ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಜೀವನದಲ್ಲಿ ಗುರಿ, ಆದರ್ಶಗಳಿದ್ದರೆ ನಮ್ಮಲ್ಲಿ ಯಾವ ಕೊರತೆಯಿದೆ ಎಂಬ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ (Padmashree Awardee) ಪುರಸ್ಕೃತ, ಚಾಣಕ್ಯ ವಿಶ್ವವಿದ್ಯಾಲಯದ ಕುಲಾಪತಿ ಡಾ.ಎಂ.ಕೆ.ಶ್ರೀಧರ್ ಹೇಳಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್‌ನಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಚಳವಳಿಯ ಮೂಲಕ ಆರ್‌ಎಸ್‌ಎಸ್ ಮತ್ತು ಎಬಿವಿಪಿಯ ಸಂಪರ್ಕಕ್ಕೆ ಬಂದೆ. ಈ ಎರಡೂ ಸಂಘಟನೆಗಳು ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರಧಾರೆಯ ಮೇಲೆ ಕೆಲಸ ಮಾಡಲು ಪ್ರೇರಣೆ ನೀಡಿದವು ಎಂದರು.
ಯಾವುದೆ ಪ್ರಶಸ್ತಿ ಬಂದಾಗ ಅದು ನನಗೆ ಬಂದಿತು ಎಂದುಕೊಳ್ಳುವುದು ಮೂರ್ಖತನ. ಜೀವನದಲ್ಲಿ ಆದರ್ಶ, ಗುರಿ ಬೇಕು. ಅದರ ಜತೆ ಪ್ರಯತ್ನವೂ ಅವಶ್ಯಕ. ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಕೆಲಸಗಳು ಯಾರೋ ಒಬ್ಬರಿಂದ ಆಗಿಲ್ಲ. ಹಲವರ ಶ್ರಮದಿಂದ ಅವು ಆಗಿವೆ. ಆದರೆ ಪ್ರಶಸ್ತಿ ಮಾತ್ರ ವ್ಯಕ್ತಿಗೆ ಸಿಕ್ಕಿದೆ. ತಾವು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ತೆರಳಿದ ವೇಳೆ ಪ್ರಶಸ್ತಿ ಪಡೆಯಲು ಬಂದಿದ್ದ ಇತರರ ಮುಂದೆ ನನ್ನ ಸಾಧನೆ ಏನೂ ಅಲ್ಲ ಎನ್ನಿಸಿತು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಂ.ಕೆ.ಶ್ರೀಧರ್ ಅವರಿಗೆ ಶಿವಮೊಗ್ಗದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಇದು ವ್ಯಕ್ತಿಯೊಬ್ಬನಿಂದ ಆದ ಕೆಲಸವಲ್ಲ. ಆ ವ್ಯಕ್ತಿ ಈ ಸಾಧನೆ ಮಾಡಲು ಬಾಲ್ಯದಿಂದ ಸಹಕರಿಸಿದ ಪೋಷಕರು, ಶಿಕ್ಷಕರು, ಬಂಧುಗಳು, ಸ್ನೇಹಿತರು ಕಾರಣರಾಗಿರುತ್ತಾರೆ. ಜೀವನದಲ್ಲಿ ನನಗೆ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಸಂಘಟನೆಗಳಿಗೂ ಧನ್ಯವಾದಗಳು. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣವಿದೆ. ಕೆಟ್ಟ ವ್ಯಕ್ತಿಯಲ್ಲಿನ ಒಳ್ಳೆ ಗುಣವನ್ನು ನಾವು ಗುರುತಿಸಬೇಕು. ಆಗ ಬದಲಾವಣೆ ಸಾಧ್ಯ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಈಗ ಮೊದಲಿನಂತೆ ಪದ್ಮ ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅದೆ ಈಗ ಅರ್ಹರನ್ನು ಹುಡುಕಿಕೊಂಡು ಬರುತ್ತಿದೆ. ಅದಕ್ಕೆ ಎಂ.ಕೆ.ಶ್ರೀಧರ್ ಉದಾಹರಣೆ. ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಮಕ್ಕಳಿಗೆ ಏನು ಹೇಳಿಕೊಡಬೇಕು ಎಂಬ ಬಗ್ಗೆ ಚರ್ಚೆಗಳು ನಿರಂತರವಾಗಿ ನಡೆಯುತ್ತಲೆ ಬಂದಿವೆ. ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಶೈಕ್ಷಣಿಕ ಕ್ರಾಂತಿ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಧರ್ ಭೂಪಾಳಂ ವಹಿಸಿದ್ದರು. ಧರ್ಮಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜೆ.ಎಸ್. ಸದಾನಂದ, ಎ.ಜೆ.ರಾಮಚಂದ್ರ, ಡಾ.ರವಿಕಿರಣ್, ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಇದ್ದರು.
ಇದನ್ನೂ ಓದಿ – ಯುವತಿಗೆ ವಂಚನೆ, ಹಸೆಮಣೆ ಏರಲು ಸಜ್ಜಾಗಿದ್ದ ಸಾಗರ ಬಿಜೆಪಿ ಮುಖಂಡ ಅರೆಸ್ಟ್