SHIVAMOGGA LIVE NEWS | 24 JANUARY 2023
SHIMOGA : ಸೊರಬ ತಾಲೂಕಿನಲ್ಲಿ 2018ರಿಂದ ಈವರೆಗೂ 14 ತಹಶೀಲ್ದಾರ್ಗಳ ವರ್ಗಾವಣೆ ಖಂಡಿಸಿ ರಾಜ್ಯ ಕಂದಾಯ ಇಲಾಖೆ (Revenue Department) ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನೌಕರರ ದಿಢೀರ್ ವರ್ಗಾವಣೆಯಿಂದ ಜನ ಸ್ನೇಹಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನೌಕರರ (Revenue Department) ಕುಟುಂಬದ ಮೇಲೂ ಪರಿಣಾಮ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಸೊರಬ ತಾಲೂಕಿನಲ್ಲಿ ಪ್ರತಿ ತಿಂಗಳು ವರ್ಗಾವಣೆ ಆದೇಶಗಳು ಹೊರ ಬೀಳುತ್ತಿವೆ. ಬಜೆಟ್ ಪೂರ್ವ ಮತ್ತು ಚುನಾವಣೆ ಸಂದರ್ಭ ಯಾವುದೆ ವರ್ಗಾವಣೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ. ಹಾಗಿದ್ದೂ ಸೊರಬ ಶಾಸಕರ ಪತ್ರದ ಉಲ್ಲೇಖ ಹಾಕಿ ಶಿರಸ್ತೇದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಎಫ್.ಡಿ.ಎ ಒಬ್ಬರನ್ನು ಡೆಪ್ಯುಟೇಷನ್ ಮಾಡಲಾಗಿದೆ. ಕಳೆದ 4 ವರ್ಷದಲ್ಲಿ ಸೊರಬ ತಾಲೂಕಿನಲ್ಲಿ 14 ತಹಶೀಲ್ದಾರ್ ಅವರ ವರ್ಗಾವಣೆ ಮಾಡಲಾಗಿದೆ. ಹೀಗೆ ಅಕಾಲಿಕ ವರ್ಗಾವಣೆಯಿಂದ ಸುಗಮ ಆಡಳಿತಕ್ಕೆ ತೊಂದರೆಯಾಗುತ್ತಿದೆ’ ಎಂದು ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಆರೋಪಿಸಿದರು.
‘ಕಂದಾಯ ಇಲಾಖೆಯಲ್ಲಿನ ಈ ಪರಿ ವರ್ಗಾವಣೆಯಾಗುತ್ತಿರುವುದನ್ನು ಕಂಡು ರಾಜ್ಯವೆ ಬೆಚ್ಚಿ ಬಿದ್ದಿದೆ. ತಹಶೀಲ್ದಾರ್ ಗಳು ಯಾವುದಾದರು ತಾಲೂಕಿಗೆ ಹೋಗುಲು ಹೆದರುವಂತಾಗಿದೆ. ಜನಪ್ರತಿನಿಧಿಗಳು ಎಲ್ಲಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ತಾಲೂಕು ಅಭಿವೃದ್ಧಿಯಾಗಲಿದೆ’ ಎಂದು ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಅವರು ತಿಳಿಸಿದರು.
ಸೊರಬ ತಾಲೂಕಿನಲ್ಲಿ ಅಧಿಕಾರಿಗಳ ಅಕಾಲಿಕ ವರ್ಗಾವಣೆ ನಿಲ್ಲಬೇಕು. ಅಲ್ಲದೆ ಈವರೆಗೂ ನಡೆದಿರುವ ವರ್ಗಾವಣೆಗಳ ವಿವರವನ್ನು ಪಡೆದು ಸರ್ಕಾರದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಉಮೇಶ್ ಕುಮಾರ್, ಖಜಾಂಚಿ ಮಹಾರುದ್ರಪ್ಪ ಸೇರಿದಂತೆ ಕಂದಾಯ ಇಲಾಖೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ, ಏನದು? ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200