ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 29 MAY 2024
SHIMOGA : ಕಳೆದ ಕೆಲವು ದಿನದಿಂದ ನಗರದ ಎನ್.ಆರ್.ಪುರ ರಸ್ತೆಯಲ್ಲಿ ಬೀದಿ ದೀಪಗಳು (Street Light) ಕಣ್ಣಾಮುಚ್ಚಾಲೆ ಆಡುತ್ತಿವೆ. ಇದರಿಂದ ರಸ್ತೆಯಲ್ಲಿ ಕಡು ಕತ್ತಲೆ ಆವರಿಸಿದ್ದು, ನಾಗರಿಕರು ಆತಂಕಕ್ಕೀಡಾಗಿದ್ದಾರೆ.
ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‌ನಿಂದ ಒಡ್ಡಿನಕೊಪ್ಪ ಗ್ರಾಮದವರೆಗೆ ಎನ್.ಅರ್.ಪುರ ರಸ್ತೆಯ ಡಿವೈಡರ್ ಮೇಲೆ ಒಂದು ಬದಿಗೆ ಮಾತ್ರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ವಿದ್ಯುತ್ ದೀಪಗಳು ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿವೆ. ಒಂದೆರಡು ದಿನ ಬೆಳಕು ಕಾಣಿಸಿಕೊಂಡರೆ ಮತ್ತಷ್ಟು ದಿನ ಕತ್ತಲು ಆವರಿಸುತ್ತಿದೆ.
ಕಳ್ಳತನ ಭೀತಿ, ಕುಡುಕರು, ಅಪಘಾತದ ಆತಂಕ
ಇದೆ ರಸ್ತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಶಿವಮೊಗ್ಗದಿಂದ ಎನ್.ಆರ್.ಪುರ, ಬಿ.ಆರ್.ಪಿ ಕಡೆಗೆ ತೆರಳಲು ಇದು ಹೆದ್ದಾರಿ. ಜ್ಯೋತಿನಗರ ಬಡಾವಣೆ, ಒಡ್ಡಿನಕೊಪ್ಪ ಗ್ರಾಮಕ್ಕೆ ಇದು ಸಂಪರ್ಕ ರಸ್ತೆ. ಬೀದಿ ದೀಪಗಳು ಬೆಳಗದಿದ್ದರೆ ರಸ್ತೆಯಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ರಸ್ತೆಯ ಅಕ್ಕಪ್ಕದಲ್ಲಿ ಮನೆಗಳಿದ್ದು ಜನ ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಇದೆ. ಎಂಆರ್‌ಎಸ್ ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಾತ್ರಿ ವೇಳೆ ಕಾರು, ಆಟೋ, ಲಾರಿ, ಬೈಕುಗಳನ್ನು ನಿಲ್ಲಿಸಿಕಂಡು ರಸ್ತೆಯಲ್ಲೆ ಮದ್ಯ ಸೇವಿಸುತ್ತಾರೆ ಎಂಬ ಆರೋಪವಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಅಡಿಕೆ ಗೋದಾಮುಗಳ ಮೇಲೆ 40 ಅಧಿಕಾರಿಗಳ ತಂಡದಿಂದ ದಿಢೀರ್ ದಾಳಿ
‘ರಸ್ತೆಯಲ್ಲಿ ವಿದ್ಯುತ್ ದೀಪಗಳನ್ನು ಸರಿಯಾಗಿ ಹಾಕುತ್ತಿಲ್ಲ. ರಾತ್ರಿ ಹೊತ್ತು ಇದು ಕುಡುಕರ ಅಡ್ಡೆಯಾಗಿ ಪರಿವರ್ತನೆ ಆಗುತ್ತದೆ. ಸಂಜೆ ವೇಳೆ ಹಲವರು ವಾಕಿಂಗ್ ಮಾಡುತ್ತಾರೆ. ಕಳ್ಳರೋ, ಕಿಡಿಗೇಡಿಗಳೋ ಬಡಾವಣೆಗೆ ನುಗ್ಗುತ್ತಾರೇನೋ ಅನ್ನುವ ಭಯವಿದೆ. ಈ ಭಾಗದಲ್ಲಿ ಪೊಲೀಸ್ ಗಸ್ತು ಕೂಡ ಇಲ್ಲ. ಈ ಬಡಾವಣೆ ಶಾಂತಮಯವಾಗಿದೆ. ಆದರೆ ಭದ್ರತೆಯ ಅಗತ್ಯವಿದೆ’ ಅನ್ನುತ್ತಾರೆ ಜ್ಯೋತಿನಗರ ಬಡಾವಣೆ ನಿವಾಸಿ ಕೃಷ್ಣಮೂರ್ತಿ.
LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು






