ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪೊಲೀಸರ ನಿರಂತರ ದಾಳಿ, ಮತ್ತಿನಲ್ಲಿರುವವರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದರಿಂದ ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಕಂಟ್ರೋಲ್’ಗೆ ಬಂದಿದೆ. ಎಲ್ಲೆಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ. ಅಷ್ಟೆ ಅಲ್ಲಾ, ಜಿಲ್ಲೆಗೆ ಗಾಂಜಾ ಸರಬರಾಜು ಪ್ರಮಾಣವು ಕುಸಿತ ಕಂಡಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಪ್ರೆಸ್ ಟ್ರಸ್ಟ್’ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಗಾಂಜಾ ಮಾರಾಟ ಮತ್ತು ಸೇವನೆ ಪ್ರಮಾಣದಲ್ಲಿ ಕಡಿಮೆಯಾಗಿರುವ ಕುರಿತು ಮಾಹಿತಿ ನೀಡಿದರು.
ರಕ್ಷಣಾಧಿಕಾರಿ ಹೇಳಿದ್ದೇನು?
♦ ‘ಶಿವಮೊಗ್ಗದಲ್ಲಿ ಎಲ್ಲೆಂದರಲ್ಲಿ ಗಾಂಜಾ ಮಾರಾಟವಾಗುತ್ತಿತ್ತು. ಎಲ್ಲರಿಗೂ ಗಾಂಜಾ ಸಿಗುವ ಹಾಗೆ ಓಪನ್ ಮಾರ್ಕೆಟ್’ನಲ್ಲಿ ಲಭ್ಯವಿತ್ತು.’
♦ ‘ನಿರಂತರ ದಾಳಿಯಿಂದಾಗಿ ಗಾಂಜಾ ಮಾರಾಟ ಕಂಟ್ರೋಲ್’ಗೆ ಬಂದಿದೆ. ಓಪನ್ ಮಾರ್ಕೆಟ್’ನಲ್ಲಿ ಈಗ ಗಾಂಜಾ ಲಭ್ಯವಿಲ್ಲ. ಪರಿಚಿತರಿಗೆ ಮಾತ್ರ ಗಾಂಜಾ ಪೂರೈಕೆ ಮಾಡಲಾಗುತ್ತಿದೆ. ಫೋನ್ ಕರೆ ಮಾಡಿದವರಿಗಷ್ಟೆ ಗಾಂಜಾ ಸಿಗುತ್ತಿದೆ.’
♦ ‘ಮೊದಲು ಶಿವಮೊಗ್ಗ ಜಿಲ್ಲೆಗೆ 50 – 60 ಕೆ.ಜಿ.ಯಷ್ಟು ಗಾಂಜಾ ಬರುತ್ತಿತ್ತು. ಈಗ ಇದೆಲ್ಲ ಸಂಪೂರ್ಣ ಕಡಿತವಾಗಿದೆ. ಬಳ್ಳಾರಿ, ಚನ್ನಗಿರಿ, ತರೀಕೆರೆ ಮುಂತಾದ ಕಡೆಯಿಂದ ಒಂದು ಅಥವಾ ಎರಡು ಕೆ.ಜಿ.ಯಷ್ಟು ಗಾಂಜಾ ಮಾತ್ರ ಬರುತ್ತಿದೆ.’