ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ನವೆಂಬರ್ 2021
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಸ್ತೆ ಮತ್ತು ಸರ್ಕಲ್’ಗೆ ಅವರ ಹೆಸರು ನಾಮಕರಣ ಮಾಡಲಾಗಿದೆ. ಸಾರ್ವಜನಿಕರೆ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಎಂದು ಹೆಸರು ಹಾಕಿ ಬೋರ್ಡ್ ನೆಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ | ‘ತೀರ್ಥಹಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ಮೇಲೆ ಜೇನುಗಳು ದಾಳಿ ಮಾಡಿದ್ದವು, ಸಿನಿಮಾದಲ್ಲಿ ಅದು ಗೊತ್ತಾಗುತ್ತೆ’
ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಪಕ್ಕದ ಚಾನಲ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ಸಾರ್ವಜನಿಕರಗೆ ನಾಮಕರಣ ಮಾಡಿದ್ದಾರೆ. ಇದೆ ಹೆಸರನ್ನು ಅಧಿಕೃತಗೊಳಿಸುವಂತೆ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಹೀರೋ ಆದ್ಮೇಲೆ ಪುನಿತ್ ಮೊದಲ ರಾಜ್ಯ ಪ್ರಶಸ್ತಿ ಪಡೆದಿದ್ದೇ ಶಿವಮೊಗ್ಗದಲ್ಲಿ, ಜಿಲ್ಲೆ ಜೊತೆಗಿತ್ತು ಉತ್ತಮ ನಂಟು
ಲಕ್ಷ್ಮೀ ಟಾಕೀಸ್ ಪಕ್ಕದಲ್ಲಿದ್ದ ಒಂದು ಕಿ.ಮೀ ರಸ್ತೆಯನ್ನು ಚಾನಲ್ ರಸ್ತೆ ಎಂದು ಕರೆಯಲಾಗುತಿತ್ತು. ಪುನೀತ್ ರಾಜಕುಮಾರ್ ಅವರ ಗೌರವಾರ್ಥ ರಸ್ತೆಗೆ ಈ ಹೆಸರನ್ನು ಇಟ್ಟು, ಬೋರ್ಡ್ ಹಾಕಲಾಗಿದೆ. ಸಾರ್ವಜನಿಕರೆ ಈ ಹೆಸರಿಟ್ಟಿದ್ದಾರೆ.
ಸರ್ಕಲ್’ಗೆ ಪುನೀತ್ ಹೆಸರು
ಇನ್ನು ಶಿರವಾಳ ಗ್ರಾಮದಲ್ಲಿ ವೃತ್ತಕ್ಕೆ ನಟ ಪುನೀತ್ ರಾಜಕುಮಾರ್ ಹೆಸರು ಇಡಲಾಗಿದೆ. ಕರ್ನಾಟಕ ರಾಜ್ಯೋತ್ಸವದಂದು ಸರ್ಕಲ್’ಗೆ ಪುನೀತ್ ರಾಜಕುಮಾರ್ ಅವರ ಹೆಸರು ನಾಮಕರಣ ಮಾಡಿ ಗೌರವ ಸಲ್ಲಿಸಲಾಯಿತು. ಗ್ರಾಮಸ್ಥರು ಪುನೀತ್ ರಾಜಕುಮಾರ್ ವೃತ್ತ ಎಂದು ನಾಮಕರಣ ಮಾಡಿ, ಬೋರ್ಡ್ ಹಾಕಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422