ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 22 ಅಕ್ಟೋಬರ್ 2021
ಮೆಸ್ಕಾಂ ವತಿಯಿಂದ ವಿವಿಧ ನಿರ್ವಹಣೆ ಕೆಲಸಗಳನ್ನು ನಡೆಸಲಾಗುತ್ತಿದೆ. ಹಾಗಾಗಿ ಶಿವಮೊಗ್ಗ ನಗರದ ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಂ.ಆರ್.ಎಸ್. ವಿದ್ಯುತ್ ಕೇಂದ್ರದ ಟವರ್’ಗಳ ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ. ಹಾಗಾಗಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ ಮಧ್ಯಾಹ್ನ 12 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನೆಹರೂ ಕ್ರೀಡಾಂಗಣ, ಜಯನಗರ, ದುರ್ಗಿಗುಡಿ, ನೆಹರು ರಸ್ತೆ, ತಿಲಕ್ ನಗರ, ಬಿ.ಹೆಚ್.ರಸ್ತೆ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ, ಡಿ.ಸಿ.ಕಚೇರಿ, ಶಂಕರಮಠ ರಸ್ತೆ, ಸೋಮಯ್ಯ ಲೇಔಟ್, ಎ.ಎ.ಕಾಲೋನಿ, ರಾಜೇಂದ್ರನಗರ, ಕೆ.ಇ,ಬಿ. ವೃತ್ತ ಕಚೇರಿ, ರೈಲ್ವೇ ನಿಲ್ದಾಣ, 100 ಅಡಿರಸ್ತೆ, ಬ್ಲಡ್ ಬ್ಯಾಂಕ್ ರಸ್ತೆ, ಬಸವನಗುಡಿ, ಬಾಲರಾಜ್ ಅರಸ್ ರಸ್ತೆ, ಬಿ.ಎಸ್.ಎನ್.ಎಲ್ ಕಚೇರಿ, ಸರ್.ಎಂ.ವಿ.ರಸ್ತೆ, ಕೋಟೆ ರಸ್ತೆ, ಮಾರಿಗದ್ದುಗೆ.
ಎಸ್.ಪಿ.ಎಂ.ರಸ್ತೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ದೀಪಕ್ ಪೆಟ್ರೋಲ್ ಬಂಕ್, ಸಾವರ್ಕರ್ ನಗರ, ಅಶೋಕ ರಸ್ತೆ, ತಿರುಪಳಯ್ಯನ ರಸ್ತೆ, ಶಿವಾಜಿ ಪಾರ್ಕ್, ಕೊಲ್ಲೂರಯ್ಯನ ಬೀದಿ, ರಾಮಯ್ಯಶೆಟ್ಟಿ ಪಾರ್ಕ್, ಎಂ.ಕೆ.ಕೆ.ರಸ್ತೆ, ಉಪ್ಪಾರ್ ಕೇರಿ, ಎ.ಎ.ವೃತ್ತ, ಭರ್ಮಪ್ಪ ನಗರ, ವಿದ್ಯಾನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ.
ಸಿದ್ದೇಶ್ವರ ನಗರ, ಎಂ.ಆರ್.ಎಸ್. ಕಾಲೋನಿ, ಗಣಪತಿ ಲೇಔಟ್, ಶಾಂತಮ್ಮ ಲೇಔಟ್, ಕಂಟ್ರಿಕ್ಲಬ್, ಮಲವಗೊಪ್ಪ, ಸೂಳೆಬೈಲು ಹರಿಗೆ, ವಾದಿಹುದಾ, ಮದಾರಿಪಾಳ್ಯ, ವಡ್ಡಿನಕೊಪ್ಪ, ಇಂದಿರಾನಗರ, ಮೆಹಬೂಬ್ ನಗರ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಆಲ್ಕೋಳ ವಿದ್ಯುತ್ ಉಪಕೇಂದ್ರ
ತ್ರೈಮಾಸಿಕ ನಿರ್ವಹಣೆ ಇರುವುದರಿಂದ ವೆಂಕಟೇಶನಗರ, ಅಚ್ಯುತ್‍ರಾವ್ ಲೇಔಟ್, ಚೆನ್ನಪ್ಪ ಲೇಔಟ್, ಜಯನಗರ, ಎ.ಎನ್.ಕೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಂಡ್ಲಿ ವಿವಿ ಕೇಂದ್ರ
ದುರ್ಗಿಗುಡಿ 11 ಕೆವಿ ಮಾರ್ಗವನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಗಾರ್ಡ್‍ನ್ ಏರಿಯಾ 1 ರಿಂದ 3 ಅಡ್ಡರಸ್ತೆಗಳು, ಸವಾರ್ ಲೇನ್ ರಸ್ತೆ, ಎಲ್ ಎಲ್ ಆರ್ ರಸ್ತೆ, ಗೋಪಿವೃತ್ತ, ಜೆಪಿಎನ್ ರಸ್ತೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422