ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ‘ವೈಭವದ ದಸರಾ’ ಆಚರಣೆ ನಡೆಯುತ್ತಿದೆ. ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆದರೆ ಈ ಬಾರಿಯೂ ದಸರಾ ಕಾರ್ಯಕ್ರಮಗಳು ಕೆಲವರಿಗಷ್ಟೆ ಸೀಮಿತವಾಗಿದೆ. ತಡವಾಗಿ ಕಾರ್ಯಕ್ರಮಗಳು ಶುರುವಾಗುತ್ತಿದ್ದು, ಅತಿಥಿಗಳೇ ಸಿಟ್ಟಾಗುವಂತಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ದಸರಾ ಆಚರಣೆ ನಡೆಸಲಾಗುತ್ತಿದೆ. ಕಾರ್ಯಕ್ರಮಗಳ ಆಯೋಜನೆಗೆ ಪಾಲಿಕೆ ಸದಸ್ಯರನ್ನು ಒಳಗೊಂಡ ವಿವಿಧ ಸಮಿತಿ ರಚಿಸಲಾಗಿದೆ.
ದಸರಾಗೆ ಗಜಪಡೆಗೆ ಆಹ್ವಾನ
ಜಂಬೂ ಸವಾರಿಯಲ್ಲಿ ಆನೆಗಳು ಪಾಲ್ಗೊಳ್ಳಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ಶಾಸಕ ಎಸ್.ಎನ್.ಚನ್ನಬಸಪ್ಪ, ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳ ತಂಡ ಸಕ್ರೆಬೈಲಿಗೆ ಭೇಟಿ ನೀಡಿತ್ತು. ದಸರಾಗೆ ಗಜಪಡೆಗೆ ಆಹ್ವಾನ ನೀಡಿತು. ಅಂಬಾರಿ ಹೊರಲಿರುವ ಸಾಗರ್ ಆನೆ, ಸಾಥ್ ನೀಡಲು ಆಗಮಿಸುತ್ತಿರುವ ಕುಮ್ಕಿ ಆನೆಗಳಾದ ನೇತ್ರಾವತಿ ಮತ್ತು ಹೇಮಾವತಿಗೆ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ- ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗದ ಕೆಲಸ ಶುರು, ಇಲ್ಲಿದೆ ಕಾಮಗಾರಿ ಕುರಿತ 4 ಪ್ರಮುಖಾಂಶ
ಉದ್ಘಾಟನೆಗು ಬಾರದ ಜನ
ಶಿವಮೊಗ್ಗ ದಸರಾಗೆ ಅ.15ರಂದು ಚಾಲನೆ ನೀಡಲಾಯಿತು. ಮಹಾನಗರ ಪಾಲಿಕೆ ಆವರಣದಿಂದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು, ಕಲಾ ತಂಡ ಹೊರತು ಸಾರ್ವಜನಿಕರು ಮೆರವಣಿಗೆಯಲ್ಲಿ ಕಾಣಿಸಲಿಲ್ಲ. ದೇಗುಲದ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲೂ ಬೆರಳೆಣಿಕೆಯಷ್ಟು ಮಂದಿ ಭಾಗವಹಿಸಿದ್ದರು.
ಕೆಲವರಿಗಷ್ಟೇ ಸೀಮಿತ ಈ ಬಾರಿ ದಸರಾ
ನಾಡಹಬ್ಬ ಹಿನ್ನೆಲೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುವೆಂಪು ರಂಗಮಂದಿರ, ಡಾ. ಅಂಬೇಡ್ಕರ್ ಭವನ, ಪಾಲಿಕೆ ಆವರಣ ಸೇರಿದಂತೆ ವಿವಿಧೆಡೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ಬಹುತೇಕ ಕಾರ್ಯಕ್ರಮಗಳಲ್ಲಿ ಖಾಲಿ ಚೇರುಗಳ ಕಾಣಿಸುತ್ತಿವೆ. ಕೆಲವೆ ಮಂದಿಗೆ ಕಾರ್ಯಕ್ರಮಗಳು ಸೀಮಿತವಾಗಿವೆ.
ಕಾಲೇಜು ವಿದ್ಯಾರ್ಥಿಗಳೆ ಆಸರೆ
ವಿವಿಧ ದಸರಾ ಕಾರ್ಯಕ್ರಮಗಳು, ಮೆರವಣಿಗೆಗೆ ಕಾಲೇಜು ವಿದ್ಯಾರ್ಥಿಗಳೇ ಆಸರೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಜನ ‘ಕಿಕ್ಕಿರಿದು ಸೇರಿದ್ದರು’ ಎಂದು ಬಿಂಬಿಸಲು ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಆಸಕ್ತಿ ಇರದಿದ್ದರು ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾರ್ಯಕ್ರಮಗಳಲ್ಲಿ ಭಾಗಹಿಸುವಂತೆ ಮಾಡಲಾಗುತ್ತಿದೆ.
ಇದನ್ನೂ ಓದಿ- ಸಕ್ರೆಬೈಲು ಬಿಡಾರದ ಆನೆ ಬಾಲ ಕಟ್, ಹರಿತ ಆಯುಧದಿಂದ ದಾಳಿ ಶಂಕೆ, ಕಾರಣವೇನು?
ಸಿಡಿಮಿಡಿಗೊಂಡ ನಟ ದೊಡ್ಡಣ್ಣ
ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಂಗ ದಸರಾ ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗದ್ದಕ್ಕೆ ಅತಿಥಿಯಾಗಿದ್ದ ನಟ ದೊಡ್ಡಣ್ಣ ಸಿಟ್ಟಾದರು. ಬಹು ಹೊತ್ತು ಕಾದರೂ ಕಾರ್ಯಕ್ರಮದಲ್ಲಿ ಜನರು ಇಲ್ಲದೆ, ಉಳಿದ ಗಣ್ಯರು ಬಾರದೆ ಇದ್ದಿದ್ದಕ್ಕೆ ಸಿಡಿಮಿಡಿಗೊಂಡರು. ಶಾಸಕರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕ ಚನ್ನಬಸಪ್ಪ ಅವರು ಸಕ್ರೆಬೈಲಿಗೆ ತೆರಳಿದ್ದರಿಂದ ತಡವಾಗಿ ಆಗಮಿಸಿದರು. ಬಳಿಕ ನಟ ದೊಡ್ಡಣ್ಣ ಅವರಿಗೆ ಪರಿಸ್ಥಿತಿ ತಿಳಿಸಿದರು.
ಜನರ ತೆರಿಗೆ ದೊಡ್ಡಲ್ಲಿ ನಡೆಯುತ್ತಿರುವ ಶಿವಮೊಗ್ಗ ದಸರಾ ಕಾರ್ಯಕ್ರಮಗಳ ಬಗ್ಗೆ ಜನರಿಗೇ ಮಾಹಿತಿ ಇಲ್ಲವಾಗಿದೆ. ಜನ ಭಾಗವಹಿಸುವ ಸಮಯ ಹೊರತು ಉಳಿದ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂಬ ಆರೋಪವು ಇದೆ. ಪ್ರತಿ ವರ್ಷ ಜನರಿಲ್ಲದೆ ದಸರಾ ಆಚರಣೆ ಮಾಡುವ ಅಗತ್ಯವೇನು ಎಂಬ ಪ್ರಶ್ನೆಯು ಉದ್ಭವವಾಗಿದೆ.