ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ

ಶಿವಮೊಗ್ಗ ಲೈವ್.ಕಾಂ | SHIMOGA | 22 ಏಪ್ರಿಲ್ 2020
ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರಿಗೆ ದಿಢೀರ್ ಫೋನ್ ಮಾಡಿದ್ದಾರೆ. ಬೆಳಗ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಒಂದೂವರೆ ನಿಮಿಷದ ಮಾತು
ಡಿ.ಹೆಚ್.ಶಂಕರಮೂರ್ತಿ ಅವರಿಗೆ ಬೆಳಗ್ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಒಂದೂವರೆ ನಿಮಿಷ ಮಾತನಾಡಿದ್ದಾರೆ. ಹಿಂದಿಯಲ್ಲೆ ಮಾತು ಆರಂಭಿಸಿದ ಪ್ರಧಾನಿ ಮೋದಿ, ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ.
ಲಾಕ್ಡೌನ್ ಟೈಮಲ್ಲಿ ಏನು ಮಾಡುತ್ತಿದ್ದೀರಿ?
ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿ ಹೇಗೆ ಸಮಯ ಕಳಿಯುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಅವರು ಡಿ.ಹೆಚ್.ಶಂಕರಮೂರ್ತಿ ಅವರಿಗೆ ವಿಚಾರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್ಡೌನ್ ಅವಧಿಯಲ್ಲಿ ಹೊರ ಬರದಂತೆ ಸೂಚಿಸಿವೆ. ಹಾಗಾಗಿ ನಾನು ಮನೆಯಲ್ಲೇ ಇದ್ದೇನೆ. ಫೋನ್ ಮೂಲಕವೇ ಎಲ್ಲವನ್ನು ನಿಭಾಯಿಸುತ್ತಿದ್ದೇನೆ ಎಂದು ಶಂಕರಮೂರ್ತಿ ಅವರು ಪ್ರಧಾನಿ ಅವರಿಗೆ ತಿಳಿಸಿದ್ದಾರೆ.

ಕಾರ್ಯಕರ್ತರಿಗೆ ಅನುಭವ ತಿಳಿಸಿ
ಇದೇ ವೇಳೆ ನಿಮ್ಮ ರಾಜಕೀಯ ಅನುಭವ ಮತ್ತ ಪಕ್ಷ ಸಂಘಟನೆ ಅನುಭವ ಬೇರೆಯವರಿಗೆ ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕರಮೂರ್ತಿ ಅವರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆಯೂ ತಿಳಿಸಿದ್ದಾರೆ.


ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com






