ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021
ರನ್ನಿಂಗ್ ರೇಸ್’ನಲ್ಲಿ ಫಸ್ಟ್. ಜಾವಲಿನ್ ಎಸೆತದಲ್ಲಿ ಗುರಿ ತಲುಪದ ಶಿವಮೊಗ್ಗ ಪಾಲಿಕೆ ಮೇಯರ್.
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಪಾಲ್ಗೊಂಡಿದ್ದರು. ಅವರೊಂದಿಗೆ ಪಾಲಿಕೆಯ ಕಾರ್ಪೊರೇಟರ್’ಗಳು ಪಕ್ಷಭೇದ ಮರೆತು ಭಾಗವಹಿಸಿ, ಖುಷಿಪಟ್ಟರು.
ಕಾರ್ಮಿಕರು ಖುಷಿಯಾಗಿದ್ದರೆ ನಗರ ಸ್ವಚ್ಛ
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟಕ್ಕೆ ಮೇಯರ್ ಸುನೀತಾ ಅಣ್ಣಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪೌರ ಕಾರ್ಮಿಕರು ಖುಷಿಯಾಗಿದ್ದರೆ ಶಿವಮೊಗ್ಗ ನಗರ ಸ್ವಚ್ಛವಾಗಿರುತ್ತದೆ. ಪಾಲಿಕೆ ಸದಸ್ಯರಿಗೆ ಪೌರ ಕಾರ್ಮಿಕರ ಸಹಕಾರ ಅತ್ಯಗತ್ಯ ಎಂದರು.
ಕಮಿಷನರ್ ಚಿದಾನಂದ ವಟಾರೆ ಮಾತನಾಡಿ, ಪೌರ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮಾಡಬೇಕು. ಕ್ರೀಡಾಕೂಟದಿಂದಾಗಿ ಕೆಲಸದ ಒತ್ತಡ ನಿವಾರಣೆಯಾಗಲಿದೆ. ಆರೋಗ್ಯವು ವೃದ್ಧಿಯಾಗಲಿದೆ ಎಂದರು.
ವಿವಿಧ ಕ್ರೀಡಾಕೂಟಗಳು
ಪಾಲಿಕೆ ಸದಸ್ಯರು ವಿವಿಧ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಪೌರ ಕಾರ್ಮಿಕರಲ್ಲಿ ಉತ್ಸಾಹ ತುಂಬಿದರು. ಬಳಿಕ ನೆಹರೂ ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆ ನಡೆಯಿತು. ಗೆಲುವು ದಾಖಲಿಸಿದ ಪೌರಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.
ಉಪ ಮೇಯರ್ ಶಂಕರ್ ಗನ್ನಿ, ಪೌಲಿಕೆ ನೌಕರರ ಸಂಘದ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಗೋವಿಂದ ಕ್ರೀಡಾ ಸಮಿತಿಯ ಅಧ್ಯಕ್ಷ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಆರ್.ಸಿ ನಾಯ್ಕ್, ಶಿವಕುಮಾರ್ ಹಾಗೂ ಪಾಲಿಕೆಯ ಸದಸ್ಯರಾದ ಸುವರ್ಣ ಶಂಕರ್, ಸುರೇಖಾ ಮುರಳಿಧರ್, ವಿಶ್ವನಾಥ್, ವಿಶ್ವಾಸ್, ರೇಖಾ ರಂಗನಾಥ್, ಪ್ರಭು ಸೇರಿದಂತೆ ಹಲವರು ಇದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200