ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020
ಪಾಲಿಕೆ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮಿಸುತ್ತಿದ್ದಾರೆ ಎಂದು ಆರೋಪಿಸಿ ಮಾತೃಭೂಮಿ ಕನ್ನಡ ಗೆಳೆಯರ ಬಳಗ ವಿನೋಬನಗರದ ಜಟ್ಪಟ್ ನಗರದಲ್ಲಿ ರಸ್ತೆ ತಡೆ ನಡೆಸಿದರು.
ವಿನೋಬನಗರ 2ನೇ ಹಂತದ ಕಲ್ಲಹಳ್ಳಿ 10 ಮತ್ತು 11ನೇ ತಿರುವುನಲ್ಲಿರುವ ಜಾಗ ಪಾಲಿಕೆಗೆ ಸೇರಿದೆ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಸುಳ್ಳು ದಾಖಲೆ ಸೃಷ್ಟಿಸಿ ಆ ಜಾಗವನ್ನು ಸ್ವಚ್ಚಗೊಳಿಸಿ ಮನೆ ಕಟ್ಟಲು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸಲಾಗಿತ್ತು. ಪಾಲಿಕೆ ಜಾಗ ಎಂದು ನಾಮಫಲಕ ಅಳವಡಿಸಲಾಗಿತ್ತು. ಆದರೆ ಈ ನಾಮಫಲಕವೇ ಇಲ್ಲವಾಗಿದೆ. ಇದು ಸಾರ್ವಜನಿಕರ ಆಸ್ತಿಯಾಗಿದೆ. ಯಾವುದೇ ಕಾರಣಕ್ಕೂ ಖಾಸಗಿಯವರ ಪಾಲಾಗಬಾರದು. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ನಕಲಿ ದಾಖಲೆ ಸೃಷ್ಟಿಸುವವರ ಬಗ್ಗೆ ಕಾನೂನುಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರಮುಖರಾದ ವೆಂಕಟೇಶ್, ರಘು ಎಸ್, ದಿವಾಕರ್, ಮಂಜುನಾಥ್, ಅಶೋಕ್, ಸುರೇಶ್, ಶರವಣ, ರುದ್ರೇಶ್, ಶಿವು, ಶಶಿ, ದರ್ಶನ್ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422