ಶಿವಮೊಗ್ಗದಲ್ಲಿ ಸಚಿವ ಸಂತೋಷ್‌ ಲಾಡ್‌, ವಾರ್‌ ರೂಂಗೆ ಭೇಟಿ, ಏನೆಲ್ಲ ಹೇಳಿದರು? ಇಲ್ಲಿದೆ 5 ಪಾಯಿಂಟ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 30 APRIL 2024

ELECTION NEWS : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪರ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ, ವಿಜಯೇಂದ್ರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲಾಡ್‌ ಪತ್ರಿಕಾಗೋಷ್ಠಿಯ 5 ಪ್ರಮುಖಾಂಶ

POINT-1ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳು ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳೇ ಕಾಂಗ್ರೆಸ್ ಗೆಲುವಿಗೆ ಸಹಕಾರಿ. ದೇಶ ಕಂಡ 14 ಪ್ರಧಾನಿಗಳಲ್ಲಿ ಈ ರೀತಿ ಸುಳ್ಳು ಹೇಳುವವರನ್ನು ನೋಡಿಯೇ ಇಲ್ಲ. ಹತ್ತು ವರ್ಷ ಅಧಿಕಾರ ನಡೆಸಿದ ನರೇಂದ್ರ ಮೋದಿಗೆ ಮತ ಕೇಳಲು ವಿಷಯಗಳೇ ಇಲ್ಲದಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಮುಸ್ಲಿಮರು ಮತ್ತು ರಾಮಮಂದಿರ ಬಿಟ್ಟರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ.


POINT-210 ವರ್ಷದ ಅವಧಿಯಲ್ಲಾದ ಕೆಲಸಗಳ ಆಧಾರದ ಮೇಲೆ ಮತ ಕೇಳಲು ಅವರಿಗೆ ಆಗುತ್ತಿಲ್ಲ. 70 ವರ್ಷ ದೇಶದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಯಾರ ಮಂಗಳಸೂತ್ರವನ್ನೂ ಕಿತ್ತು ಮಾರಾಟ ಮಾಡಿಲ್ಲ. 2014ರಲ್ಲಿ ಒಂದು ತೊಲ ಬಂಗಾರದ ಬೆಲೆ 24 ಸಾವಿರ ರೂ. ಇತ್ತು. ಇಂದು 75 ಸಾವಿರ ರೂ. ಆಗಿದೆ. ಗ್ಯಾಸ್ ದರ 400 ಇದ್ದಿದ್ದು ಒಂದು ಸಾವಿರ ರೂ. ಆಗಿದೆ. ಈ ಬಗ್ಗೆ ಪ್ರಧಾನಿ ಉತ್ತರ ಕೊಡಬೇಕಿದೆ.


POINT-310 ವರ್ಷ ಪ್ರಧಾನಿ ಆಗಿದ್ದವರು ಈ ದೇಶದಲ್ಲಿ ಹಿಂದುಗಳು ಸಂಕಷ್ಟದಲ್ಲಿದ್ದಾರೆಂದು ಹೇಳುತ್ತಿರುವುದು ದುರದೃಷ್ಟಕರ. ಅವರೇ 10 ವರ್ಷ ಆಡಳಿತ ಮಾಡಿದರೂ ಹಿಂದುಗಳು ಯಾಕೆ ಆತಂಕದಲ್ಲಿದ್ದಾರೆ? ಕೇವಲ ಬಟ್ಟೆ ಬದಲಿಸಿಕೊಂಡು ಸುಳ್ಳು ಭಾಷಣ ಮಾಡಿದರೆ ದೇಶ ಉದ್ಧಾರ ಆಗುವುದಿಲ್ಲ.


POINT-4ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಒಟ್ಟು 117 ಪತ್ರಿಕಾಗೋಷ್ಠಿ ನಡೆಸಿದ್ದರು. ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಇವರ ಮಾಧ್ಯಮ ನಿರ್ವಹಣೆಗೆ 6,500 ಕೋಟಿ ರೂ. ವ್ಯಯ ಮಾಡಲಾಗಿದೆ. ಅವರು ತಮಗೆ ಬೇಕಾದಂತೆ ಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ಪತ್ರಿಕಾಗೋಷ್ಠಿ ನಡೆಸಬೇಕು. ಅಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಂವಾದ, ಚರ್ಚೆಗಳನ್ನು ಮಾಡಬೇಕು.


POINT-5ವಿಜಯೇಂದ್ರ ಅವರು ನನಗೆ ನಾಲಾಯಕ್ ಎಂದರೆ ತೊಂದರೆ ಇಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರಿಗೆ ನಾಲಾಯಕ್ ಎಂದಿದ್ದು ಬೇಜಾರು ತರಿಸಿತು. ನನ್ನ ಪ್ರಶ್ನೆಗಳನ್ನು ಅರಗಿಸಿಕೊಳ್ಳಲು ಅವರಿಗೆ ಆಗಿಲ್ಲ. ನನಗೆ ನಾಲಾಯಕ್ ಎನ್ನಲು ವಿಜಯೇಂದ್ರಗೆ ಯಾವ ಅರ್ಹತೆ ಇದೆ? ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗುವುದಕ್ಕೂ ಮುನ್ನ ಕೇಂದ್ರ ಸರ್ಕಾರ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಬೇಕಿತ್ತು. ಹಲವು ಹೆಣ್ಣುಮಕ್ಕಳ ಜತೆ ಅಶ್ಲೀಲವಾಗಿ ನಡೆದುಕೊಂಡಿರುವುದು ದುರದೃಷ್ಟಕರ.

ವಾರ್‌ ರೂಂಗೆ ಭೇಟಿ

Santosh Lad visits Congress war room

ಕಲ್ಲಹಳ್ಳಿಯಲ್ಲಿ ಕಾಂಗ್ರೆಸ್‌ ಪಕ್ಷದ ಲೋಕಸಭೆ ಚುನಾವಣೆ ವಾರ್‌ ರೂಂ ಸ್ಥಾಪಿಸಲಾಗಿದೆ. ಸಚಿವ ಸಂತೋಷ್‌ ಲಾಡ್‌ ಅವರು ಕಾಂಗ್ರೆಸ್‌ ವಾರ್‌ ರೂಂಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸಿದರು. ಕೆಪಿಸಿಸಿ ವಕ್ತಾರ ಅನಿಲ್‌ ತಡಕಲ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಇದ್ದರು.

ಇದನ್ನೂ ಓದಿ – ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಹೆಚ್‌.ಡಿ.ಕುಮಾರಸ್ವಾಮಿ ಪ್ರಚಾರ, ಎಲ್ಲೆಲ್ಲಿ ಸಭೆ ನಡೆಸಿದರು? ಏನೆಲ್ಲ ಹೇಳಿದರು?

Leave a Comment