ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಅಕ್ಟೋಬರ್ 2021
ಈಶ್ವರಪ್ಪ ಅವರ ಹಿಂದೆ ಆರ್‌ಎಸ್‌ಎಸ್ ಇದೆ. ಅವರ ಬಗ್ಗೆ ಮಾತನಾಡುವವರು ಎಚ್ಚರಿಕೆಯಿಂದ ಇರಬೇಕು. ರಾಜ್ಯ, ದೇಶದಲ್ಲಿ ಧರ್ಮವನ್ನು ಕಾಪಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ದೇಶಕ್ಕೋಸ್ಕರ ಹೇಗೆ ಬದುಕಬೇಕು ಹಾಗೂ ತಂದೆ-ತಾಯಿಯ ಋಣವನ್ನು ಹೇಗೆ ತೀರಿಸಬೇಕು ಎಂಬುದನ್ನು ಕಲಿಸುತ್ತಿದೆ ಎಂದು ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದರು
ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಶ್ರೀ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಪ್ರೈ.ಲಿ., ಶ್ರೀಗಂಧ ಸಂಸ್ಥೆ ಮತ್ತು ಶ್ರೀ ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್ ಸಹಯೋಗದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸತ್ಯ ಮತ್ತು ಅಹಿಂಸೆಯು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸತ್ಯ ಇರುವಲ್ಲಿ ಅಹಿಂಸೆಯೂ ನೆಲೆಸಲಿದೆ. ಸತ್ಯದ ಮಾರ್ಗ ಸುಖ ಜೀವನಕ್ಕೆ ನಾಂದಿ ಹಾಡಲಿದೆ. ಅಹಿಂಸೆಯು ಮನುಷ್ಯನ ಶಕ್ತಿಯನ್ನು ಪರೀಕ್ಷಿಸುತ್ತದೆ. ಈ ಎರಡೂ ಇಟ್ಟುಕೊಂಡು ಬದುಕು ಸಾಗಿಸಿದರೆ ಮುಂದಿನ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಹೇಳಿದರು.
ಜೀವನದಲ್ಲಿ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಗುಣಗಳಿವೆ. ಇಲ್ಲಿ ದೊಡ್ಡವರು, ಸಣ್ಣವರೆಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಕಲಿಕೆಗೆ ವಯಸ್ಸಿನ ಮಿತಿಯೂ ಇರುವುದಿಲ್ಲ ಎಂದ ಅವರು, ಜನಸೇವೆ, ತಂದೆ-ತಾಯಿ ಸೇವೆ ಮಾಡುವುದರಿಂದ ದೇವರನ್ನೇ ಒಲಿಸಿಕೊಳ್ಳಬಹುದು ಎಂದರು.
ಮಾರಿಕಾಂಬಾ ಸಂಸ್ಥೆ ಅಧ್ಯಕ್ಷ, ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾರಿಕಾಂಬಾ ಸಂಸ್ಥೆ ಖಜಾಂಚಿ ಕೆ.ಇ.ಕಾಂತೇಶ್, ಜ್ಯೋತಿಷಿ ಡಾ. ಶ್ರೀ ಮಹರ್ಷಿ ಆನಂದ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಸಣ್ಣ ಕೈಗಾರಿಕೆ ಸಂಘದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಎನ್.ಜೆ.ರಾಜಶೇಖರ್, ಸತ್ಯವತಿ, ಜಯಲಕ್ಷ್ಮೀ ಉಪಸ್ಥಿತರಿದ್ದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಶಿವಮೊಗ್ಗದ 100ಕ್ಕೂ ಅಧಿಕ ದಂಪತಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422