ಶಿವಮೊಗ್ಗ : ಶರಾವತಿ ಅಂತರ್ಗತ ಜಲ ವಿದ್ಯುತ್ ಯೋಜನೆ (Project) ಮತ್ತು ಶರಾವತಿ ನದಿ ತಿರುವು ಯೋಜನೆ ವಿರೋಧಿಸಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗೋಪಿ ಸರ್ಕಲ್ನಿಂದ ಮೆರವಣಿಗೆ
ವಿವಿಧ ಮಠಾಧೀಶರ ನೇತೃತ್ವದಲ್ಲಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶಿವಮೊಗ್ಗದ ಗೋಪಿ ಸರ್ಕಲ್ನಿಂದ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಪರಿಸರವಾದಿಗಳು, ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಿತು.
ಯಾರೆಲ್ಲ ಏನೆಲ್ಲ ಹೇಳಿದರು?
ಇದು ಮನುಷ್ಯರಷ್ಟೆ ಅಲ್ಲ ಪ್ರಾಣಿ, ಪಕ್ಷಿಗಳು ಮತ್ತು ಮಲೆನಾಡಿನ ಅಸ್ಥಿತ್ವದ ಪ್ರಶ್ನೆಯಾಗಿದೆ. ಆದ್ದರಿಂದ ಈ ಅವೈಜ್ಞಾನಿಕ ಯೋಜನೆ (Project) ಕೈಬಿಟ್ಟು, ಪರಿಸರಕ್ಕೆ ಪೂರಕ ಯೋಜನೆ ರೂಪಿಸಬೇಕು. ಪದೇ ಪದೆ ಶರಾವತಿ ನದಿ ಮೇಲೆ ಕಣ್ಣ ಹಾಕುತ್ತಿದ್ದಾರೆ. ಸಾಮಾನ್ಯ ಜ್ಞಾನ ಇರುವ ಯಾರೊಬ್ಬರು ಈ ಯೋಜನೆಯನ್ನು ಒಪ್ಪುವುದಿಲ್ಲ.
– ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ
ಮಲೆನಾಡನ್ನು ಮಾದರಿ ಮಲೆನಾಡನ್ನಾಗಿ ರೂಪಿಸುವಂತಹ ಯೋಜನೆಬೇಕು. ಆದರೆ ಅವೈಜ್ಞಾನಿಕ ಯೋಜನೆಗಳ ಮೂಲ ಜೀವ ಸಂಕುಲಕ್ಕೆ ಸಮಸ್ಯೆ ಉಂಟು ಮಾಡಬಾರದು. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಇಂತಹ ಯೋಜನೆಗಳನ್ನು ಕೈ ಬಿಡಬೇಕು.
– ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮುರುಘಾಮಠ
ಪ್ರಾಣಿಗಳ ಫೋಟೊ ಹಿಡಿದು ಹೋರಾಟ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪಶ್ಚಿಮಘಟ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ಫೋಟೊಗಳನ್ನು ಹಿಡಿದು, ಅವೈಜ್ಞಾನಿಕ ಯೋಜನೆ ಕೈ ಬಿಡುವಂತೆ ಘೋಷಣೆ ಕೂಗಿದರು.
ಇದನ್ನೂ ಓದಿ » BIG IMPACT – ಶಿವಮೊಗ್ಗ ಲೈವ್ ವರದಿ ಬೆನ್ನಿಗೆ ಗಾಂಧಿ ಪಾರ್ಕ್ಗೆ ಉಪ ಲೋಕಾಯುಕ್ತರ ಭೇಟಿ, ಅಧಿಕಾರಿಗಳ ವಿರುದ್ಧ ಕೇಸ್
ಪ್ರತಿಭಟನೆಯಲ್ಲಿ ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಮುಖರಾದ ಅಖಿಲೇಶ್ ಚಿಪ್ಳಿ, ಪ್ರೊ. ಬಿ.ಎಂ.ಕುಮಾರಸ್ವಾಮಿ, ವಸಂತ ಕುಮಾರ್, ಸೀಮಾ, ನಿರಂಜನಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆ ವಲಯ ಕಚೇರಿಗೆ ವಾರ್ಡ್ಗಳ ವಿಂಗಡಣೆ ಅವೈಜ್ಞಾನಿಕ, ಜೆಡಿಎಸ್ ಆಕ್ರೋಶ, ಮನವಿಯಲ್ಲಿ ಏನೇನಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200