ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019
ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಫೋನ್ ಡೈರಿ ಶುರುವಾಗುತ್ತಿದೆ. ಪಾಕೆಟ್ ಕ್ಯಾಲೆಂಡರ್ ಯುಗ ಮುಗಿದು ವರ್ಷಗಳೇ ಕಳೆದಿದೆ. ಇನ್ನೇನಿದ್ದರು ಎಲ್ಲವು ಆನ್’ಲೈನ್.

ಇಂಟರ್’ನೆಟ್ ಜಾಲ ವ್ಯಾಪಕವಾಗಿ ಹಬ್ಬುತ್ತಿದೆ. ಸರ್ವ ಸಮಸ್ಯೆಗು ಗೂಗಲ್’ನಲ್ಲಿ ಪರಿಹಾರ ಕಂಡುಕೊಳ್ಳುತ್ತಿದೆ ಇಡೀ ಜಗತ್ತು. ಹೀಗಿದ್ದೂ ಶಿವಮೊಗ್ಗದ ಹಲವು ವಿಚಾರಗಳು ಅಂತರ್ಜಾಲದಲ್ಲಿ ಈಗಲು ಮಿಸ್ಸಿಂಗ್. ಈ ಕೊರತೆ ನೀಗಿಸುವ ಸಲುವಾಗಿಯೇ ಶಿವಮೊಗ್ಗ ಲೈವ್.ಕಾಂ ಟೀಂ, ಫೋನ್ ಡೈರಿ ಆರಂಭಿಸುತ್ತಿದೆ.
ಮೂರು ವರ್ಷ ಲಕ್ಷ ಬಳಕೆದಾರರು
2016ರ ನವೆಂಬರ್ ಬಳಿಕ ಶಿವಮೊಗ್ಗದ ನ್ಯೂಸ್’ಗೆ ಡಿಜಿಟಲ್ ರೂಪ ಬಂತು. ಅದಕ್ಕೆ ಕಾರಣ ಶಿವಮೊಗ್ಗ ಲೈವ್.ಕಾಂ. ಪೇಪರ್’ನಲ್ಲಿ ಸಿಗುತ್ತಿದ್ದ ನ್ಯೂಸ್ ಈಗ ಪ್ರತಿ ಕ್ಷಣ ಮೊಬೈಲ್’ಗೆ ಬರುತ್ತೆ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರು ಶಿವಮೊಗ್ಗದ ಸುದ್ದಿ ತಿಳಿಯೋ ಅವಕಾಶವಿದೆ. ಅಮೆರಿಕ, ಬ್ರಿಟನ್, ದುಬೈ, ಆಸ್ಟ್ರೇಲಿಯಾ, ಚೀನಾ, ಜಪಾನ್, ಖತಾರ್, ಸಿಂಗಾಪುರ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳಲ್ಲಿ ಈಗ ಶಿವಮೊಗ್ಗ ಲೈವ್.ಕಾಂ ಓದುಗರಿದ್ದಾರೆ. ಶಿವಮೊಗ್ಗದ ಹಳ್ಳಿ ಹಳ್ಳಿಗೂ ನಮ್ಮ ರೀಚ್ ಇದೆ. ಪ್ರತಿ ತಿಂಗಳು ಒಂದು ಲಕ್ಷ ಓದುಗರು ಶಿವಮೊಗ್ಗ ಲೈವ್.ಕಾಂಗೆ ಜೊತೆಯಾಗಿದ್ದಾರೆ.

ಇನ್ಮುಂದೆ ಬೆರಳ ತುದಿಯಲ್ಲೇ ಡೈರಿ
ಮೂರು ವರ್ಷ ನಿರಂತರ ಸುದ್ದಿ ನೀಡಿದ ಶಿವಮೊಗ್ಗ ಲೈವ್.ಕಾಂ ಈಗ ಮತ್ತೊಂದು ವಿಭಿನ್ನ ಪ್ರಯೋಗ ಆರಂಭಿಸಿದೆ. ಅದುವೆ ಫೋನ್ ಡೈರಿ ಶಿವಮೊಗ್ಗ. ಜನರು ಬಯಸಿದ್ದು, ಬೇಕು ಅನಿಸಿದ್ದನ್ನು ಬೆರಳ ತುದಿಯಲ್ಲೇ ಪಡೆಯಬಹುದು. ಶಿವಮೊಗ್ಗದಲ್ಲಿ ಇದೇ ಮೊದಲು ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ಫೋನ್ ಡೈರಿ ಸಿದ್ಧವಾಗುತ್ತಿದೆ.

ಹೇಗೆ ಕೆಲಸ ಮಾಡುತ್ತೆ ಈ ಫೋನ್ ಡೈರಿ?
ಯಾವ ಸೇವೆ ಯಾವ ಸಂದರ್ಭದಲ್ಲಿ ಅನಿವಾರ್ಯವಾಗುತ್ತೋ ಗೊತ್ತಿಲ್ಲ. ಈ ಸಂದರ್ಭ ಜನರ ನೆರವಿಗೆ ನಿಲ್ಲುವುದೇ ಫೋನ್ ಡೈರಿ. ಯಾವುದೇ ಸೇವೆಯ ಫೋನ್ ನಂಬರ್, ವಿಳಾಸದ ಮಾಹಿತಿ ಥಟ್ ಅಂತಾ ಇಲ್ಲಿ ಸಿಗುತ್ತೆ. 24 ಗಂಟೆಯು ವೆಬ್’ಸೈಟ್’ನಲ್ಲಿ ಎಲ್ಲ ಮಾಹಿತಿ ಸಿಗುತ್ತೆ. ಇಲ್ಲವಾದರೆ 24 ಗಂಟೆ ಕಾರ್ಯನಿರ್ವಹಿಸುವ ಮೊಬೈಲ್ ನಂಬರ್’ಗೆ ಫೋನ್ ಮಾಡಿದರೆ ಸಾಕು, ಜನ ಅಪೇಕ್ಷಿಸುವ ಮಾಹಿತಿ ಲಭ್ಯವಾಗಲಿದೆ.

ಈಗಲೇ ನಿಮ್ಮ ನಂಬರ್ ರಿಜಿಸ್ಟರ್ ಮಾಡಿಕೊಳ್ಳಿ
ಫೋನ್ ಡೈರಿಗೆ ನೀವು ನಿಮ್ಮ ಅಂಗಡಿ, ಉದ್ಯಮ, ಕಚೇರಿಯ ಫೋನ್ ನಂಬರ್ ರಿಜಿಸ್ಟರ್ ಮಾಡಿಕೊಳ್ಳಬಹುದು. ರಿಜಿಸ್ಟರ್ ಮಾಡಿಕೊಂಡ ನಂಬರ್, ವಿಳಾಸವನ್ನು ಮಾತ್ರವೆ ಫೋನ್ ಮಾಡಿದ ಜನರಿಗೆ ಒದಗಿಸಲಾಗುತ್ತದೆ. ಫೋನ್ ಡೈರಿಗೆ ರಿಜಿಸ್ಟರ್ ಮಾಡಿಕೊಳ್ಳುವುದು ಫ್ರೀ. ಆರಂಭದಲ್ಲಿ ಒಮ್ಮೆ ರಿಜಿಸ್ಟರ್ ಮಾಡಿಕೊಂಡರೆ, ಅದು ಒಂದೂವರೆ ವರ್ಷಕ್ಕೆ ಅನ್ವಯವಾಗಲಿದೆ.

ದಿನಕ್ಕೆ ಒಂದು ರುಪಾಯಿ 80 ಪೈಸೆ
ಈ ಮೊದಲೆ ಘೋಷಿಸಿದಂತೆ ಫೋನ್ ಡೈರಿ ಸೇವೆಗೆ ಸಣ್ಣದೊಂದು ಚಾರ್ಜ್ ಇರುತ್ತದೆ. ಪ್ರತಿ ದಿನಕ್ಕೆ ಹಾಫ್ ಟೀ ರೇಟ್’ಗಿಂತಲೂ ಕಡಿಮೆ. ಪ್ರತಿದಿನಕ್ಕೆ ಒಂದು ರೂಪಾಯಿ 80 ಪೈಸೆ ಚಾರ್ಜ್ ಮಾಡಲಾಗುತ್ತದೆ. ಆರಂಭದಲ್ಲಿ ಒಂದೂವರೆ ವರ್ಷಕ್ಕೆ ಒಂದು ಸಾವಿರ ರೂ. ಶುಲ್ಕವಿರುತ್ತದೆ. ನಿಮ್ಮ ಬಿಸ್ನೆಸ್, ಉದ್ಯಮ, ಸೇವೆ ಸಂಬಂಧ ಜನರು ಮಾಹಿತಿ ಕೇಳಿದರೆ, ನಿಮ್ಮ ಮೊಬೈಲ್ ನಂಬರ್, ವಿಳಾಸ ಅವರ ಜನರ ಕೈಗೆ ತಲುಪಲಿದೆ.

ಇದರಿಂದ ನಿಜಕ್ಕೂ ಲಾಭವಾಗಲಿದೆಯೇ?
ಶಿವಮೊಗ್ಗದಲ್ಲಿ ಮೂರು ತಿಂಗಳು ಫೋನ್ ಡೈರಿಯ ಪ್ರಯೋಗವಾಗಿದೆ. ಆಸ್ಪತ್ರೆಗಳ ವಿವರ, ರೈಲ್ವೆ ಟೈಮಿಂಗ್ಸ್’ಗೆ ಸೀಮಿತವಾಗಿ ನಡೆದ ಪ್ರಯೋಗ, ಹಲವರಿಗೆ ಅನುಕೂಲ ಮಾಡಿಕೊಟ್ಟಿದೆ. ಇನ್ಮುಂದೆ ಇದನ್ನು ಉಳಿದೆಲ್ಲ ಉದ್ಯಮ, ಉದ್ಯೋಗ, ಸೇವೆಗೂ ವಿಸ್ತರಿಸಲಿದ್ದೇವೆ. ಲಕ್ಷ ಓದುಗರಿಗೆ ಸುದ್ದಿ ಜೊತೆಗೆ ನಿಮ್ಮ ಉದ್ಯಮದ ಮಾಹಿತಿಯು ತಲುಪಲಿದೆ. ಹೆಚ್ಚಿನ ಮಾಹಿತಿಗೆ ಈ ನಂಬರ್’ಗೆ ಕಾಂಟ್ಯಾಕ್ಟ್ ಮಾಡಿ 7411700200, 9972194422, 9964634494





ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200