ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 AUGUST 2023
SHIMOGA : ಸಂಚಾರ ನಿಯಮ (Traffic Rules) ಉಲ್ಲಂಘಿಸಿದರೆ ಇನ್ಮುಂದೆ ವಾಹನದ ಮಾಲೀಕರಿಗೆ ಎಸ್‌ಎಂಎಸ್ ಮೂಲಕ ನೊಟೀಸ್ (SMS Notice) ತಲುಪಲಿದೆ. ದಂಡ ಪಾವತಿಸುವಂತೆ ಮನೆ ಬಾಗಿಲಿಗು ನೊಟೀಸ್ ಬರಲಿದೆ. ಆ.28ರಿಂದ ಶಿವಮೊಗ್ಗ ನಗರದಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸುದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಸ್ಮಾರ್ಟ್ ಸಿಟಿ (Smart City Project) ಯೋಜನೆ ಅಡಿ ಸಿದ್ಧಪಡಿಸಿರುವ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಟಿಎಂಎಸ್) ವ್ಯವಸ್ಥೆಯನ್ನು ಆ.28ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ನೊಟೀಸ್ ತಲುಪಲಿದೆ ಎಂದು ತಿಳಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಹೇಗೆ ಕೆಲಸ ಮಾಡುತ್ತೆ ಐಟಿಎಂಎಸ್?
STEP 1 : ಶಿವಮೊಗ್ಗ ನಗರದ ಸರ್ಕಲ್‌ಗಳು, ರಸ್ತೆಗಳಲ್ಲಿ ಅತ್ಯಾಧುನಿಕ ಕ್ಯಾಮರಾಗಳನ್ನು (Camera) ಅಳವಡಿಸಲಾಗಿದೆ. 13 ಸರ್ಕಲ್‌ಗಳಲ್ಲಿ ಅಡಾಪ್ಟೀವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ಎಟಿಸಿಎಸ್) ವ್ಯವಸ್ಥೆ ಮಾಡಲಾಗಿದೆ. ಸಿಗ್ನಲ್ ಜಂಪ್ ಪತ್ತೆಗೆ 72 ಕ್ಯಾಮರಾ, ಅತಿ ವೇಗದ ಚಾಲನೆ ಪತ್ತೆಗೆ 30 ಕ್ಯಾಮರಾ, ಜೂಮ್, ಪ್ಯಾನ್ ಮತ್ತು ಟಿಲ್ಟ್ ಆಗುವ 38 ಕ್ಯಾಮರಾ, ಆವರೇಜ್ ಸ್ಪೀಡ್ ವಯಲೇಷನ್ ಡಿಟೆಕ್ಷನ್‌ಗೆ 8 ಕ್ಯಾಮರಾ, 360 ಡಿಗ್ರಿ ಸೆರೆ ಹಿಡಿಯಬಲ್ಲ 10 ಸ್ಮಾರ್ಟ್ ಪೋಲ್ ಕ್ಯಾಮರಾ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್‌ಗೆ 44 ಕ್ಯಾಮಾರಗಳಿವೆ.
ಇದನ್ನೂ ಓದಿ – ಇನ್ಮುಂದೆ ಕುಂಸಿ, ಅರಸಾಳು ನಿಲ್ದಾಣಗಳಲ್ಲಿ ಸ್ಟಾಪ್ ಕೊಡಲಿವೆ 4 ಎಕ್ಸ್‌ಪ್ರೆಸ್ ರೈಲುಗಳು, ಯಾವ ರೈಲು? ಟೈಮಿಂಗ್ ಏನು?
STEP 2 : ಸಂಚಾರ ನಿಯಮ ಉಲ್ಲಂಘಿಸಿದರೆ ಈ ಕ್ಯಾಮರಾಗಳಲ್ಲಿ ದೃಶ್ಯಾವಳಿ ಸೆರೆಯಾಗಲಿದೆ. ಓಎಫ್‌ಸಿ ಕೇಬಲ್ ಮೂಲಕ ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿರುವ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ಗೆ ರವಾನಿಸಲಿದೆ.
STEP 3 : ಸಂಚಾರ ನಿಯಮ ಉಲ್ಲಂಘನೆ ದೃಢಪಡಿಸಿಕೊಳ್ಳುವ ಸಿಬ್ಬಂದಿ ವಾಹನದ ಮಾಲೀಕರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಿದ್ದಾರೆ. ಎಸ್‌ಎಂಎಸ್‌ನಲ್ಲಿ ಬರುವ ಲಿಂಕ್ ಕ್ಲಿಕ್ ಮಾಡಿದರೆ ಸಂಚಾರ ನಿಯಮ ಉಲ್ಲಂಘಿಸಿದ ಫೋಟೊ ಸಿಗಲಿದೆ. ಮನೆಗೂ ನೊಟೀಸ್ ತಲುಪಲಿದೆ.
STEP 4 : ವಾಹನದ ಮಾಲೀಕರು ಸಂಚಾರ ಠಾಣೆಯಲ್ಲಿ ದಂಡ ಪಾವತಿಸಬಹುದು. ಶಿವಮೊಗ್ಗ ನಗರದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಠಾಣೆ ಎಎಸ್‌ಐಗಳ ಬಳಿಯು ದಂಡ ಪಾವತಿಸಲು ಅವಕಾಶವಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಏನೇನೆಲ್ಲ ಪತ್ತೆ ಹಚ್ಚಲಿದೆ ಕ್ಯಾಮರಾ?
ಎಲ್ಲಾ ಬಗೆಯ ಸಂಚಾರ ನಿಯಮ ಉಲ್ಲಂಘನೆಗಳನ್ನು ಸಿಸಿಟಿವಿ ಕ್ಯಾಮರಾ ಪತ್ತೆ ಹಚ್ಚಲಿದೆ. ಹೆಲ್ಮಟ್ ಧರಿಸದಿರುವುದು, ಹಾಫ್ ಹೆಲ್ಮೆಟ್ ಧಾರಣೆ, ಥ್ರಿಬಲ್ ರೈಡಿಂಗ್, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ನಿಗದಿಗಿಂತಲೂ ಅತಿ ವೇಗದ ಚಾಲನೆ, ಅಜಾಗರೂಕತೆಯಿಂದ ವಾಹನ ಚಾಲನೆ, ಒನ್ ವೇ ನಿಯಮ ಉಲ್ಲಂಘನೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೆ ಇರುವುದು ಸೇರಿದಂತೆ ಎಲ್ಲಾ ಬಗೆಯ ಸಂಚಾರ ನಿಯಮ ಉಲ್ಲಂಘನೆಯನ್ನು ಸಿಸಿಟಿವಿ ಕ್ಯಾಮರಾಗಳು ಪತ್ತೆ ಹಚ್ಚಲಿವೆ.
ಬೆಂಗಳೂರು ಮಾದರಿ ವ್ಯವಸ್ಥೆ
ಸಂಚಾರ ನಿಯಮ ಪಾಲನೆಗೆ ಬೆಂಗಳೂರಿನಲ್ಲಿ ಈಗಾಗಲೆ ಈ ಮಾದರಿಯ ವ್ಯವಸ್ಥೆ ಇದೆ. ಅದೆ ರೀತಿ ಶಿವಮೊಗ್ಗಲ್ಲಿಯು ಆ.28ರಿಂದ ಅತ್ಯಾಧುನಿಕ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಜಾರಿಗೆ ಬರುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದರು.
ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಸುರೇಶ್, ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.