ಶಿವಮೊಗ್ಗ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಪುನಾರಂಭ, ಹೇಗಿದೆ ಮೊದಲ ದಿನದ ರೆಸ್ಪಾನ್ಸ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಜುಲೈ 2021

ಶಿವಮೊಗ್ಗ ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್‍ಗಳು ರಸ್ತೆಗಿಳಿದಿವೆ. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದ ಖಾಸಗಿ ಬಸ್ ಸಂಚಾರ ಆರಂಭವಾಗಿದೆ.

ಶಿವಮೊಗದಿಂದ ಉಡುಪಿ, ಮಂಗಳೂರು, ಚಿತ್ರದುರ್ಗ ಕಡೆಗೆ ಬಸ್ಸುಗಳು ಸಂಚರಿಸುತ್ತಿವೆ. ಇನ್ನು ಸಾಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಹೊಸನಗರ, ತರೀಕೆರೆ, ಎನ್‍.ಆರ್‍.ಪುರ ಮಾರ್ಗದಲ್ಲಿ ಬಸ್ಸುಗಳು ಸಂಚರಿಸುತ್ತಿವೆ.

ಖಾಸಗಿ ಬಸ್ ನಿಲ್ದಾಣಕ್ಕೆ ಹಳೆ ಕಳೆ

ಲಾಕ್ ಡೌನ್ ಪರಿಣಾಮ ಎರಡು ತಿಂಗಳಿಂದ ಖಾಸಗಿ ಬಸ್ ನಿಲ್ದಾಣ ಬಿಕೋ ಅನ್ನುತ್ತಿತ್ತು. ಇವತ್ತು ಬಸ್ ಸಂಚಾರ ಶುರುವಾಗುತ್ತಿದ್ದಂತೆ ಹಳೆ ಕಳೆ ಮರುಕಳಿಸಿದೆ. ಆಯಾ ಊರಿನ ಪ್ಲಾಟ್‍ ಫಾರಂಗಳಲ್ಲಿ ಬಸ್ಸುಗಳು ಸಾಲುಗಟ್ಟಿ ನಿಲ್ಲಿಸಲಾಗಿದೆ. ಕಂಡಕ್ಟರ್‍ಗಳು ಬಸ್‍ ರೂಟ್‍ಗಳನ್ನು ಕೂಗುತ್ತಿದ್ದಾರೆ.

204751962 1143709169442325 1917981465831900986 n.jpg? nc cat=110&ccb=1 3& nc sid=8bfeb9& nc ohc=Bb82T29 yhsAX9kexyr& nc ht=scontent.fblr20 1

ಪ್ರಯಾಣಿಕರಿಂದ ಹೇಗಿತು ಪ್ರತಿಕ್ರಿಯೆ?

ಮೊದಲ ದಿವನೇ ಖಾಸಗಿ ಬಸ್‍ಗೆ ಪ್ರಯಾಣಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಕೋವಿಡ್ ನಿಯಮ ಪಾಲಿಸಬೇಕಿರುವುದರಿಂದ ಮಾಸ್ಕ್‍, ಸಾಮಾಜಿಕ ಅಂತರದಲ್ಲಿ ಪ್ರಯಾಣಿಕರನ್ನು ಕೂರಿಸಿ ಬಸ್ ಬಿಡಲಾಗುತ್ತಿದೆ.

ಏನಂತಾರೆ ಮಾಲೀಕರು?

ಬಸ್ ಬಿಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಲೀಕರ ಸಂಘದ ಕಾರ್ಯದರ್ಶಿ ರವಿ ಗುರುಪುರ, ಎಲ್ಲಾ ರೂಟ್‍ನಲ್ಲೂ ಬಸ್ ಬಿಟ್ಟಿದ್ದೇವೆ. ಎಲ್ಲಾ ಕಡೆಗೂ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇವತ್ತು ಸುಮಾರು 200 ಬಸ್ಸುಗಳನ್ನು ಬಿಟ್ಟಿದ್ದೇವೆ. ಇನ್ನೊಂದೆರಡು ದಿನದಲ್ಲಿ 300 ಬಸ್ಸುಗಳು ಕಾರ್ಯಾಚರಿಸಲಿವೆ. ದಿನ ಕಳೆದಂತೆ ಎಲ್ಲಾ ಬಸ್ಸುಗಳು ಸಂಚಾರ ಆರಂಭಿಸಲಿವೆ ಎಂದರು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಖಾಸಗಿ ಬಸ್ ಪುನಾರಂಭ ವಿಳಂಬಕ್ಕೆ ಐದು ಕಾರಣ, ಏನದು?

ಖಾಸಗಿ ಬಸ್‍ಗಳ ಸಂಚಾರ ಆರಂಭದಿಂದಾಗಿ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೃಷಿ ಮತ್ತು ಆರ್ಥಿಕ ಚಟುವಟಿಕೆಗೆ ಅನುಕೂಲವಾಗಲಿದೆ.

205342451 1418585655169517 2147535645565159733 n.png? nc cat=108&ccb=1 3& nc sid=730e14& nc ohc=AAZfPcTdhjUAX 3iSbQ&tn=XgSJ3kUX1No5RJvs& nc ht=scontent.fblr20 1

205699958 1418585661836183 7124353056776542332 n.png? nc cat=108&ccb=1 3& nc sid=730e14& nc ohc=1MiAxFUJYH0AX OObZ &tn=XgSJ3kUX1No5RJvs& nc ht=scontent.fblr20 1

205948275 1418585668502849 1631193189613330063 n.png? nc cat=101&ccb=1 3& nc sid=730e14& nc ohc=Y8e5q9gQfTYAX9Ehgj &tn=XgSJ3kUX1No5RJvs& nc ht=scontent.fblr20 1

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment