ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021
ಕಲ್ಲು ತುಂಬಿಕೊಂಡು ಯದ್ವತದ್ವ ಲಾರಿಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಇವತ್ತು ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರ ವಾಹನಗಳದ್ದೆ ದರ್ಬಾರು. ಅಬ್ಬಲಗೆರೆಯಿಂದ ಕಲ್ಲಗಂಗೂರು ರಸ್ತೆಯಲ್ಲಿ ಇವತ್ತು ಕಾರು, ಜೀಪುಗಳದ್ದೆ ಕಾರುಬಾರು.
ಕರೆದು, ಗೋಗರೆದರು ಬರುತ್ತಿರಲಿಲ್ಲ
ಅಕ್ರಮ ಕಲ್ಲುಗಣಿಗಾರಿಕೆ, ಡೈನಮೇಟ್ ಸ್ಫೋಟ, ಲಾರಿಗಳ ಓವರ್ ಸ್ಪೀಡ್‍ನಿಂದಾಗಿ ಕಲ್ಲಗಂಗೂರು, ಹುಣಸೋಡು, ಅಬ್ಬಲಗೆರೆ ಭಾಗದ ಜನರು ರೋಸಿ ಹೋಗಿದ್ದರು. ಒಂದೆಡೆ ಲಾರಿಗಳಿಂದಾಗಿ ಅಪಘಾತ ಸಂಭವಿಸುತ್ತಿದ್ದರೆ, ಮತ್ತೊಂದೆಡೆ ಸ್ಪೋಟ, ಧೂಳಿನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇದೆ ಕಾರಣಕ್ಕೆ ಹಲವು ಬಾರಿ ಅಕ್ರಮ ಗಣಿಗಾರಿಕೆ ವಿರುದ್ಧ ಮನವಿ ಸಲ್ಲಿಸಿದ್ದರು. ಆದರೂ ಪ್ರಯೋಜನ ಶೂನ್ಯ.
‘ ನಾವು ಎಷ್ಟು ಬಾರಿ ಮನವಿ ಕೊಟ್ಟರೂ, ಪ್ರತಿಭಟನೆಗಳನ್ನು ಮಾಡಿದರೂ ಯಾರೊಬ್ಬರು ಈ ಕಡೆ ಬರುತ್ತಿರಲಿಲ್ಲ. ಇವತ್ತು ಮಂತ್ರಿಗಳಿಂದ ಹಿಡಿದು ಎಲ್ಲಾ ಅಧಿಕಾರಿಗಳು ಬರುತ್ತಿದ್ದಾರೆ.’ ಎಂದು ಸ್ಥಳೀಯ ನಿವಾಸಿ ಪ್ರಭಾಕರ್ ಆರೋಪಿಸುತ್ತಾರೆ.
ಮೊದಲೆ ಕ್ರಮ ಕೈಗೊಂಡಿದ್ದರೆ
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸಂಗತಿ ಹೊಸತೇನಲ್ಲ. ಸಚಿವರಿಂದ ಹಿಡಿದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರವರೆಗೆ, ಜಿಲ್ಲಾಧಿಕಾರಿಯಿಂದ ಹಿಡಿದು ಸ್ಥಳೀಯ ಪಿಡಿಒ ತನಕ ಎಲ್ಲರಿಗೂ ಗೊತ್ತಿದೆ. ಆದರೆ ರಾಜಕೀಯ ಒತ್ತಡಕ್ಕೆ ಯಾರೊಬ್ಬರು ಕ್ರಮಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಮೊದಲೆ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನಾಹುತ ಸಂಭವಿಸುತ್ತಿರಲಿಲ್ಲ. ಇನ್ನಾದರು ಅಕ್ರಮ ಗಣಿಗಾರಿಕೆಯಿಂದ ನಮಗೆ ಮುಕ್ತಿ ಸಿಗುವಂತಾಗಲಿ ಅಂತಾ ಗ್ರಾಮಸ್ಥರು ನೋವು ಹಂಚಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200