ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಅಕ್ಟೋಬರ್ 2019
ಜಿಲ್ಲೆಯಲ್ಲಿ ಅತಿ ಹೆಚ್ಚು ಓದುಗರನ್ನು ತಲುಪುತ್ತಿರುವ ಮಾಧ್ಯಮಗಳಲ್ಲಿ ಒಂದು ಶಿವಮೊಗ್ಗ ಲೈವ್.ಕಾಂ. ಪ್ರತಿ ತಿಂಗಳು ಒಂದು ಲಕ್ಷ ಜನರು ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿ ಓದುತ್ತಾರೆ ಅನ್ನುತ್ತದೆ ಗೂಗಲ್ ಸಂಸ್ಥೆ.
ಸತತ ಎರಡು ವರ್ಷದಿಂದ ಆನ್’ಲೈನ್’ನಲ್ಲಿ ಶಿವಮೊಗ್ಗದ ಸುದ್ದಿ ನೀಡುತ್ತಿರುವುದು ನಮ್ಮ ಹೆಮ್ಮೆ. ಈ ನಡುವೆ ಶಿವಮೊಗ್ಗಕ್ಕಾಗಿ ಅಪ್ಪಟ ಲೋಕಲ್ ಸರ್ಚ್ ಎಂಜಿನ್ ಆರಂಭಿಸಲಾಗುತ್ತಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿ ಓದುತ್ತಿರುವ ಲಕ್ಷ ಜನರಿಗೆ ಫೋನ್ ಡೈರಿ ವೆಬ್’ಸೈಟ್ ಮೂಲಕ, ಈ ಸರ್ಚ್ ಇಂಜಿನ್’ನ ಸೇವೆ ಸಿಗಲಿದೆ.
ಎಲ್ಲವು ಕೇವಲ ಮೂರು ರುಪಾಯಿಯಲ್ಲಿ..!
ಪತ್ರಿಕೆ, ಟಿವಿಗಳಲ್ಲಿ ಲಕ್ಷ ಲಕ್ಷ ದುಡ್ಡು ಸುರಿದು ದೊಡ್ಡ ದೊಡ್ಡ ಜಾಹೀರಾತುಗಳನ್ನು ಪ್ರಕಟಿಸುವವರಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಯೋಚನೆಯೊಂದಿಗೆ ಆರಂಭವಾಗುತ್ತಿದೆ ಫೋನ್ ಡೈರಿ ವೆಬ್’ಸೈಟ್. ಇದರಲ್ಲಿ ಸಣ್ಣಪುಟ್ಟ ಉದ್ಯಮದವರು ತಮ್ಮ ಹೆಸರು ನೊಂದಾಯಿಸಿ, ಜಾಹೀರಾತು ಪ್ರಕಟಿಸಬಹುದಾಗಿದೆ. ಉದ್ಯಮದ ಹೆಸರು, ವಿಳಾಸ, ಫೋನ್ ನಂಬರ್, ಶಿವಮೊಗ್ಗ ನಗರದ ಯಾವ ವಾರ್ಡ್’ನಲ್ಲಿ ನಿಮ್ಮ ಉದ್ಯಮವಿದೆ ಅನ್ನುವ ಮಾಹಿತಿಯನ್ನು ಜಾಹೀರಾತಿನಲ್ಲಿ ಪ್ರಕಟಿಸಬಹುದಾಗಿದೆ. ಜೊತೆಗೆ ಎರಡು ಫೋಟೊ ಕೂಡ ಬಳಸಬಹುದು. ಇದಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಬೇಕಿಲ್ಲ. ಸಾವಿರಾರು ರೂ. ಸುರಿಯಬೇಕಿಲ್ಲ. ಎಲ್ಲವು ಕೇವಲ ಮೂರು ರೂಪಾಯಿಯಲ್ಲಿ ಆಗುತ್ತದೆ.
ಬೈಟು ಕಾಫಿಗಿಂತಲು ಕಡಿಮೆ ರೇಟಲ್ಲಿ ಜಾಹೀರಾತು ಪ್ರಕಟಿಸಬೇಕು ಅನ್ನುವುದು ಫೋನ್ ಡೈರಿ ತಂಡದ ಯೋಚನೆ. ಇದಕ್ಕಾಗಿಯೆ ಪ್ರತಿ ದಿನಕ್ಕೆ ಮೂರು ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಣ್ಣ ಮೊತ್ತ, ಸಣ್ಣ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಅನ್ನುವ ಯೋಚನೆ.ಫೋನ್ ಡೈರಿಯಿಂದ ಸಣ್ಣ ಸಣ್ಣ ಉದ್ಯಮ, ಉದ್ಯಮಿಗಳಿಗೆ ಹೇಗೆಲ್ಲ ಅನುಕೂಲವಾಗಲಿದೆ ಅನ್ನುವುದನ್ನು ನಾಳಿನ ಸೀರಿಸ್’ನಲ್ಲಿ ಹೇಳುತ್ತೇವೆ. ಶಿವಮೊಗ್ಗ ಲೈವ್.ಕಾಂಗೆ ನೀಡಿದಂತೆ ಫೋನ್ ಡೈರಿಗು ನಿಮ್ಮ ಬೆಂಬಲವಿರಲಿ.