ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 26 JUNE 2023
SHIMOGA : ‘ಒಂದು ಕಾನೂನಾತ್ಮ ಕೊಲೆ’ ನಾಟಕಕ್ಕೆ (Drama) ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್ ಲಭಿಸಿದೆ. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಸಂಜೆ ಶಿವಮೊಗ್ಗದ ಹೊಂಗಿರಣ ತಂಡದ ವತಿಯಿಂದ ನಾಟಕ ಆಯೋಜಿಸಲಾಗಿತ್ತು.
ಶಿವಕುಮಾರ ಮಾವಲಿ ಅವರ ರಚನೆಯ ನಾಟಕಕ್ಕೆ (Drama) ಕಾಮಿಡಿ ಕಿಲಾಡಿ (Comedy Kiladi) ಖ್ಯಾತಿಯ ಹೊಂಗಿರಣ ಚಂದ್ರು ವಿನ್ಯಾಸ, ರಂಗ ಸಂಯೋಜನೆ ಮತ್ತು ನಿರ್ದೇಶನ ಮಾಡಿದ್ದಾರೆ. ಶಿವಮೊಗ್ಗದ ಹಲವು ಹಿರಿಯ ಮತ್ತು ಕಿರಿಯ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ – IMPACT | ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಜೈಲ್ ಸರ್ಕಲ್ಗೆ ಹೊಸ ಲುಕ್, ಏನೇನಾಗಿದೆ ಈಗ?
ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ರಚಿಸುವ ಕೆಲವು ಜನವಿರೋಧಿ ಕಾನೂನು ಮತ್ತು ಅದರ ಪರಿಣಾಮವನ್ನು ಜನರು ಅನುಭವಿಸುವ ಪರಿಯನ್ನು ವಿಡಂಬನಾತ್ಮಕವಾಗಿ ವಿಮರ್ಶಿಸಲಾಗಿದೆ. ನಾಟಕ ವೀಕ್ಷಿಸಲು ನಗರದ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ರಂಗಾಸಕ್ತರು ಆಗಮಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422