ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 AUGUST 2023
SHIMOGA : ನಗರಕ್ಕೆ ಆಗಮಿಸಿರುವ ಟಿ-55 ಯುದ್ಧ ಟ್ಯಾಂಕರ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಟ್ಯಾಂಕರ್ (Battle Tanker) ಸುತ್ತಲು ಕಬ್ಬಿಣದ ಬೇಲಿ ಹಾಕಲಾಗಿದೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದಲ್ಲಿ ಯುದ್ಧ ಟ್ಯಾಂಕರ್ (Battle Tanker) ಸ್ಮಾರಕ ನಿರ್ಮಾಣಕ್ಕೆ 1971ರ ಯುದ್ಧದಲ್ಲಿ ಪಾಲ್ಗೊಂಡಿದ್ದ ಟಿ-55 ಮಾದರಿಯ ಟ್ಯಾಂಕರ್ ತರಲಾಗಿದೆ. ವಿದ್ಯುತ್ ನಿಗಮದ ಕ್ವಾರ್ಟರ್ಸ್‌ನಲ್ಲಿ ಇದನ್ನು ಇರಿಸಲಾಗಿದೆ. ವಿಚಾರ ತಿಳಿದು ಹೆಚ್ಚಿನ ಸಂಖ್ಯೆ ಜನರು ಟ್ಯಾಂಕರ್ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಹಾಗಾಗಿ ಟ್ಯಾಂಕರ್‌ನ ಸುರಕ್ಷತೆ ದೃಷ್ಟಿಯಿಂದ ಸುತ್ತಲು ಕಬ್ಬಿಣದ ಬೇಲಿ ನಿರ್ಮಿಸಲಾಗಿದೆ.
ಹೇಗಿದೆ ರಕ್ಷಣೆ?
ಟ್ಯಾಂಕರ್ ನಿಲ್ಲಿಸಲು ಸಿಮೆಂಟ್ ಹಾಕಲಾಗಿದೆ. ಅದರ ಸುತ್ತಲು ಕಬ್ಬಿಣ ಚೈನ್ ಲಿಂಕ್ ಫೆನ್ಸ್ ಅಳವಡಿಸಲಾಗಿದೆ. ಬಿಸಿಲು, ಮಳೆಗೆ ಟ್ಯಾಂಕರ್ ತುಕ್ಕು ಹಿಡಿಯುವುದನ್ನು ತಪ್ಪಿಸಲು ಶೀಟ್ ಹಾಕಲಾಗಿದೆ. ಎಂಆರ್‌ಎಸ್ ಸರ್ಕಲ್‌ನಿಂದ ವಿದ್ಯುತ್ ಪ್ರಸರಣ ನಿಗಮದ ಕ್ವಾಟರ್ಸ್ ಒಳಗೆ ಟ್ಯಾಂಕರ್ ತರಲು ಕೌಂಪೌಡ್ ತೆರವು ಮಾಡಲಾಗಿತ್ತು. ಈಗ ಕಾಂಪೌಂಡ್ ಅನ್ನು ಪುನರ್ ನಿರ್ಮಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಭಾರತ – ಪಾಕ್ ಯುದ್ದದಲ್ಲಿ ಭಾಗಿಯಾದ ಟ್ಯಾಂಕರ್, ಸದ್ಯದಲ್ಲೇ ಬರುತ್ತೆ ಫೈಟರ್ ವಿಮಾನ, ಯಾಕೆ?
ಯುದ್ದ ವಿಮಾನವು ಬರಲಿದೆ
ಇನ್ನು, ಶಿವಮೊಗ್ಗದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದರ ಬಿ.ವೈ.ರಾಘವೇಂದ್ರ, ‘ಯುದ್ದ ವಿಮಾನ ಒಂದನ್ನು ಕೇಳಿದ್ದೇವೆ. ಅದು ಕೂಡ ಸದ್ಯದಲ್ಲೇ ಅಗಮಿಸಲಿದೆ’ ಎಂದು ತಿಳಿಸಿದರು. ಸಂಸದ ರಾಘವೇಂದ್ರ ಹೇಳಿದ್ದೇನು? ಇಲ್ಲಿದೆ ಪೂರ್ತಿ ವಿಡಿಯೋ.
View this post on Instagram
ಫೋಟೊಗಾಗಿ ಬರ್ತಿದ್ದಾರೆ ಜನ
ಯುದ್ಧ ಟ್ಯಾಂಕರ್ ಅನ್ನು ಸಮೀಪದಿಂದ ಕಾಣುವ ಕುತೂಹಲ, ಅದರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಆಸೆಯಿಂದ ಜನರು ಬರುತ್ತಿದ್ದಾರೆ. ಕ್ವಾರ್ಟರ್ಸ್ ಒಳಗೆ ಬಂದು ಟ್ಯಾಂಕರ್ ಸಮೀಪ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಟ್ಯಾಂಕರ್ ಅನ್ನು ಹತ್ತಿರದಿಂದ ಕಂಡು ಖುಷಿ ಪಡುತ್ತಿದ್ದಾರೆ. ಎಂಆರ್‌ಎಸ್ ಸರ್ಕಲ್‌ನಲ್ಲಿ ಬಸ್ಸಿಗಾಗಿ ಕಾಯುವವರು ಕೂಡ ಟ್ಯಾಂಕರ್ ಅನ್ನು ಸಮೀಪದಿಂದ ಕಾಣಬಹುದಾಗಿದೆ. ವಿದ್ಯಾರ್ಥಿಗಳು ಕೌಂಪೌಂಡ್ ಬಳಿ ನಿಂತು ಟ್ಯಾಂಕರ್ ವೀಕ್ಷಿಸುತ್ತಿದ್ದಾರೆ.