ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಅಕ್ಟೋಬರ್ 2020
ಮೆಸ್ಕಾಂ, ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿರುವುದರಿಂದ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ
ಶಿವಮೊಗ್ಗ ನಗರ
ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಅ.8ರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕೋಟೆ ರಸ್ತೆ, ಅಪ್ಪಾಜಿ ರಾವ್ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೊಳಲೂರು ಸುತ್ತಮುತ್ತ
ಹೊಳಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಅ.8ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹೊಳಲೂರು, ಹರಮಘಟ್ಟ, ಕೊಮ್ಮನಾಳ್, ಹೊಳೆಹಟ್ಟಿ, ಬೇಡರಹೊಸಳ್ಳಿ, ಬಿಕೋನಹಳ್ಳಿ, ಬುಳ್ಳಾಪುರ, ಬೂದಿಗೆರೆ, ಬೀರನಕೆರೆ, ಮಡಕೆ ಚೀಲೂರು, ಆಲದಹಳ್ಳಿ, ಸೋಮಿನಕೊಪ್ಪ, ಸುತ್ತುಕೋಟೆ, ಕ್ಯಾತಿನಕೊಪ್ಪ, ಹಾಡೋನಹಳ್ಳಿ, ಸೂಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆನಂದಪುರ ಸುತ್ತಮುತ್ತ
ಗೌತಮಪುರದ ಎಫ್ 1,11ಕೆ.ವಿ. ಮಾರ್ಗದ ವಾಹಕ ಬದಲಾವಣೆ ಕಾಮಗಾರಿ ಹಿನ್ನೆಲೆಯಲ್ಲಿ ಅ.8ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಗೌತಮಪುರ, ಬರೂರು, ಮಧ್ಯಕಣ್ಣೂರು, ನರಸೀಪುರ, ಭೈರಾಪುರ, ದೊಡ್ಡಬ್ಯಾಣ, ಡ್ಯಾಂ ಹೊಸೂರು, ಕೊರ್ಲಿಕೊಪ್ಪ, ಲಾವಿಗೆರೆ, ಬಸವನಬ್ಯಾಣ, ಕುಡಿಗೆರೆ, ಗುತ್ತನಹಳ್ಳಿ, ಕಲ್ಕೊಪ್ಪ, ಜಂಬಾನಿ ಹಾಗೂ ಸುತ್ತಮುತ್ತಲು ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422