ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022
ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಫೆ.24ರಂದು ಬೆಳಗ್ಗೆ 10 ಗಂಟೆ ಸಂಜೆ 6 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಪೊಲೀಸ್ ಚೌಕಿ, ಚೇತನ ಪಾರ್ಕ್, ವಿನೋಬನಗರ ಚಾಚಾ ನೆಹರು ಪಾರ್ಕ್, ಮೋರ್ ಸೂಪರ್ ಮಾರ್ಕೆಟ್, ವಿನೋಬನಗರ ವಿಕಾಸ ಶಾಲೆ, ಡಿವಿಎಸ್ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.