ಶಿವಮೊಗ್ಗದಲ್ಲಿ ಪೊಲೀಸರಿಗೆ ನೇವಿ ಬ್ಲೂ ಪೀಕ್‌ ಕ್ಯಾಪ್‌

ಶಿವಮೊಗ್ಗ
LIVE

ಶಿವಮೊಗ್ಗ: ಮಾಚೇನಹಳ್ಳಿಯ ಕೆಎಸ್‌ಆರ್‌ಪಿ 8ನೇ ಪಡೆಯ ಹೆಡ್‌ ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗಳಿಗೆ ನೇವಿ ಬ್ಲೂ ಪೀಕ್‌ ಕ್ಯಾಪ್‌ಗಳನ್ನು ವಿತರಿಸಲಾಯಿತು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಘಟಕದ 500 ಆರ್‌ಹೆಚ್‌ಸಿ ಹಾಗೂ ಆರ್‌ಪಿಸಿ ರವರಿಗೆ ಕೆಎಸ್‌ಆರ್‌ಪಿ ಕಮಾಂಡೆಂಟ್ ಎಸ್. ಯುವಕುಮಾರ್‌, ಹೊಸ ನೇವಿ ಬ್ಲೂ ಪೀಕ್ ಕ್ಯಾಪ್‌ನ್ನು ವಿತರಿಸಿದರು. ಈ ಸಮಾರಂಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಎಸ್. ಚಂದ್ರಶೇಖರ್, ಹಾಗೂ ಸಹಾಯಕ ಕಮಾಂಡೆಂಟ್ ರಾಚಪ್ಪ ಬಿ. ಕಾಜಗಾರ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಪೊಲೀಸ್‌ ಸಿಬ್ಬಂದಿಗೆ ಪೀಕ್‌ ಕ್ಯಾಪ್‌ ವಿತರಿಸುವಂತೆ ಆದೇಶಿಸಿತ್ತು. ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ಸಿಬ್ಬಂದಿಗೆ ಪೀಕ್‌ ಕ್ಯಾಪ್‌ಗಳನ್ನು ವಿತರಿಸಿದ್ದರು.

ಇದನ್ನೂ ಓದಿ » ವಿದ್ಯಾನಗರ ರಸ್ತೆ ಡೇಂಜರ್‌, ಇನ್ನಷ್ಟು ಜೀವ ಹೋಗುತ್ತೆ ಹುಷಾರ್‌, ಇಲ್ಲಿ ಏನೇನೆಲ್ಲ ಸಮಸ್ಯೆ ಇದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment