ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣೆಗೆ 38 ನಾಮಪತ್ರಗಳು ಸಲ್ಲಿಕೆಯಾಗಿವೆ. ವಿವಿಧ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರವಾಗಿ ಸ್ಪರ್ಧೆಗೆ 27 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇವತ್ತು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅಭ್ಯರ್ಥಿಗಳಿಗೆ ನಿರ್ಣಾಯಕ ದಿನ
ನಾಮಪತ್ರ ಸಲ್ಲಿಸಿರುವ 27 ಅಭ್ಯರ್ಥಿಗಳಿಗೆ ಇವತ್ತು ನಿರ್ಣಾಯಕ ದಿನ. ಚುನಾವಣಾ ಅಧಿಕಾರಿಗಳು ಇವತ್ತು ನಾಮಪತ್ರ ಪರಿಶೀಲನೆ ಕಾರ್ಯ ನಡೆಸಲಿದ್ದಾರೆ. ಕ್ರಮಬದ್ಧವಾಗಿರುವ ನಾಮಪತ್ರಗಳನ್ನು ಮಾತ್ರ ಚುನಾವಣಾ ಅಧಿಕಾರಿಗಳು ಪುರಸ್ಕರಿಸಲಿದ್ದಾರೆ. ಇಲ್ಲವಾದಲ್ಲಿ ನಾಮಪತ್ರ ತಿರಸ್ಕೃತಗೊಳ್ಳಲಿದೆ. ಇಂತಹ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹೊರಗುಳಿಯಬೇಕಾಗುತ್ತದೆ.
ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ?
ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ನಿಂದ ಗೀತಾ ಶಿವರಾಜ್ ಕುಮಾರ್, ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ, ಅಖಿಲ ಭಾರತ ಹಿಂದೂ ಮಹಾಸಭಾದಿಂದ ಚಂದ್ರಶೇಖರ ಹೆಚ್.ಸಿ, ಬಹುಜನ ಮುಕ್ತಿ ಪಾರ್ಟಿಯ ಜಯದೇವ ಜಿ, ಯಂಗ್ಸ್ಟರ್ ಎಂಪವರ್ಮೆಂಟ್ ಪಾರ್ಟಿಯ ಮೊಹಮ್ಮದ್ ಯುಸುಫ್ ಖಾನ್, ಬಹುಜನ ಸಮಾಜ ಪಾರ್ಟಿಯ ಎ.ಡಿ.ಶಿವಪ್ಪ, ಕರ್ನಾಟಕ ರಾಷ್ಟ್ರ ಸಮಿತಿಯ ಎಸ್.ಕೆ.ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ಕೆ.ಎ, ಆಮ್ ಆದ್ಮಿ ಪಕ್ಷದ ಸುಭಾನ್ ಖಾನ್ ನಾಮಪತ್ರ ಸಲ್ಲಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳಾದ ಹನುಮಂತಪ್ಪ, ಶೇಖರಪ್ಪ ಹೆಚ್, ವೈ.ಆರ್. ಬಂಡಿ ರಂಗನಾಥ, ಸಂದೇಶ ಶೆಟ್ಟಿ, ಎಸ್.ಬಾಲಕೃಷ್ಣ ಭಟ್, ಡಿ.ಎಸ್.ಈಶ್ವರಪ್ಪ , ಪಿ.ಶ್ರೀಪತಿ, ಇಮ್ತಿಯಾಜ್ ಅತ್ತಾರ್, ರವಿಕುಮಾರ್.ಎನ್, ಪೂಜಾ ಎನ್.ಅಣ್ಣಯ್ಯ, ಹೆಚ್. ಸುರೇಶ್ ಪೂಜಾರಿ, ಶಿವರುದ್ರಯ್ಯ ಸ್ವಾಮಿ, ಜಾನ್ ಬೆನ್ನಿ, ಶಶಿಕುಮಾರ್ ಬಿ.ಕೆ., ಗಣೇಶ್ .ಬಿ, ಕುಣಜೆ ಮಂಜುನಾಥಗೌಡ, ಎನ್.ವಿ.ನವೀನ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ – ಪಿಯುಸಿ ನಂತರ ಮುಂದೇನು? ಕಾಮರ್ಸ್ ವಿದ್ಯಾರ್ಥಿಗಳಿಗೆ ಶಿವಮೊಗ್ಗದಲ್ಲಿ ಉಚಿತ ಕಾರ್ಯಾಗಾರ, ಎಲ್ಲಿ? ಯಾವಾಗ?