ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 AUGUST 2023
SHIMOGA : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ (BJP) ವತಿಯಿಂದ ವಿಭಜನ್ ವಿಭಿಷಿಕಾ ಸ್ಮೃತಿ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಅಶೋಕ ವತ್ತದಿಂದ (Ashoka Circle) ಶಿವಪ್ಪನಾಯಕ ಪ್ರತಿಮೆವರೆಗೆ ಪಂಜಿನ ಮೆರವಣಿಗೆ (Panjina Mervanige) ನಡೆಸಲಾಯಿತು. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಸಾರ್ವಜನಿಕ ಸಭೆ ನಡೆಸಲಾಯಿತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಯಾರೆಲ್ಲ ಏನೇನು ಹೇಳಿದರು?
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದ್ದು ಒಂದೆರಡು ದಿನವಲ್ಲ. ಮೊಘಲರು, ಬ್ರಿಟೀಷರ ವಿರುದ್ಧ ದೇಶಭಕ್ತರ ಹೋರಾಟ ಮಾಡಿದರು. ಆದರೆ ಅಧಿಕಾರಕ್ಕಾಗಿ ದೇಶವನ್ನು ಭಾರತ, ಪಾಕಿಸ್ತಾನ ಎಂದು ಒಡೆದವರು ಕಾಂಗ್ರೆಸಿಗರು. ಆ ಪಕ್ಷದ ಮುಖಂಡರು ಯುವಕರ ಕ್ಷಮೆ ಕೇಳಬೇಕು. ಈಗ ಪಾಕಿಸ್ತಾನದಲ್ಲಿಯು ಜನರು ನರೇಂದ್ರ ಮೋದಿ ಅವರು ತಮ್ಮ ದೇಶದ ಪ್ರಧಾನಿ ಆಗಬೇಕು ಎಂದು ಬಯಸುತ್ತಿದ್ದಾರೆ. ಮುಂದೆ ಪಾಕಿಸ್ತಾನವು ಭಾರತದಲ್ಲಿ ಸೇರಲಿದ್ದು ಅಖಂಡ ಭಾರತ ನಿರ್ಮಾಣವಾಗಲಿದೆ.
ಎಂ.ಬಿ.ಭಾನುಪ್ರಕಾಶ್, ಮಾಜಿ ಎಂಎಲ್ಸಿ : ಪಠ್ಯ ಪುಸ್ತಕದಿಂದ ಸಾವರ್ಕರ್ ಅವರ ಪಾಠ ತೆಗೆಯಲಾಗಿದೆ. ಅದೇ ಕಾರಣಕ್ಕೆ ಜಿಲ್ಲಾ ಪಂಚಾಯಿತಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಭೆ ನಡೆಸುವಾಗ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಓದುವ ಗುಣವಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹುಟ್ಟಿರಲಿಲ್ಲ. ಅವರು ಹೋರಾಟಗಾರರ ಕುರಿತು ಹಗುರವಾಗಿ ಮಾತನಾಡಬಾರದು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸರ್ಕಾರಿ ಕಚೇರಿಗಳು ಜಗಮಗ, ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ರಂಗೋಲಿ ಹಬ್ಬ
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ದತ್ತಾತ್ರಿ, ಮೇಯರ್ ಶಿವಕುಮಾರ್ ಸೇರಿದಂತೆ ಹಲವರು ಪಂಜಿನ ಮೆರವಣಿಗೆಯಲ್ಲ ಪಾಲ್ಗೊಂಡರು.