ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020
ಯುವತಿ ಜೊತೆಗೆ ತುಂಗಾ ನದಿಗೆ ಜಿಗಿದ ಯುವಕನ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೇಗೆ ನಡೀತಿದೆ ಶೋಧ ಕಾರ್ಯ?
ಬೈಪಾಸ್ ರಸ್ತೆಯಲ್ಲಿ ಸೇತುವೆ ಬಳಿ ಅನುಷಾ (20) ಮತ್ತು ಸಂತೋಷ್ (20) ಶುಕ್ರವಾರ ಮಧ್ಯಾಹ್ನ ತುಂಗಾ ಹೊಳೆಗೆ ಹಾರಿದ್ದರು. ಈವರೆಗೂ ಸಂತೋಷ್ ಪತ್ತೆಯಾಗಿಲ್ಲ. ಆತನ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅಗ್ನಿಶಾಮಕ ದಳ ಎರಡು ಬೋಟ್‍ಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಎರಡು ಟೀಮ್‍ನಿಂದ ಶೋಧ ಕಾರ್ಯ
ಅಗ್ನಿಶಾಮಕ ಸಿಬ್ಬಂದಿ ಎರಡು ಬೋಟ್‍ಗಳಲ್ಲಿ ಎರಡು ತಂಡವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಬೈಪಾಸ್ ಸೇತುವೆಯಿಂದ ಹಳೆ ಸೇತುವೆವರೆಗೆ ಒಂದು ತಂಡ ಶೋಧ ಕಾರ್ಯಾಚರಣೆ ಮಾಡುತ್ತಿದೆ. ಮತ್ತೊಂದು ತಂಡ ಹಳೆ ಸೇತುವೆಯಿಂದ ಮುಂದಕ್ಕೆ ಕಾರ್ಯಾಚರಣೆ ನಡೆಸುತ್ತಿದೆ.
ಹೊಳೆ ಮಧ್ಯೆ, ದಡದಲ್ಲೂ ಶೋಧ
ತುಂಗಾ ಹೊಳೆಯ ನಡುವೆ ಬಂಡೆಗಳಿವೆ, ನೀರಿನ ಹರಿವು ಕಡಿಮೆ ಆಗಿರುವುದರಿಂದ ಗಿಡಗಳು ಮೇಲೆ ಕಾಣಿಸುತ್ತಿವೆ. ಇವುಗಳ ನಡುವೆಯು ಸಂತೋಷ್ ಸಿಕ್ಕಿರಬಹುದು ಎಂದು ಶೋಧ ನಡೆಸಲಾಗುತ್ತಿದೆ. ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]