ಶಿವಮೊಗ್ಗ ಲೈವ್.ಕಾಂ | SHIMOGA | 31 ಅಕ್ಟೋಬರ್ 2019
ರಾಷ್ಟ್ರೀಯ ಏಕತೆ ದಿನಾಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇವತ್ತು ಮ್ಯಾರಥಾನ್ ಆಯೋಜಿಸಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಅವರು ನೆಹರು ಸ್ಟೇಡಿಯಂನಲ್ಲಿ ಮ್ಯಾರಥಾನ್’ಗೆ ಚಾಲನೆ ನೀಡಿದರು.

ಪೊಲೀಸರು, ಕ್ರೀಡಾಪಟುಗಳು, ಸಾರ್ವಜನಿಕರು ಮ್ಯಾರಥಾನ್’ನಲ್ಲಿ ಭಾಗವಹಿಸಿದ್ದರು. ನೆಹರು ಸ್ಟೇಡಿಯಂನಿಂದ ಕುವೆಂಪು ರಸ್ತೆ, ಜೈಲ್ ಸರ್ಕಲ್, ದುರ್ಗಿಗುಡಿ, ಗೋಪಿ ಸರ್ಕಲ್, ನೆಹರು ರೋಡ್, ಅಮೀರ್ ಅಹಮದ್ ರಸ್ತೆ, ಬಿ.ಹೆಚ್.ರಸ್ತೆ, ವೀರಭದ್ರೇಶ್ವರ ಟಾಕೀಸ್ ರಸ್ತೆ, ಡಿವಿಎಸ್ ಸರ್ಕಲ್, ಮಹಾವೀರ ಸರ್ಕಲ್ ಮೂಲಕ ನೆಹರು ಕ್ರೀಡಾಂಗಣದವರೆಗೆ ಮ್ಯಾರಥಾನ್ ನಡೆಯಿತು.
ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್, KSRP 8ನೇ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಮಂಜುನಾಥ ಅಣಜಿ ಸೇರಿದಂತೆ ಹಲವರು ಮ್ಯಾರಥಾನ್’ನಲ್ಲಿ ಪಾಲ್ಗೊಂಡಿದ್ದರು.


ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]