್ಮುವ ಬೆಳಕಿನಲ್ಲಿ ರಸ್ತೆ ಗುಂಡಿಗಳು ಕಾಣುವುದಿಲ್ಲ. ರಸ್ತೆಯ ಕೊನೆ ಕೂಡ ಕಾಣುವುದಿಲ್ಲ. ರಸ್ತೆಯಿಂದ ಕೆಳಗಿಳಿಸಲು ಕಡಿದಾದ ಅಂಚು ಭಯ ಹುಟ್ಟಿಸುತ್ತದೆ. ಜಾರಿಬಿದ್ದವರಿಗೆ, ಕಾಲು ಮುರಿದುಕೊಂಡವರಿಗೆ ಲೆಕ್ಕ ಇಲ್ಲ.

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ ನೂರೆಂಟು ಗುಂಡಿಗಳಿರುವ ಹೆದ್ದಾರಿಯಲ್ಲಿ ಲಾರಿ, ಬಸ್ಸುಗಳಿಗೆ ಲೆಕ್ಕಕ್ಕಿಲ್ಲದ ‘ಅವೈಜ್ಞಾನಿಕ ಹಂಪು’ಗಳೇಕೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 15, 2022

Leave a Comment