ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 26 JULY 2023
SHIMOGA : ಡಿವಿಎಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ (Lecturer) ಡಾ. ಎಂ.ಜೆ.ವಿಶ್ವನಾಥ್ ಅವರು ಮಂಗಳವಾರ ಬೆಳಗ್ಗೆ ರೈಲಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ. ವಿನೋಬನಗರದ ಅರವಿಂದ ನಗರ ಸಮೀಪ ಘಟನೆ ಸಂಭವಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೂರು ಪ್ರಮುಖಾಂಶಗಳು
ಡಾ ಎಂ.ಜೆ.ವಿಶ್ವನಾಥ್ ಅವರು ದೈಹಿಕ ಶಕ್ಷಣ ಉಪನ್ಯಾಸಕರಾಗಿ 30ಕ್ಕೂ ಹೆಚ್ಚು ವರ್ಷ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು. 2012ರಲ್ಲಿ ನಿವೃತ್ತರಾಗಿದ್ದರು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ತುಂಬುತ್ತಿದ್ದರು. 50ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ತರಬೇತುಗೊಳಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗ ತುಂಗಾ ನದಿ ಹೊಸ ಸೇತುವೆ ಮೇಲಿಂದ ಜಿಗಿದು ಯುವಕನ ಹುಚ್ಚಾಟ, ವಿಡಿಯೋ ವೈರಲ್
ಅಥ್ಲೆಟಿಕ್ಸ್ ವಿಭಾಗದಲ್ಲಿ ಡಾ ಎಂ.ಜೆ.ವಿಶ್ವನಾಥ್ ಅವರನ್ನು ನಡೆದಾಡುವ ಎನ್ಸೈಕ್ಲೋಪೀಡಿಯಾ ಎಂದು ಬಣ್ಣಿಸಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೋಚ್ ಆಗಿದ್ದರು. ಪ್ಯಾರ ಒಲಿಂಪಿಕ್ನಲ್ಲಿಯು ಅವರು ಸೇವೆ ಸಲ್ಲಿಸಿದ್ದರು.
ಕ್ರೀಡಾ ನಿಯಮಗಳು ಮತ್ತು ಕ್ರೀಡೆಯ ಕುರಿತು ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದರು. ಕ್ರೀಡಾ ಆಸಕ್ತರು ಮತ್ತು ಕ್ರೀಡಾಪಟುಗಳ ವಲಯದಲ್ಲಿ ಈ ಪುಸ್ತಕಗಳು ಜನಪ್ರಿಯವಾಗಿದ್ದವು. ಡಾ. ಎಂ.ಜೆ.ವಿಶ್ವನಾಥ್ ಅವರಿಂದ ತರಬೇತಿ ಪಡೆದ ಹಲವರು ಈಗ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕರಾಗಿದ್ದಾರೆ, ಕೋಚ್ಗಳಾಗಿದ್ದಾರೆ.
ಡಾ. ಎಂ.ಜೆ.ವಿಶ್ವನಾಥ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.