SHIVAMOGGA LIVE NEWS | ROAD | 18 ಮೇ 2022
ಅಪಘಾತ 1 – 2021ರ ಜನವರಿ 2ರಂದು ಹರ್ಷ ಫರ್ನ್ ಹೊಟೇಲ್’ನಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಿತು. ಬಂದೋಬಸ್ತ್ ಡ್ಯೂಟಿ ಮುಗಿಸಿ ರಸ್ತೆ (ROAD) ದಾಟುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಕಾರು ಡಿಕ್ಕಿ ಹೊಡೆದಿದೆ. ಪೊಲೀಸ್ ಸಿಬ್ಬಂದಿ ಜುಲ್ಫಿಕರ್ ಸ್ಥಳದಲ್ಲೆ ಸಾವನ್ನಪ್ಪಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಇದನ್ನೂ ಓದಿ – ಕಾರು ಡಿಕ್ಕಿ ಹೊಡೆದು ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಅಂತಿಮ ದರ್ಶನ, ಹಿರಿಯ ಅಧಿಕಾರಿಗಳಿಂದ ಗೌರವ
ಅಪಘಾತ 2 – 2022ರ ಮೇ 15ರಂದು ಗಾಡಿಕೊಪ್ಪ ಸಮೀಪ ತುಂಗಾ ನಾಲೆ ಬಳಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಎಮ್ಮಗಳಿಗೆ ಕಾರು ಡಿಕ್ಕಿ. ಏಳು ಎಮ್ಮೆಗಳು ಸ್ಥಳದಲ್ಲಿ ಸಾವು. ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ಇದನ್ನೂ ಓದಿ – ಗಾಡಿಕೊಪ್ಪ ಬಳಿ ಕಾರು ಡಿಕ್ಕಿ, 7 ಎಮ್ಮೆಗಳು ಸ್ಥಳದಲ್ಲೇ ಸಾವು
ಇವೆರಡು ಅಪಘಾತಗಳು ಸಂಭವಿಸಿದ್ದು ಶಿವಮೊಗ್ಗದ ಸಾಗರ ರಸ್ತೆಯಲ್ಲಿ. ಇವೆರಡು ಘಟನೆಗಳು ದೊಡ್ಡ ಸುದ್ದಿಯಾದವು. ಆದರೆ ಸುದ್ದಿಯಾಗದೆ ಹೋದ ಘಟನೆಗಳು ಅನೇಕ.
ಸಾಗರ ರಸ್ತೆ ಡೇಂಜರ್ ಡೇಂಜರ್
ವಾಹನ ಸವಾರರು, ಪಾದಚಾರಿಗಳು, ಪ್ರಾಣಿಗಳ ಪಾಲಿಗೆ ಸಾಗರ ರಸ್ತೆ ಅತ್ಯಂತ ಅಪಾಯಕಾರಿಯಾಗಿದೆ. ಕತ್ತಲಾಗುತ್ತಿದ್ದಂತೆ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸುಲಭದ ಸಂಗತಿಯಲ್ಲ. ಚಾಲಕರು ಮಯ್ಯಲ್ಲ ಕಣ್ಣಾಗಿಸಿರಿಸಿಕೊಳ್ಳಬೇಕಿದೆ. ಸ್ವಲ್ಪ ಯಾಮಾರಿದರೂ ಅಪಾಘಾತ ಸಂಭವಿಸುತ್ತದೆ. ಪ್ರಾಣ ಹಾನಿಯು ಆಗಬಹುದಾಗಿದೆ.
ಡಿವೈಡರ್ ಇದ್ದರೂ ಅಪಘಾತ
ಸಾಗರ ರಸ್ತೆಯಲ್ಲಿ ಹತ್ತು ಕಿ.ಮೀ ದೂರದವರೆಗೂ ಡಿವೈಡರ್ ನಿರ್ಮಿಸಲಾಗಿದೆ. ಶಿವಮೊಗ್ಗ ನಗರದ ಅಶೋಕ ಸರ್ಕಲ್’ನಿಂದ ತ್ಯಾವರೆಕೊಪ್ಪ ಹುಲಿ ಸಿಂಹಧಾಮದವರೆಗೆ ಡಿವೈಡರ್ ಇದೆ. ಎರಡು ಬದಿಯಲ್ಲೂ ವಾಹನಗಳು ಸರಾಗವಾಗಿ ಹೋಗುವಷ್ಟು ಅಗಲವಾದ ರಸ್ತೆ ನಿರ್ಮಾಣ ಮಾಡಲಾಗಿದೆ. ಹೀಗಿದ್ದೂ ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿದೆ ಬದಲಾಗಿದೆ.
ರಾತ್ರಿಯಂತೂ ಏನೇನೂ ಕಾಣಿಸಲ್ಲ
ಡಿವೈಡರ್ ಅಳವಡಿಸಿ, ಸುಸಜ್ಜಿತ ರಸ್ತೆ ನಿರ್ಮಾಣವಾಗಿದ್ದರೂ ರಾತ್ರಿ ವೇಳೆ ಈ ಸಾಗರ ರಸ್ತೆಯಲ್ಲಿ ವಾಹನ ಚಾಯಿಸುವುದು ಸುಲಭದ ಮಾತಲ್ಲ. ವಾಹನದ ಹೆಡ್ ಲೈಟ್ ಎಷ್ಟೆ ಶಕ್ತಿಶಾಲಿಯಾಗಿದ್ದರೂ ಎದುರಿಗೆ ಯಾರೆ ಬಂದರೂ ಗೊತ್ತಾಗುವುದಿಲ್ಲ. ರಾತ್ರಿ ವೇಳೆ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ.
ಒಂದೇ ಒಂದು ಲೈಟ್ ಇಲ್ಲ
ಹತ್ತು ಕಿ.ಮೀ ಡಿವೈಡರ್ ಹಾಕಿದ್ದರೂ ರಾತ್ರಿಯಾದರೆ ರಸ್ತೆ ಮೇಲೆ ಸಂಪೂರ್ಣ ಕತ್ತಲು ಕವಿಯುತ್ತದೆ. ಡಿವೈಡರ್ ಮೇಲೆ ಒಂದೇ ಒಂದು ಲೈಟ್ ಕಂಬವಿಲ್ಲ. ರಸ್ತೆ ಇಕ್ಕೆಲಗಳಲ್ಲೂ ವಿದ್ಯುತ್ ದೀಪ ಅಳವಡಿಸಿಲ್ಲ. ಹಾಗಾಗಿ ರಸ್ತೆ ದಾಟುವವರು, ರಸ್ತೆ ಮಧ್ಯೆ ಇರುವ ಪ್ರಾಣಿಗಳು ವಾಹನ ಚಾಲಕರ ಗಮನಕ್ಕೆ ಬರುವಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ.
ಸಾಗರ ರಸ್ತೆಯಲ್ಲಿ ಅಪಘಾತಕ್ಕೇನು ಕಾರಣ?
ಅಪಘಾತಕ್ಕೆ ಕಾರಣ 1 – ರಸ್ತೆ ಸುಸಜ್ಜಿತ ಮತ್ತು ಅಗಲವಾಗಿದೆ. ಎರಡು ಬದಿಯಲ್ಲೂ ವಾಹನಗಳು ವೇಗವಾಗಿ ಸಾಗಬಹುದಾಗಿದೆ. ರಾತ್ರಿ ವೇಳೆಯು ವಾಹನಗಳು ವೇಗವಾಗಿ ಚಲಿಸುತ್ತವೆ. ಯಾರೆ ಎದುರಿಗೆ ಬಂದರೂ ತಕ್ಷಣಕ್ಕೆ ಗೊತ್ತಾಗುವುದಿಲ್ಲ.
ಅಪಘಾತಕ್ಕೆ ಕಾರಣ 2 – ಡಿವೈಡರ್ ಮೇಲೆ ಒಂದೆ ಒಂದು ಲೈಟ್ ಇಲ್ಲ. ಕತ್ತಲಲ್ಲಿ ಜನರು ಕಾಣುವುದಿಲ್ಲ. ಪ್ರಾಣಿಗಳು ಗೋಚರಿಸುವುದಿಲ್ಲ. ಹತ್ತಿರಕ್ಕೆ ಬಂದಾಗ ವಾಹನ ನಿಯಂತ್ರಣ ಮಾಡಲು ಕಷ್ಟ.
ಅಪಘಾತಕ್ಕೆ ಕಾರಣ 3 – ರಸ್ತೆ ದಾಟುವವರು ಗೊಂದಲಕ್ಕೀಡಾಗಿ ವಾಹನ ಚಾಲಕರಲ್ಲಿ ಗೊಂದಲ ಉಂಟು ಮಾಡುತ್ತಾರೆ. ಹಠಾತ್ ನಡುರಸ್ತೆಗೆ ಬರುತ್ತಾರೆ.
ಅಪಘಾತಕ್ಕೆ ಕಾರಣ 4 – ವಾಹನಗಳ ಹೈ ಬೀಮ್ ಲೈಟುಗಳು ಕೂಡ ಅಪಘಾತ ಉಂಟು ಮಾಡುತ್ತಿವೆ. ಚಾಲಕರು ವಾಹನಗಳ ಲೈಟುಗಳ ಡಿಮ್, ಡಿಪ್ ಮಾಡದಿರುವುದರಿಂದ ಎದುರಿನ ವಾಹನಗಳ ಚಾಲಕರಿಗೆ ರಸ್ತೆ ಕಾಣಿಸುವುದಿಲ್ಲ. ಅಲ್ಲದೆ ರಸ್ತೆ ಮೇಲೆ ಜನರ, ಜಾನುವಾರುಗಳಿದ್ದರು ಗೊತ್ತಾಗುವುದಿಲ್ಲ.
ಏನಂತಾರೆ ವಾಹನ ಚಾಲಕರು?
‘ಪ್ರಾಣದ ಮೇಲೆ ಆಸೆ ಬಿಟ್ಟು ಬಸ್ ಓಡಿಸಬೇಕು. ಎದುರಿಗೆ ಏನಿದೆ ಗೊತ್ತಾಗುವುದಿಲ್ಲ. ಎಲ್ಲೆಲ್ಲೂ ವೇಗ ನಿಯಂತ್ರಕ ಹಂಪ್ ಇಲ್ಲ. ವಾಹನಗಳು ವೇಗವಾಗಿರುತ್ತವೆ. ರಸ್ತೆ ದಾಟುವವರು, ಅಕ್ಕಪಕ್ಕದ ಲೇಔಟ್, ಹೊಟೇಲ್’ಗಳಿಂದ ಜನರು, ವಾಹನಗಳು ದಿಢೀರ್ ಬರುತ್ತವೆ. ರಾತ್ರಿ ಹೊತ್ತಲ್ಲಂತು ಏನೇನು ಗೊತ್ತಾಗುವುದಿಲ್ಲ’ ಅನ್ನುತ್ತಾರೆ ಬಸ್ ಚಾಲಕ ಮಂಜುನಾಥ್.
‘ರಾತ್ರಿ ಹೊತ್ತಲ್ಲಿ ಬೈಕ್ ಓಡಿಸುವುದಕ್ಕೆ ಭಯವಾಗುತ್ತದೆ. ಆಯನೂರು ತಲುಪಿದರೆ ಮನೆ ತಲುಪುತ್ತೇವೆ ಎಂಬ ನಂಬಿಕೆ ಮೂಡುತ್ತದೆ. ಇಡೀ ರಸ್ತೆಯಲ್ಲಿ ಹತ್ತಾರು ಅಪಘಾತ ವಲಯಗಳಿವೆ’ ಅನ್ನುತ್ತಾರೆ ಬೈಕ್ ಸವಾರ ಹರ್ಷ.
ಸಾಗರ ರಸ್ತೆಯಲ್ಲಿ ಡಿವೈಡರ್’ಗಳ ಮೇಲೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿದೆ. ಇಲ್ಲವಾದರೆ ಕತ್ತಲಾಗುತ್ತಿದ್ದಂತೆ ಈ ರಸ್ತೆ ಮತ್ತಷ್ಟು ಯಮಸ್ವರೂಪಿಯಾಗಲಿದೆ. ಇನ್ನಷ್ಟು ಅಪಘಾತಗಳು, ಪ್ರಾಣ ಹಾನಿ ಸಂಭವಿಸುವ ಸಾದ್ಯತೆ ಇದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕಿದೆ.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.