ಶಿವಮೊಗ್ಗಕ್ಕೆ ನಾಳೆ ಪಾದಯಾತ್ರಿಗಳ ಪ್ರವೇಶ, ಶಿವಪೂಜೆ, ಪ್ರಸಾದ ವಿನಿಯೋಗ

ಶಿವಮೊಗ್ಗ
LIVE

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನ.27ರಂದು ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯರ ಪೀಠಾರೋಹಣದ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಇದರ ಅಂಗವಾಗಿ ನಡೆಯುತ್ತಿರುವ ಪಾದಯಾತ್ರೆ ನ.24ರಂದು ಶಿವಮೊಗ್ಗ ನಗರಕ್ಕೆ ಪ್ರವೇಶ ಮಾಡಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ತಿಳಿಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರುದ್ರಮುನಿ ಸಜ್ಜನ್‌, ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿಯಿಂದ ರಂಭಾಪುರಿ ಮಹಾಪೀಠದವರೆಗೆ 171 ಕಿ.ಮೀ ಪಾದಯಾತ್ರೆ ಈಗಾಗಲೇ ಆರಂಭವಾಗಿದೆ. ನ.23ರಂದು ಕೊಮ್ಮನಾಳು ತಲುಪಲಿದೆ.. ನ. 24ರಂದು ಅಬ್ಬಲಗೆರೆ, ನವುಲೆ, ಉಷಾ ನರ್ಸಿಂಗ್ ಹೋಂ, ರೈಲ್ವೆ ನಿಲ್ದಾಣ, ಸಹ್ಯಾದ್ರಿ ಕಾಲೇಜಿನಿಂದ ಪಂಚಾಚಾರ್ಯ ಐಟಿಐ ಸಂಸ್ಥೆಗೆ ಪಾದಯಾತ್ರಿಗಳು ಬರಲಿದ್ದಾರೆ. ಮಧ್ಯಾಹ್ನ ಅಲ್ಲಿ ಸೇರಿ ಶಿವಪೂಜೆ, ಪ್ರಸಾದ ಸ್ವೀಕಾರದ ನಂತರ ವಿಶ್ರಾಂತಿ ಪಡೆಯಲಿದ್ದಾರೆ ಎಂದರು.

ಆರು ಮಂದಿ ಶಿವಾಚಾರ್ಯರು, ನೂರಾರು ಭಕ್ತರೊಡನೆ ಲಕ್ಕಿನಕೊಪ್ಪ ಮಾರ್ಗವಾಗಿ ಬಾಳೆಹೊನ್ನೂರಿನತ್ತ ಹೊರಡುವ ಪಾದಯಾತ್ರಿಗಳ ತಂಡ ಮುಂದೆ ಉಂಬ್ಳೆಬೈಲು ವೀರಭದ್ರೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ ಎಂದು ಮಾಹಿತಿ ನೀಡಿದರು. 

ನವೀನ್ ವಾರದ್, ತೇಜು, ಚಂದ್ರಶೇಖರ್ ಪಾಟೀಲ್, ವಿಕ್ರಮ್, ನೀಲಕಂಠಪ್ಪ, ಮಾಲತೇಶ್, ಮಲ್ಲಿಕಾರ್ಜುನ್ ಇದ್ದರು.

ಇದನ್ನೂ ಓದಿ » ವಿದ್ಯಾನಗರ ರಸ್ತೆ ಡೇಂಜರ್‌, ಇನ್ನಷ್ಟು ಜೀವ ಹೋಗುತ್ತೆ ಹುಷಾರ್‌, ಇಲ್ಲಿ ಏನೇನೆಲ್ಲ ಸಮಸ್ಯೆ ಇದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment