ಶಿವಮೊಗ್ಗ LIVE
ಶಿವಮೊಗ್ಗ: ನಗರದ ರಂಗಾಯಣ, ರಂಗಬೆಳಕು ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ರಂಗ ಸಂಕ್ರಾಂತಿ ನಾಟಕೋತ್ಸವ-2026 (Drama Festival) ಅನ್ನು ಆಯೋಜಿಸಲಾಗಿದೆ. ಜನವರಿ 14 ರಿಂದ ಜನವರಿ 19 ರವರೆಗೆ ಒಟ್ಟು ಆರು ದಿನ ರಂಗ ಹಬ್ಬ ನಡೆಯಲಿದ್ದು, ಪ್ರತಿದಿನ ಸಂಜೆ 6:30ಕ್ಕೆ ನಗರದ ಅಶೋಕ ನಗರದಲ್ಲಿರುವ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಯಾವ್ಯಾವ ನಾಟಕ ಯಾವಾಗಿದೆ?
ಜನವರಿ 14 (ಬುಧವಾರ): ‘ಕಾಲಚಕ್ರ’ ಜಯವಂತ ದಳ್ವಿ ಅವರ ಮರಾಠಿ ಮೂಲದ ಈ ನಾಟಕವನ್ನು ಹೆಚ್.ಕೆ. ಕರ್ಕಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ವಿನ್ಯಾಸ ಮತ್ತು ನಿರ್ದೇಶನವನ್ನು ಹುಲಗಪ್ಪ ಕಟ್ಟಿಮನಿ ಅವರು ಮಾಡಿದ್ದಾರೆ. ಈ ನಾಟಕವನ್ನು ಕಲಬುರಗಿಯ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.
ಜನವರಿ 15 (ಗುರುವಾರ): ‘ಕೂಡಲ್ಲ ಅಂದ್ರೆ ಕೂಡಲ್ಲ’ ದಾರಿಯೋ ಫೋ ಅವರ ಕಾಂಟ್ ಪೇ ವೋಂಟ್ ಪೇ ಆಧಾರಿತ ಈ ನಾಟಕದ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನವನ್ನು ಶಕೀಲ್ ಅಹ್ಮದ್ ನಿರ್ವಹಿಸಿದ್ದಾರೆ. ಶ್ರೀರಂಗಪಟ್ಟಣದ ‘ನಿದಿರ್ಗಂತ’ ತಂಡದವರು ಇದನ್ನು ಪ್ರದರ್ಶಿಸಲಿದ್ದಾರೆ.
ಜನವರಿ 16 (ಶುಕ್ರವಾರ): ‘ಕಂದಗಲ್ಲ ಭಾರತ’ ಶ್ರೀ ಕಂದಗಲ್ಲ ಹನುಮಂತರಾಯ ವಿರಚಿತ ಮಹಾಭಾರತ ನಾಟಕಗಳ ಆಧಾರಿತ ರಂಗರೂಪವಿದು. ಇದರ ರಂಗರೂಪ ಮತ್ತು ನಿರ್ದೇಶನವನ್ನು ಪ್ರಕಾಶ ಗರುಡ ಅವರು ಮಾಡಿದ್ದಾರೆ. ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಈ ನಾಟಕವನ್ನು ವೇದಿಕೆಗೆ ತರಲಿದ್ದಾರೆ.

ಜನವರಿ 17 (ಶನಿವಾರ): ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’ ಈ ನಾಟಕದ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನವನ್ನು ಜಿ. ಪರಶುರಾಮ್, ಸೂರನಗದ್ದೆ ಅವರು ಮಾಡಿದ್ದಾರೆ. ಸಾಗರದ ಸೂರನಗದ್ದೆಯ ಶ್ರೀ ಬೀರೇಶ್ವರ ಕಲಾ ಬಳಗ ತಂಡದಿಂದ ಈ ಪ್ರದರ್ಶನ ನಡೆಯಲಿದೆ.
ಜನವರಿ 18 (ಭಾನುವಾರ): ‘ಮಹಾತ್ಮರ ಬರುವಿಕೆಗಾಗಿ’ ಆರ್.ಕೆ. ನಾರಾಯಣ್ ಅವರ ಇಂಗ್ಲಿಷ್ ಮೂಲದ ಕೃತಿಯನ್ನು ಬಿ.ಎನ್. ಮಂಗಳ ಅವರು ಕನ್ನಡಕ್ಕೆ ತಂದಿದ್ದಾರೆ. ಶ್ರೀಕಾಂತ್ ಎನ್.ವಿ. ಅವರ ನಿರ್ದೇಶನದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು ಇದನ್ನು ಅಭಿನಯಿಸಲಿದ್ದಾರೆ.
ಜನವರಿ 19 (ಸೋಮವಾರ): ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ತೌಫಿಕ್-ಅಲ್-ಹಕೀಮ್ ಅವರ ಮೂಲ ನಾಟಕವನ್ನು ಎಂ.ಎಸ್.ಕೆ. ಪ್ರಭು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ಆರ್. ವೆಂಕಟರಮಣ ಐತಾಳ ಅವರ ನಿರ್ದೇಶನದಲ್ಲಿ ಕಾರ್ಕಳದ ಯಕ್ಷ ರಂಗಾಯಣ ತಂಡದಿಂದ ಈ ನಾಟಕ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ » ಹೊಸನಗರದ ಬಿದನೂರು ಮಾರಿಕಾಂಬಾ ಜಾತ್ರೆಗೆ ಸಿದ್ಧತೆ ಪೂರ್ಣ, ಯಾವ್ಯಾವ ದಿನ ಏನೇನು ಕಾರ್ಯಕ್ರಮವಿದೆ?
ಪ್ರತಿ ನಾಟಕಕ್ಕೆ ಪ್ರವೇಶ ದರ ತಲಾ ₹30 ನಿಗದಿಪಡಿಸಲಾಗಿದೆ. ಕಲಾಭಿಮಾನಿಗಳು ಈ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಜೆ. ಹಾಗೂ ನಿರ್ದೇಶಕ ಪ್ರಸನ್ನ ಡಿ. ಸಾಗರ ಅವರು ತಿಳಿಸಿದ್ದಾರೆ.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





