SHIVAMOGGA LIVE NEWS | SHIMOGA | 10 ಜೂನ್ 2022
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇನ್ಮುಂದೆ ಕಾರು ನಿಲ್ಲಿಸುವಂತಿಲ್ಲ. ಟ್ರಾಫಿಕ್ ಪೊಲೀಸರು ಈ ಕುರಿತು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸವಳಂಗ ರಸ್ತೆಯಲ್ಲಿ ನಿತ್ಯ ವಾಹನಗಳ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಈ ರಸ್ತೆಯಲ್ಲಿ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಇದೆ ಕಾರಣಕ್ಕೆ ಡಿಸಿ ಆಫೀಸ್ ಮುಂಭಾಗ ವಾಹನಗಳ ನಿಲುಗಡೆಯನ್ನ ನಿಷೇಧಿಸಲಾಗಿದೆ.
ಡಿಸಿ ಕಚೇರಿಯ ಕಾಂಪೌಂಡ್’ಗೆ ಹೊಂದಿಕೊಂಡಂತೆ ಸವಳಂಗ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.
ಸರ್ಕಾರಿ ವಾಹನಗಳೇ ಹೆಚ್ಚಾಗಿ ನಿಲ್ಲುತ್ತವೆ
ಡಿಸಿ ಕಚೆರಿ ಮುಂದೆ ರಸ್ತೆಯಲ್ಲಿ ಅಧಿಕಾರಿಗಳ ಕಾರುಗಳೆ ಹೆಚ್ಚಾಗಿ ನಿಲ್ಲುತ್ತವೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಭೆಗಳನ್ನು ಆಯೋಜಿಸಿದಾಗ, ಸರ್ಕಾರಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಪ್ರತಿಯೊಬ್ಬ ಅಧಿಕಾರಿಯು ಒಂದೊಂದು ಕಾರಿನಲ್ಲಿ ಬರುವುದರಿಂದ ಜಯನಗರ ಪೊಲೀಸ್ ಠಾಣೆ ಮುಂದೆಯಿಂದ ಮಹಾವೀರ ಸರ್ಕಲ್ ತನಕ ಕಾರುಗಳು ನಿಲ್ಲುತ್ತಿದ್ದವು.
ಅಧಿಕಾರಿಗಳು ಕಾರು ನಿಲ್ಲಿಸುವುದನ್ನು ಗಮನಿಸಿದ ಸಾರ್ವಜನಿಕರು ಕೂಡ ಡಿಸಿ ಕಚೇರಿ ಮುಂಭಾಗ ವಾಹಗಳ ನಿಲುಗಡೆ ಮಾಡಲು ಶುರು ಮಾಡಿದ್ದರು. ಇದೆಲ್ಲಕ್ಕೂ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರು ಪಾರ್ಕಿಂಗ್ ನಿಷೇಧ ಮಾಡಿದ್ದಾರೆ.
ಇಲ್ಲಿ ಪಾರ್ಕಿಂಗ್’ನದ್ದೇ ಸಮಸ್ಯೆ
ಡಿಸಿ ಕಚೇರಿ ಮುಂಭಾಗ ವಾಹನಗಳ ಪಾರ್ಕಿಂಗ್’ಗೆ ತುಂಬಾ ಸಮಸ್ಯೆ ಇದೆ. ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವು ಕಚೇರಿಗಳು ಇಲ್ಲಿವೆ. ಇಷ್ಟೊಂದು ಕಚೇರಿಗಳಿದ್ದರೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
ಇದನ್ನೂ ಓದಿ – ಇವತ್ತಿನ ಸುದ್ದಿಗಳನ್ನು ಓದಲು ಲಿಂಕ್ ಕ್ಲಿಕ್ ಮಾಡಿ
ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆ ಕಾರುಗಳನ್ನು ಸವಳಂಗ ರಸ್ತೆಯಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸವಳಂಗ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಡಿಸಿ ಕಚೇರಿ ಹಿಂಭಾಗ ಜಾಗವಿದೆ
ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಖಾಲಿ ಜಾಗವಿದೆ. ವಾಹಗಳ ನಿಲುಗಡೆಗು ಅವಕಾಶವಿದೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ಶೆಲ್ಟರ್ ವ್ಯವಸ್ಥೆಯು ಇದೆ. ಆದರೆ ಇಲ್ಲಿ ಗೇಟ್ ಬಂದ್ ಮಾಡಿ, ವಾಹನಗಳನ್ನು ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಧಿಕಾರಿಗಳ ವಾಹನಗಳನ್ನಾದರೂ ಇಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಿದರೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾರ್ವಜನಿಕರ ವಾಹನಗಳಿಗೆ ನಿಲುಗಡೆಗೆ ಸೂಕ್ತ ವ್ಯವಸ್ಥೆ ಆಗಲಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೆ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾದ್ಯವಾಗದಿರುವುದು ವಿಪರ್ಯಾಸವಾಗಿದೆ.
ಇದನ್ನೂ ಓದಿ – ಶಿವಮೊಗ್ಗ ನಗರದ ವಿವಿಧೆಡೆ ಜೂ.11ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.