ಶಿವಮೊಗ್ಗದ ಈ ಸರ್ಕಲ್‌ನಲ್ಲಿ ದಿಕ್ಕಿಗೊಂದು ಗುಂಡಿ ಇದೆ, ರಾತ್ರಿ ಹೊತ್ತು ಕರಾಳ ರೂಪ ತೋರಿಸುತ್ತವೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 10 MAY 2024

CITY-ROUNDS-LOGOCITY ROUNDS : ಶಿವಮೊಗ್ಗ ನಗರದ ಈ ಸರ್ಕಲ್‌ನಲ್ಲಿ ಯಾವ ದಿಕ್ಕಿಗೆ ವಾಹನ ತಿರುಗಿಸಿದರು ಒಂದಿಲ್ಲೊಂದು ಗುಂಡಿ ಸವಾರರನ್ನು ಸ್ವಾಗತಿಸುತ್ತದೆ. ರಾತ್ರಿ ವೇಳೆ ಈ ಗುಂಡಿಗಳು ತಮ್ಮ ಕರಾಳ ರೂಪ ತಾಳುತ್ತವೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಕೆಇಬಿ ಸರ್ಕಲ್‌ನ ದುಸ್ಥಿತಿ ಇದು. ಇಲ್ಲಿ ಸರ್ವ ದಿಕ್ಕಿಗು ಒಂದೊಂದು ಗುಂಡಿ ಇದೆ. ವಾಹನ ಸವಾರರು ಇಲ್ಲಿ ಸ್ವಲ್ಪ ಮೈ ಮರೆತರು ಅಪಾಯ ತಪ್ಪಿದ್ದಲ್ಲ.

ಸರ್ಕಲ್‌ನಲ್ಲಿ ದಿಕ್ಕಿಗೊಂದು ಗುಂಡಿ

ಗುಂಡಿ 1 :  ರೈಲ್ವೆ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ತೆರಳುವ ತಿರುವಿನಲ್ಲಿ ದೊಡ್ಡ ಗುಂಡಿ ಇದೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ ಕಡೆಯಿಂದ ಕೆಇಬಿ ಸರ್ಕಲ್‌ಗೆ ಬರುವ ರಸ್ತೆಯಲ್ಲಿ ಸಿಗ್ನಲ್‌ನಲ್ಲೇ ಬೃಹತ್‌ ಗುಂಡಿ ನಿರ್ಮಾಣವಾಗಿದೆ.

ಗುಂಡಿ 2 : ಇನ್ನು ಸರ್ಕಲ್‌ನ ನಡುವೆಯೇ ಒಂದು ಗುಂಡು ಬಾಯ್ತೆರೆದಿದ್ದು, ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸವಾರರನ್ನು ಎಚ್ಚರಿಸುವ ಪ್ರಯತ್ನವಾಗಿದೆ.

ಗುಂಡಿ 3 : ಸರ್ಕಲ್‌ನಿಂದ ರೈಲ್ವೆ ನಿಲ್ದಾಣದ ಕಡೆಗೆ ತೆರಳುವ ರಸ್ತೆಯ ಎಡ ಭಾಗದಲ್ಲಿ ಯುಜಿಡಿ ಮುಚ್ಚಳ ಮುರಿಯುವ ಸ್ಥಿತಿಯಲ್ಲಿದೆ.

ರಾತ್ರಿ ಹೊತ್ತು ಇನ್ನೂ ಕಾರಾಳ ಸ್ಥಿತಿ

ಈ ಗುಂಡಿಗಳು ರಾತ್ರಿ ವೇಳೆ ವಾಹನ ಸವಾರರ ಪಾಲಿಗೆ ಇನ್ನಷ್ಟು ಕರಾಳವೆನಿಸುತ್ತವೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ತೆರಳವ ತಿರುವಿನಲ್ಲಿ ಬೀದಿ ದೀಪ ಉರಿಯುತ್ತಿಲ್ಲ. ಹಾಗಾಗಿ ಗುಂಡಿಗಳಿವೆ ಎಂದು ವಾಹನ ಸವಾರರಿಗೆ ತಿಳಿಯುವುದಿಲ್ಲ. ಸ್ವಲ್ಪ ಯಾಮಾರಿದರೆ ಅಪಘಾತ ನಿಶ್ಚಿತ. ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ನಿತ್ಯ ಸಂಚರಿಸುತ್ತಾರೆ. ಆದರೆ ಗುಂಡಿ ಮುಚ್ಚಿಸುವ ಪ್ರಯತ್ನವಾಗಿಲ್ಲ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಎರಡು ದಿನ ಮೆಗಾ ಕಾರು ಮೇಳ | ಪ್ರತಿಷ್ಠಿತ ಶೋ ರೂಂನಲ್ಲಿ ಉದ್ಯೋಗವಕಾಶ

Leave a Comment