ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 4 ಜನವರಿ 2020
ಜೀವ ಬೆದರಿಕೆ ಕರೆ ಬಂದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಭದ್ರತೆ ಹೆಚ್ಚಿಸಲಾಗಿದೆ. ವಿಶೇಷ ಗನ್ ಮತ್ತು ಹೆಚ್ಚುವರಿ ಅಂಗ ರಕ್ಷಕನನ್ನು ಸರ್ಕಾರ ಒದಗಿಸಿದೆ.
ವಿಶೇಷ ಗನ್, ಪ್ರತ್ಯೇಕ ಅಂಗ ರಕ್ಷಕ
ಈವರೆಗೂ ಸಚಿವ ಈಶ್ವರಪ್ಪ ಅವರಿಗೆ ಎಸ್ಕಾರ್ಟ್ ಮತ್ತು ಗನ್ ಮ್ಯಾನ್ ಒದಗಿಸಲಾಗಿತ್ತು. ಬೆದರಿಕೆ ಕರೆ ಬಂದ ಹಿನ್ನೆಲೆ, ಹೆಚ್ಚುವರಿ ಅಂಗ ರಕ್ಷಕನನ್ನು ಒದಗಿಸಲಾಗಿದೆ. ಈ ಅಂಗ ರಕ್ಷಕನಿಗೆ ಎಕ್ಸ್ ಕ್ಯಾಲಿಬರ್ ಮೆಷಿನ್ ಗನ್ ಒದಗಿಸಲಾಗಿದೆ.
ಬೆದರಿಕೆ ಕರೆ ಕುರಿತು ಸಚಿವರು ಹೇಳಿದ್ದೇನು?
ಇನ್ನು, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ‘ಅಪ್ತ ಸಹಾಯಕ ಸಂತೋಷ್ ಬಳಿ ಫೋನ್ ಇತ್ತು. ಈ ವೇಳೆ ಒಂದು ಮಿಸ್ಡ್ ಕಾಲ್ ಬಂದಿದೆ. ಅದು ತಮಿಳುನಾಡು ಮೂಲದ್ದು ಎಂದು ಈಗ ತಿಳಿದು ಬಂದಿದೆ. ಆ ಬಳಿಕ ಮತ್ತೊಂದು ಕರೆ ಬಂದಿದ್ದು, ಹಿಂದಿ, ತಮಿಳು, ಉರ್ದು ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದಾನೆ. ಸಿಎಎ ಮತ್ತು 370ನೇ ವಿಧಿ ಕುರಿತು ಈಶ್ವರಪ್ಪ ಅವರು ಮಾತನಾಡಬಾರದು. ಇನ್ಮುಂದೆ ಈ ವಿಚಾರವಾಗಿ ಮಾತನಾಡಿದರೆ 48 ಗಂಟೆಯಲ್ಲಿ ಮುಗಿಸಿಬಿಡ್ತೀವಿ’ ಅಂತಾ ಬೆದರಿಕೆ ಒಡ್ಡಿದ್ದಾನೆ ಎಂದರು.
ಬೆದರಿಕೆಗೆ ಬಗ್ಗೋದಿಲ್ಲ..
‘ಈ ಹಿಂದೆ ದುಬೈನಿಂದ ಬೆದರಿಕೆ ಕರೆ ಬಂದಿತ್ತು. ಆದರ ಕುರಿತು ದೂರು ನೀಡಿದ್ದೆ. ಈಗ ಮತ್ತೊಂದು ಬೆದರಿಕೆ ಕರೆ ಬಂದಿದೆ. ಇದಕ್ಕೆಲ್ಲ ನಾನು ಬಗ್ಗುವುದಿಲ್ಲ. ಸಂಘಟನೆ ಕೆಲಸ ಮಾಡಿಯೇ ಮಾಡುತ್ತೇನೆ. ಕರೆ ಬಂದಿರುವ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ತಿಳಿಸಿದ್ದೇನೆ. ಎಡಿಜಿಪಿ ಕಮಲ್ ಪಂತ್, ಗೃಹ ಸಚಿವರಿಗೂ ಮಾಹಿತಿ ನೀಡಿದ್ದೇನೆ. ರಕ್ಷಣೆಗೆ ಹೆಚ್ಚುವರಿ ವ್ಯವಸ್ಥೆ ಮಾಡಿದ್ದಾರೆ’ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422