ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಜನವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಮಿಳುನಾಡಿನಲ್ಲಿ ಓಂ ಶಕ್ತಿ ದರ್ಶನ ಪಡೆದು ಶಿವಮೊಗ್ಗಕ್ಕೆ ಹಿಂತಿರುಗಿದ 50ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಭೀತಿ ಉಂಟಾಗಿದೆ.
ಓಂ ಶಕ್ತಿ ದರ್ಶನ ಪಡೆದು ಹಿಂತಿರುಗಿದ 50ಕ್ಕೂ ಹೆಚ್ಚು ಮಹಿಳೆಯರಲ್ಲಿ ಶನಿವಾರ ಸೋಂಕು ಕಾಣಿಸಿಕೊಂಡಿದೆ. ರಾಂಡಮ್ ಟೆಸ್ಟ್ ವೇಳೆ ಕರೋನ ಪಾಸಿಟಿವ್ ಬಂದಿರುವುದು ಗೊತ್ತಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಮತ್ತೆ ಕರೋನ ಸೋಂಕು ಹರಡುವ ಭೀತಿ ಎದುರಾಗಿದೆ.
ಪ್ರಥಮಿಕ, ದ್ವಿತೀಯ ಸಂಪರ್ಕ
ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಒಬ್ಬ ಸೋಂಕಿತನಿಂದ 9 ಪ್ರಾಥಮಿಕ, 6 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಬೇಕಿದೆ.
ಮತ್ತಷ್ಟು ಏರಿಕೆಯ ಆತಂಕ
ಶಿವಮೊಗ್ಗ, ಭದ್ರಾವತಿಯಿಂದ ನಾಲ್ಕೂವರೆ ಸಾವಿರ ಜನರು ಓಂ ಶಕ್ತಿ ಪ್ರವಾಸ ಕೈಗೊಂಡಿದ್ದರು. ಹಿಂತಿರುಗಿದ ಬಳಿಕ ಏಳು ದಿನ ಹೋಮ್ ಕ್ವಾರಂಟೈನ್’ಗೆ ಸೂಚಿಸಲಾಗಿದೆ. ರಾಂಡಮ್ ಟೆಸ್ಟ್’ಗಳನ್ನು ನಡೆಸಲಾಗುತ್ತಿದ್ದು, ಸೋಂಕು ಪತ್ತೆಯಾಗುತ್ತಿದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳದ ಭೀತಿ ಇದೆ.
‘ಓಂ ಶಕ್ತಿಗೆ ಹೋಗದಿದ್ದವರಿಗೂ ಬರುತ್ತಿದೆ’
ಇನ್ನು, ಓಂ ಶಕ್ತಿ ದರ್ಶನ ಪಡೆದು ಬಂದವರಿಗೆ ಕರೋನ ಸೋಂಕು ತಗುಲಿತ್ತಿರುವ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ‘ತಮಿಳುನಾಡಿನ ಓಂ ಶಕ್ತಿಗೂ ಜಿಲ್ಲೆಯಲ್ಲಿ ಕರೋನ ಹೆಚ್ಚಳವಾಗುತ್ತಿರುವುದಕ್ಕೂ ಸಂಬಂಧವಿಲ್ಲ. ಓಂ ಶಕ್ತಿಗೆ ಹೋಗದವರಿಗೂ ಸೋಂಕು ತಗುಲುತ್ತಿದೆ. ಗುಂಪಿನಲ್ಲಿ ಹೋದಾಗ ಕೆಲವರಿಗೆ ಬಂದಿರಬಹುದು. ಹಾಗಾಗಿ ಯಾತ್ರಾರ್ಥಿಗಳು ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಓಂ ಶಕ್ತಿ ಹೋದವರಿಂದಲೇ ಹೆಚ್ಚುತ್ತಿದೆ ಎಂಬುದು ಸುಳ್ಳು’ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ ನೂರಕ್ಕಿಂತಲೂ ಹೆಚ್ಚು ಮಂದಿಗೆ ಪಾಸಿಟಿವ್, ಹೆಚ್ಚಿದ ಆತಂಕ