ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021
ತಾಳಗುಪ್ಪದ ರೈಲ್ವೆ ನಿಲ್ದಾಣದಲ್ಲಿಯೂ ರೈಲ್ವೆ ಪಾರ್ಸಲ್ ಸರ್ವಿಸ್ ಆರಂಭವಾಗಿದೆ. ಈ ಸಂಬಂಧ ನೈಋತ್ಯ ರೈಲ್ವೆ ವಿಭಾಗದ ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಡಾ. ಮಂಜುನಾಥ ಕನಮಾಡಿ ಪ್ರಕಟಣೆಯಲ್ಲಿ ತಿಳಿಸಿದೆ
ಯಾವೆಲ್ಲ ರೈಲಿನಲ್ಲಿ ಪಾರ್ಸಲ್ ಸೇವೆ ಇದೆ?
ರೈಲು ಸಂಖ್ಯೆ 06529 / 06530 ಬೆಂಗಳೂರು – ತಾಳಗುಪ್ಪ – ಬೆಂಗಳೂರು (ಪ್ರತಿ ದಿನ)
ರೈಲು ಸಂಖ್ಯೆ 06227 / 06228 ಮೈಸೂರು – ತಾಳಗುಪ್ಪ – ಮೈಸೂರು (ಪ್ರತಿ ದಿನ) (ಬೆಂಗಳೂರು ಮೂಲಕ ಸಂಚಾರ)
ರೈಲು ಸಂಖ್ಯೆ 06295 / 06296 ಮೈಸೂರು – ತಾಳಗುಪ್ಪ – ಮೈಸೂರು ಇಂಟರ್ ಸಿಟಿ ಎಕ್ಸ್ಪ್ರಸ್ (ಪ್ರತಿದಿನ)
ಏನೆಲ್ಲ ಪಾರ್ಸಲ್ ಕಳುಹಿಸಬಹುದು?
ದೇಶಾದ್ಯಂತ ರೈಲ್ವೆ ಪಾರ್ಸೆಲ್ ಸರ್ವಿಸ್ ಇದೆ. ರೈಲ್ವೆ ಇಲಾಖೆಯ ಪ್ರಕಾರ ಒಂಭತ್ತು ಸಾವಿರಕ್ಕಿಂತಲೂ ಹೆಚ್ಚು ರೈಲುಗಳಲ್ಲಿ ಪಾರ್ಸಲ್ ಸರ್ವಿಸ್ ಇದೆ. ತಾಳಗುಪ್ಪ ಸೇರಿದಂತೆ 750ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಪಾರ್ಸಲ್ ಕಚೇರಿಗಳಿವೆ.
ಹಣ್ಣು, ತರಕಾರಿ ,ಆಹಾರ ಧಾನ್ಯ, ಮೀನು, ಪೌಲ್ಟ್ರಿ , ವಿದ್ಯುತ್ ಉಪಕರಣಗಳು, ಸೈಕಲ್, ಬೈಕು, ರಿಕ್ಷಾ, ಮೆಷಿನರಿಗಳು, ಔಷಧ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಪಾರ್ಸಲ್ಗಳನ್ನು ರೈಲು ಮೂಲಕ ಕಳುಹಿಸಬಹುದಾಗಿದೆ.
ಸ್ಪೋಟಕಗಳು, ಅಗ್ನಿ ಅವಘಡಗಳಿಗೆ ಕಾರಣವಾಗುವ ವಸ್ತುಗಳು, ಆಸಿಡ್ಗಳು ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುವ ಯಾವುದೆ ವಸ್ತು, ಉತ್ಪನ್ನಗಳನ್ನು ರೈಲ್ವೆ ಪಾರ್ಸಲ್ನಲ್ಲಿ ಅವಕಾಶವಿಲ್ಲ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422