ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JANUARY 2024
ಶಿವಮೊಗ್ಗ : ವಿಷದ ಬಾಟಲಿಯೊಂದಿಗೆ ವಿಡಿಯೋ (Video) ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಾಪತ್ತೆಯಾಗಿದ್ದ ಮಹಾನಗರ ಪಾಲಿಕೆ ಸ್ವಚ್ಛತಾ ಕೆಲಸದ ಮೇಸ್ತ್ರಿ ಮೂರ್ತಿ ಎಂಬುವರು ಶುಕ್ರವಾರ ಸಂಜೆ ಉಂಬ್ಳೆಬೈಲ್ ಜಂಕ್ಷನ್‌ನಲ್ಲಿ ಪತ್ತೆಯಾಗಿದ್ದಾರೆ.
13ನೇ ವಾರ್ಡ್ ಮೇಸ್ತ್ರಿ ಮೂರ್ತಿ ಶುಕ್ರವಾರ ಮಧ್ಯಾಹ್ನ ಸೆಲ್ಫಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಮಾಜಿ ಪಾಲಿಕೆ ಸದಸ್ಯರೊಬ್ಬರು ಸುಳ್ಳು ಆರೋಪ ಹೋರಿಸಿದ್ದರಿಂದ ತನ್ನನ್ನು ಮೂಲ ಹುದ್ದೆ ಚರಂಡಿ ತೆಗೆಯುವ ಕೆಲಸ ಮಾಡುವಂತೆ ಹೆಲ್ತ್ ಇನ್‌ಸ್ಪೆಕ್ಟರ್ ಸೂಚಿಸಿದ್ದಾರೆ. ತಪ್ಪು ಮಾಡದಿದ್ದರೂ ಈ ರೀತಿ ಮಾಡಲಾಗಿದೆ. ನನಗೆ ವಿಷ ಸೇವಿಸುವುದು ಬಿಟ್ಟು ಬೇರೆ ದಾರಿ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ವಿಡಿಯೋ ನೋಡಿದ ತಕ್ಷಣ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದ್, ಅಧಿಕಾರಿಗಳು ಪೊಲೀಸರೊಂದಿಗೆ ಹುಡುಕಾಟ ನಡೆಸಿದಾಗ ಉಂಬ್ಳೆಬೈಲ್ ಜಂಕ್ಷನ್‌ನಲ್ಲಿ ಮೂರ್ತಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ » ಮೆಡಿಕಲ್ ಟೆಸ್ಟ್ ಬಳಿಕ ‘ಭೂತ’ ಅರೆಸ್ಟ್, 3 ಫಟಾಫಟ್ ನ್ಯೂಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422