SHIVAMOGGA LIVE NEWS | 29 ಮಾರ್ಚ್ 2022
ಶಿವಮೊಗ್ಗ ತಾಲೂಕಿನ ವಿವಿಧೆಡೆ ಇವತ್ತು ಸಂಜೆ ಆಲಿಕಲ್ಲು ಮಳೆಯಾಗಿದೆ. ಇದರಿಂದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ರೈತರಿಗು ಆತಂಕ ಉಂಟಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆಯನೂರು ಸುತ್ತಮುತ್ತ ಸಂಜೆ ವೇಳೆಗೆ ಜೋರ ಮಳೆ ಜೊತೆಗೆ ಆಲಿಕಲ್ಲು ಬಿದ್ದಿವೆ. ಆಲಿಕಲ್ಲು ಬಿದ್ದ ರಭಸಕ್ಕೆ ಚನ್ನಹಳ್ಳಿ ಗ್ರಾಮದ ಮನೆಗಳ ಮೇಲಿನ ಹೆಂಚುಗಳು, ಸೋಲರ್ ಪ್ಯಾನಲ್’ಗಳು ಒಡೆದು ಹೋಗಿವೆ. ಇನ್ನು, ಬಾಳೆ, ಅಡಕೆ ತೋಟಗಳಿಗೆ ಅಲ್ಲಿಕಲ್ಲಿನಿಂದ ಹಾನಿ ಉಂಟಾಗಿದೆ. ಇದು ರೈತರಿಗೆ ಚಿಂತೆ ಉಂಟು ಮಾಡಿದೆ.
ಆಯನೂರು ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ನಗರದಲ್ಲಿಯು ಮಳೆ
ಇತ್ತ ಶಿವಮೊಗ್ಗ ನಗರದಲ್ಲಿಯು ಮಳೆ ಆರಂಭವಾಗಿದೆ. ಬಹು ಹೊತ್ತಿನಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆಯಿಂದ ಮಳೆ ಶುರುವಾಗಿದೆ. ಬಿಸಿಲ ಧಗೆ, ವಿಪರೀತ ಶಕೆಯಿಂದ ಜನರು ತತ್ತರಿಸಿದ್ದರು. ಮಳೆಯಿಂದ ತಂಪಾಗುವ ನಿರೀಕ್ಷೆ ಇದೆ.
Photo : Shrisha
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200