ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 3 ಸೆಪ್ಟಂಬರ್ 2020
ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರ ಪಾರ್ಥೀವ ಶರೀರವನ್ನು ಭದ್ರಾವತಿಗೆ ರವಾನಿಸಲಾಗಿದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಕೋವಿಡ್ ವಾರ್ಡ್‍ನಲ್ಲಿ ಬೆಂಬಲಿಗರ ಆಕ್ರಂದನ
ಅಪ್ಪಾಜಿಗೌಡ ಅವರು ನಿಧನರಾದ ವಿಚಾರ ತಿಳಿಯುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆ ಬಳಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ಜಮಾವಣೆಯಾದರು. ಕೆಲವರು ದುಃಖ ತಾಳಲಾರದೆ ಕೋವಿಡ್ ವಾರ್ಡ್‍ಗೆ ನುಗ್ಗಿದ್ದಾರೆ.
‘ಅಣ್ಣಾ ಏಳಣ್ಣ, ನಮ್ಮನ್ನ ನೋಡಣ್ಣ’
ಕೋವಿಡ್ ವಾರ್ಡ್‍ನಲ್ಲಿ ಅಪ್ಪಾಜಿಗೌಡ ಅವರ ಪಾರ್ಥೀವ ಶರೀರದ ಮುಂದೆ ಬೆಂಬಲಿಗರು ಅಳಲು ತೋಡಿಕೊಂಡರು. ಅಣ್ಣಾ ಏಳಣ್ಣ, ನಮ್ಮನ್ನ ನೋಡಣ್ಣ ಎಂದು ಕಣ್ಣೀರು ಸುರಿಸಿದರು. ಕೆಲವರು ಅಪ್ಪಾಜಿಗೌಡರ ಕಾಲು ಉಜ್ಜಿ, ಕಾಲು ಹಿಡಿದು ಬೇಡಿಕೊಂಡು ಅತ್ತರು. ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಪಾರ್ಥಿವ ಶರೀರ ಭದ್ರಾವತಿಗೆ
ಮತ್ತೊಂದೆಡೆ ಕೋವಿಡ್ ನಿಯಮದಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಪ್ಪಾಜಿಗೌಡರ ಪಾರ್ಥೀವ ಶರೀರವನ್ನು ಸೀಲ್ ಮಾಡಿ ಭದ್ರಾವತಿಗೆ ಕಳುಹಿಸಲಾಯಿತು. ಆಂಬುಲೆನ್ಸ್ ಮೂಲಕ ಅಪ್ಪಾಜಿಗೌಡ ಅವರ ಪಾರ್ಥೀವ ಶರೀರವನ್ನು ಭದ್ರಾವತಿಗೆ ರವಾನಿಸಲಾಯಿತು.
ಮನೆ ಬಳಿ ಜನ ಸಾಗರ
ಅಪ್ಪಾಜಿಗೌಡ ಅವರು ನಿಧನರಾದ ವಿಚಾರ ತಿಳಿಯುತ್ತಿದ್ದಂತೆ ಭದ್ರಾವತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಸಾವಿರಾರು ಜನರು ಅಪ್ಪಾಜಿಗೌಡ ಅವರ ಮನೆ ಬಳಿ ಜಮಾವಣೆಯಾಗಿದ್ದಾರೆ. ಅಪ್ಪಾಜಿಗೌಡರ ಅಂತಿಮ ದರ್ಶನ ಪಡೆಯಬೇಕು ಎಂದು ಕಾದಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಅಪ್ಪಾಜಿಗೌಡ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಈಗಾಗಲೇ ಮನೆ ಬಳಿ ಬ್ಯಾರಿಕೇಡ್ ಹಾಕಿದ್ದು, ಜನರನ್ನು ನಿಯಂತ್ರಿಸುತ್ತಿದ್ದಾರೆ. ಬೆಳಗ್ಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]